
ಮುಂಬೈ(ಏ.03): ಹ್ಯಾಟ್ರಿಕ್ ಜಯಭೇರಿ ಬಾರಿಸಿ ಗೆಲುವಿನ ನಾಗಾಲೋಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಓಟಕ್ಕೆ ಬ್ರೇಕ್ ಬಿದ್ದಿದೆ. ತವರಿನಲ್ಲಿ CSK ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 37 ರನ್ ಗೆಲುವು ಸಾಧಿಸಿದೆ. ಈ ಮೂಲಕ ಮುಂಬೈ ಸೋಲಿನಿಂದ ಹೊರಬಂದಿದೆ. ಆದರೆ 4ನೇ ಗೆಲುವಿನ ವಿಶ್ವಾಸದಲ್ಲಿದ್ದ CSKಗೆ ಆಘಾತವಾಗಿದೆ.
ಗೆಲುವಿಗೆ 171 ರನ್ ಟಾರ್ಗೆಟ್ ಪಡೆದ CSK ಮೊದಲ ಓವರ್‌ನಲ್ಲೇ ಆಘಾತ ಅನುಭವಿಸಿತು. ಅಂಬಾಟಿ ರಾಯುಡು ಶೂನ್ಯಕ್ಕೆ ಔಟಾದರು. ಇನ್ನು ಶೇನ್ ವ್ಯಾಟ್ಸನ್ ಕೇವಲ 4 ರನ್ ಸಿಡಿಸಿ ಔಟಾದರು. 6 ರನ್‌ಗಳಿಗೆ 2 ವಿಕೆಚ್ ಕಳೆದುಕೊಂಡ CSKಗೆ ಸುರೇಶ್ ರೈನಾ ಆಸರೆಯಾದರು. ಆದರೆ ರೈನಾ 26 ರನ್ ಸಿಡಿಸಿ, ಕೀರನ್ ಪೋಲಾರ್ಡ್ ಹಿಡಿದ ಅದ್ಬುತ ಕ್ಯಾಚ್‌ನಿಂದ ಪೆವಿಲಿಯನ್ ಸೇರಿಕೊಂಡರು.
ಕೇದಾರ್ ಜಾಧವ್ ಹಾಗೂ ನಾಯಕ ಎಂ.ಎಸ್.ಧೋನಿ ಜೊತೆಯಾಟ ನೀಡೋ ಮೂಲಕ ಚೇತರಿಕೆ ನೀಡಿದರು. ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಧೋನಿ 20 ಎಸೆತದಲ್ಲಿ 12 ರನ್ ಸಿಡಿಸಿ ಔಟಾದರು. ಧೋನಿ ಬೆನ್ನಲ್ಲೇ ರವೀಂದ್ರ ಜಡೇಜಾ 1 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಕೇದಾರ್ ಜಾಧವ್ ಅರ್ಧಶತಕ ಸಿಡಿಸಿ CSKಗೆ ನೆರವಾದರು.
ಕೇದಾರ್ ಜಾಧವ್ 58 ರನ್ ಸಿಡಿಸಿ ಔಟಾದರು. ಅಷ್ಟರಲ್ಲಿ CSK ಸೈನ್ಯದಲ್ಲಿ ಆತಂಕ ಮನೆ ಮಾಡಿತು. ಇತ್ತ ಡ್ವೇನ್ ಬ್ರಾವೋ ಕೂಡ ಆಸರೆಯಾಗಲಿಲ್ಲ. ಬ್ರಾವೋ 8 ರನ್‌ಗೆ ಔಟಾದರು. ದೀಪಕ್ ಚಹಾರ್ಲ ಹಾಗೂ ಶಾರ್ದೂಲ್ ಠಾಕೂರ್‌ಗೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಚೆನ್ನೈ ವಿಕೆಟ್ ನಷ್ಟಕ್ಕೆ ರನ್ ಸಿಡಿಸಿ ಸೋಲೊಪ್ಪಿಕೊಂಡಿತು. 37 ರನ್ ಗೆಲುವು ಸಾಧಿಸಿದ ಮುಂಬೈ ತವರಿನಲ್ಲಿ ಬಲಿಷ್ಠ ತಂಡ ಅನ್ನೋದನ್ನ ಮತ್ತೊಮ್ಮೆ ಸಾಬೀತು ಪಡಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.