
ಇಂದೋರ್(ಮೇ.06]: ಅಂಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್, ಈ ಆವೃತ್ತಿಯ ಐಪಿಎಲ್’ನ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧ ಇಂದು ನಡೆಯಲಿರುವ ಪಂದ್ಯದಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್ ಹಂತದ ಹಾದಿಯನ್ನು ಸುಗಮಗೊಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಆಡಿರುವ 8ರಲ್ಲಿ 5 ಗೆಲುವು ಸಾಧಿಸಿರುವ ಪಂಜಾಬ್ 10 ಅಂಕ ಗಳಿಸಿದೆ.
ಇನ್ನೊಂದೆಡೆ ರಾಜಸ್ಥಾನ 8 ಪಂದ್ಯಗಳಲ್ಲಿ ಕೇವಲ 3ರಲ್ಲಿ ಮಾತ್ರ ಜಯಿಸಿದ್ದು, 5ರಲ್ಲಿ ಸೋಲುಂಡಿದೆ. ಇನ್ನುಳಿದ 6 ಪಂದ್ಯಗಳಲ್ಲಿ ರಾಜಸ್ಥಾನ ಉತ್ತಮ ಅಂತರದ ಗೆಲುವು ಸಾಧಿಸಿದರೆ ಮಾತ್ರ ಪ್ಲೇ ಆಫ್ ಸ್ಥಾನವನ್ನು ಉಳಿಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ರಾಜಸ್ಥಾನಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಪಿಚ್ ರಿಪೋರ್ಟ್: ಬ್ಯಾಟಿಂಗ್ ಸ್ನೇಹಿ ಪಿಚ್ ಹೋಲ್ಕರ್ ಪಿಚ್ ಬ್ಯಾಟ್ಸ್’ಮನ್‌ಗಳಿಗೆ ಹೆಚ್ಚಾಗಿ ಸ್ಪಂದಿಸಲಿದೆ. ಕ್ರೀಡಾಂಗಣದ ಸುತ್ತಳತೆ ಚಿಕ್ಕದಾಗಿರುವುದರಿಂದ ಬ್ಯಾಟ್ಸ್’ಮನ್‌ಗಳಿಗೆ ಹೆಚ್ಚಿನ ನೆರವಾಗಲಿದೆ. ಈ ಆವೃತ್ತಿಯಲ್ಲಿ ಇಲ್ಲಿ 6 ಪಂದ್ಯಗಳು ನಡೆದಿದ್ದು, 6ರಲ್ಲೂ ಮೊದಲು ಬೌಲಿಂಗ್ ಮಾಡಿದ ತಂಡ ಜಯ ಪಡೆದಿದೆ.
ಸಂಭಾವ್ಯ ತಂಡ:
ಕಿಂಗ್ಸ್ ಇಲೆವೆನ್ ಪಂಜಾಬ್: ಕ್ರಿಸ್ ಗೇಲ್, ರಾಹುಲ್, ಯುವರಾಜ್, ಮಯಾಂಕ್, ಕರುಣ್, ಅಕ್ಷರ್, ಸ್ಟೋಯ್ನಿಸ್, ಅಶ್ವಿನ್(ನಾಯಕ), ಆ್ಯಂಡ್ರೂ ಟೈ, ಮುಜೀಬ್, ಅಂಕಿತ್
ರಾಜಸ್ಥಾನ ರಾಯಲ್ಸ್: ಡಾರ್ಚಿ ಶಾರ್ಟ್, ಬಟ್ಲರ್, ಸಂಜು, ಸ್ಟೋಕ್ಸ್, ತ್ರಿಪಾಠಿ, ಕೆ. ಗೌತಮ್, ಆರ್ಚರ್, ರಹಾನೆ (ನಾಯಕ), ಉನಾದ್ಕತ್, ಧವಳ್ ಕುಲಕರ್ಣಿ, ಶ್ರೇಯಸ್
ಸ್ಥಳ: ಇಂದೋರ್, ಪಂದ್ಯ ಸಮಯ: ರಾತ್ರಿ 8ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.