ಫೀಫಾ ಶ್ರೇಯಾಂಕ: 100ನೇ ಸ್ಥಾನಕ್ಕೆ ಲಗ್ಗೆಯಿಟ್ಟ ಭಾರತ

By Suvarna Web DeskFirst Published May 4, 2017, 3:43 PM IST
Highlights

ಮಾರ್ಚ್ 2015ರಲ್ಲಿ ಫುಟ್ಬಾಲ್ ಟೀಂ ಇಂಡಿಯಾ 173ನೇ ಶ್ರೇಯಾಂಕ ಹೊಂದಿತ್ತು, ಆದರೆ ಕೇವಲ ಎರಡು ವರ್ಷದೊಳಗಾಗಿ 73 ಸ್ಥಾನಗಳ ಜಿಗಿತ ಕಂಡು 100ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ನವದೆಹಲಿ(ಮೇ.04): ನಿರೀಕ್ಷೆಯಂತೆ ಭಾರತ ಫುಟ್ಬಾಲ್ ತಂಡ ಫೀಫಾ ವಿಶ್ವ ಫುಟ್ಬಾಲ್ ಶ್ರೇಯಾಂಕ ಪಟ್ಟಿಯಲ್ಲಿ 100ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಇಂದು ಪ್ರಕಟಗೊಂಡ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ ಭಾರತ, ಸುಮಾರು 21 ವರ್ಷಗಳ ಬಳಿಕ 100ರೊಳಗೆ ಸ್ಥಾನ ಪಡೆದ ಹಿರಿಮೆಗೆ ಪಾತ್ರವಾಯಿತು.

ಈ ಮೊದಲು 1996ರ ಫೆಬ್ರವರಿಯಲ್ಲಿ 94ನೇ ಸ್ಥಾನಕ್ಕೇರಿದ್ದು, ಭಾರತ ಫುಟ್ಬಾಲ್ ತಂಡದ ಈ ವರೆಗಿನ ಶ್ರೇಷ್ಠ ಸಾಧನೆಯಾಗಿದೆ.

ಮುಂದಿನ ಕೆಲ ತಿಂಗಳು ಭಾರತ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದಿರುವ ಕಾರಣ, ಶ್ರೇಯಾಂಕ ಪಟ್ಟಿಯಲ್ಲಿ ಮತ್ತೆ ಬದಲಾವಣೆಯಾಗುವ ಸಾಧ್ಯತೆ ಇದೆ.

ಮಾರ್ಚ್ 2015ರಲ್ಲಿ ಫುಟ್ಬಾಲ್ ಟೀಂ ಇಂಡಿಯಾ 173ನೇ ಶ್ರೇಯಾಂಕ ಹೊಂದಿತ್ತು, ಆದರೆ ಕೇವಲ ಎರಡು ವರ್ಷದೊಳಗಾಗಿ 73 ಸ್ಥಾನಗಳ ಜಿಗಿತ ಕಂಡು 100ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

click me!