KKR ತಂಡಕ್ಕೆ ಹೊಸ ಕೋಚ್; 2ನೇ ಇನಿಂಗ್ಸ್ ಆರಂಭಿಸಿದ ಸ್ಫೋಟಕ ಬ್ಯಾಟ್ಸ್‌ಮನ್!

By Web Desk  |  First Published Aug 16, 2019, 5:01 PM IST

ಕೋಲ್ಕತಾ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಆಯ್ಕೆ ಮಾಡಲಾಗಿದೆ. ಕೆಕೆಆರ್ ಪರ 5 ಆವೃತ್ತಿಗಳಲ್ಲಿ ಮಿಂಚಿನ ಪ್ರದರ್ಶನ ನೀಡಿದ ಸ್ಫೋಟಕ ಬ್ಯಾಟ್ಸ್‌ಮನ್ ಇದೀಗ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
 


ಕೋಲ್ಕತಾ(ಆ.16): 2020ರ ಐಪಿಎಲ್ ಟೂರ್ನಿಗೆ ಕೋಲ್ಕತಾ ನೈಟ್ ರೈಡರ್ಸ್ ತಂಡ ತಯಾರಿ ಆರಂಭಿಸಿದೆ. KKR ತಂಡ ನೂತನ ಕೋಚ್ ಆಯ್ಕೆ ಮಾಡಿದೆ. ಕೋಲ್ಕತಾ ತಂಡದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕ್ಕಲಂ ನೂತನ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗಷ್ಟೆ ಮೆಕಲಂ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ಇದನ್ನೂ ಓದಿ: KKR ಆಲ್ರೌಂಡರ್ ಮೇಲೆ ನಿಷೇಧ ಹೇರಿದ BCCI..!

Tap to resize

Latest Videos

undefined

ಬಾಲಿವುಡ್ ನಟ ಶಾರುಕ್ ಖಾನ್ ಸಹಮಾಲೀಕತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡ ಮೆಕ್ಕಲಂಗೆ ನೂತನ ಕೋಚ್ ಪಟ್ಟ ನೀಡಿದೆ. 2019ರ ಐಪಿಎಲ್ ಟೂರ್ನಿ ಬಳಿಕ ಕೆಕೆಆರ್ ತಂಡದ ಕೋಚ್ ಸ್ಥಾನದಿಂದ ಜಾಕ್ ಕಾಲಿಸ್ ಹಿಂದೆ ಸರಿದಿದ್ದರು. ಹೀಗಾಗಿ ಮುಖ್ಯ ಕೋಚ್ ಹುದ್ದೆ ಖಾಲಿಯಾಗಿತ್ತು. ಇದೀಗ ಕೆಕೆಆರ್ ಸ್ಫೋಟಕ ಬ್ಯಾಟ್ಸ್‌ಮನನ್ನು ಕೋಚ್ ಆಗಿ ಆಯ್ಕೆ ಮಾಡಿದೆ.

ಇದನ್ನೂ ಓದಿ: KKR ತಂಡಕ್ಕೆ ಕೋಚ್ ಜಾಕ್ ಕಾಲಿಸ್ ಗುಡ್ ಬೈ!

2008ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಭರ್ಜರಿ ಶತಕ ಸಿಡಿಸಿ ದಾಖಲೆ ಬರೆದಿದ್ದ ಬ್ರೆಂಡನ್ ಮೆಕ್ಕಲಂ, 2009ರಲ್ಲಿ ಕೋಲ್ಕತಾ ತಂಡದ ನಾಯಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. 5 ಆವೃತ್ತಿಗಳಲ್ಲಿ ಕೆಕೆಆರ್ ತಂಡದರ ಆಡಿದ್ದ ಮೆಕ್ಕಲಂ ಇದೀಗ ಕೋಚ್ ಆಯ್ಕೆ ಜವಾಬ್ದಾರಿ ನಿರ್ವಹಿಸಲಿದ್ದಾರೆ.
 

click me!