ಐಪಿಎಲ್ 2019: ಎಂ.ಎಸ್.ಧೋನಿ ನಿರ್ಮಿಸಲಿದ್ದಾರೆ 4 ಅಪರೂಪದ ದಾಖಲೆ!

By Web Desk  |  First Published Feb 16, 2019, 10:43 AM IST

ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್.ಧೋನಿ ಹಲವು ದಾಖಲೆ ಬರೆದಿದ್ದಾರೆ. ಆದರೆ 12ನೇ ಆವೃತ್ತಿಯಲ್ಲಿ ಧೋನಿ ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಹಾಗಾದರೆ 2019ರಲ್ಲಿ ಧೋನಿ ನಿರ್ಮಿಸಲಿರುವ ಅಪರೂಪದ 4 ದಾಖಲೆ ವಿವರ ಇಲ್ಲಿದೆ.


ಚೆನ್ನೈ(ಫೆ.16): ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಎಂ.ಎಸ್.ಧೋನಿ ಅತೀ ದೊಡ್ಡ ಸ್ಟಾರ್ ಪ್ಲೇಯರ್. 2 ವರ್ಷದ ನಿಷೇಧದ ಬಳಿಕ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಐಪಿಎಲ್ ಸೇರಿಕೊಂಡಿತು. ಇಷ್ಟೇ ಅಲ್ಲ ಧೋನಿ ನೇತೃತ್ವದ ಸಿಎಸ್‌ಕೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದೀಗ 2019ರಲ್ಲೂ ಸಿಎಸ್‌ಕೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಇದನ್ನೂ ಓದಿ: 2019ರ ವಿಶ್ವಕಪ್‌ಗೆ 18 ಟೀಂ ಇಂಡಿಯಾ ಕ್ರಿಕೆಟಿಗರ ಪಟ್ಟಿ ರೆಡಿ!

Latest Videos

undefined

2019ರ ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್.ಧೋನಿ 4 ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ. 12ನೇ ಆವೃತ್ತಿಯಲ್ಲಿ ಧೋನಿ ನಿರ್ಮಿಸಲಿರುವ ಅಪರೂಪದ ದಾಖಲೆ ವಿವರ ಇಲ್ಲಿದೆ.

100 ಗೆಲುವು ಸಾಧಿಸಿದ ಮೊದಲ ನಾಯಕ!
2008ರ ಚೊಚ್ಚಲ ಆವೃತ್ತಿಯಿಂದ ಐಪಿಎಲ್ ಟೂರ್ನಿಯಲ್ಲಿ ಸಕ್ರೀಯವಾಗಿರೋ ಧೋನಿ ನಾಯಕನಾಗಿ 159 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ ಧೋನಿ 94 ಗೆಲುವು ಸಾಧಿಸಿದ್ದಾರೆ. 100 ಗೆಲುವಿಗೆ ಇನ್ನು ಕೇವಲ 6 ಗೆಲುವು ಮಾತ್ರ ಬೇಕಿದೆ.

ಇದನ್ನೂ ಓದಿ: RCB ಸಹಾಯಕ ಕೋಚ್ ಆಗಿ ಜಮ್ಮು ಕಾಶ್ಮೀರ ಮಾಜಿ ಕ್ರಿಕೆಟಿಗ ನೇಮಕ!

ಗರಿಷ್ಠ ಸ್ಟಂಪ್ ಔಟ್ ಮಾಡಿದ ಕ್ರಿಕೆಟಿಗ!
 ಧೋನಿಗಿಂತ ವೇಗವಾಗಿ ಸ್ಟಂಪ್ ಮಾಡೋ ವಿಕೆಟ್ ಕೀಪರ್ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಲ್ಲ. ಐಪಿಎಲ್ ಕ್ರಿಕೆಟ್‌ನಲ್ಲಿ ಗರಿಷ್ಠ ಬ್ಯಾಟ್ಸ್‌ಮನ್‌ಗಳನ್ನ ಬಲಿ ಪಡೆದ ಕೀರ್ತಿಗೆ ದಿನೇಶ್ ಕಾರ್ತಿಕ್ ಪಾತ್ರರಾಗಿದ್ದಾರೆ. ಕಾರ್ತಿಕ್ 124 ಬ್ಯಾಟ್ಸ್‌ಮನ್‌ಗಳನ್ನ ಬಲಿಪಡೆದಿದ್ದಾರೆ. ಐಪಿಎಲ್ ಕ್ರಿಕೆಟ್‌ನಲ್ಲಿ ಧೋನಿ 116 ಬ್ಯಾಟ್ಸ್‌ಮನ್‌ಗಳನ್ನ ಬಲಿಪಡೆದಿದ್ದಾರೆ. ಹೀಗಾಗಿ ಈ ಆವೃತ್ತಿಯಲ್ಲಿ ಕಾರ್ತಿಕ್ ಹಿಂದಿಕ್ಕಲಿದ್ದಾರೆ.

200  ಸಿಕ್ಸರ್ ಸಿಡಿಸಲಿರುವ ಮೊದಲ ಭಾರತೀಯ
ಐಪಿಎಲ್ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಕೀರ್ತಿಗೆ ವೆಸ್ಟ್ಇಂಡೀಸ್‌ನ ಕ್ರಿಸ್‌ ಗೇಲ್ ಪಾತ್ರರಾಗಿದ್ದಾರೆ. ಗೇಲ್ 292 ಸಿಕ್ಸರ್ ಸಿಡಿಸಿದ್ದಾರೆ.  ಸದ್ಯ ಧೋನಿ 186 ಸಿಕ್ಸರ್ ಸಿಡಿಸಿದ್ದಾರೆ. ಹೀಗಾಗಿ 12ನೇ ಆವೃತ್ತಿಯಲ್ಲಿ ಧೋನಿ 200 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:IPL ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ಸಾಧಕರು!

ಗರಿಷ್ಠ ಐಪಿಎಲ್ ಟ್ರೋಫಿ
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ 3 ಐಪಿಎಲ್ ಟ್ರೋಫಿ ಗೆದ್ದಿದ್ದಾರೆ.  ಇನ್ನು 10 ಆವೃತ್ತಿಗಳಲ್ಲಿ 9 ಬಾರಿ ಸೆಮಿಫೈನಲ್ ಪ್ರವೇಶಿಸಿದೆ. ಇದೀಗ 4ನೇ ಆವೃತ್ತಿ ಪ್ರಶಸ್ತಿ ಮೇಲೆ ಕಣ್ಣಟ್ಟಿದೆ. ಇತ್ತ ಮುಂಬೈ ಇಂಡಿಯನ್ಸ್ ಕೂಡ 3 ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಈ ಬಾರಿ ಸಿಎಸ್‌ಕೆ ಮತ್ತೆ ಟ್ರೋಫಿ ಗೆದ್ದರೆ ಗರಿಷ್ಠ ಐಪಿಎಲ್ ಪ್ರಶಸ್ತಿ ಗೆದ್ದು ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

click me!