
ನವದೆಹಲಿ (ಮೇ.05): ಫುಟ್ಬಾಲ್ ಪ್ರಿಯರಿಗೆ ಸಿಹಿ ಸುದ್ದಿ ಫಿಫಾ ರ್ಯಾಂಕಿಂಗ್'ನಲ್ಲಿ ಒಂದು ಸ್ಥಾನ ಮೇಲೇರುವ ಮೂಲಕ ಭಾರತೀಯ ಫುಟ್ಬಾಲ್ ತಂಡವು 21 ವರ್ಷಗಳ ಬಳಿಕ ಟಾಪ್-100ನಲ್ಲಿ ಸ್ಥಾನ ಪಡೆದಿದೆ. ಗುರುವಾರ ಬಿಡುಗಡೆಯಾದ ನೂತನ ರ್ಯಾಂಕಿಂಗ್'ನಲ್ಲಿ 101ನೇ ಸ್ಥಾನದಲ್ಲಿದ್ದ ಭಾರತವು ಫೀಫಾ ರ‌್ಯಾಂಕಿಂಗ್ ಪಟ್ಟಿಯಲ್ಲಿ 100ನೇ ಸ್ಥಾನಕ್ಕೇರಿದೆ.
1996 ಏಪ್ರಿಲ್‌ನಲ್ಲಿ ಭಾರತ ಕೊನೆ ಬಾರಿಗೆ 100 ನೇ ಸ್ಥಾನ ಪಡೆದಿತ್ತು. 1996 ಫೆಬ್ರವರಿಯಲ್ಲಿ 94 ನೇ ಸ್ಥಾನಕ್ಕೇರಿದ್ದು, ಭಾರತ ಫುಟ್ಬಾಲ್ ತಂಡದ ಈ ವರೆಗಿನ ಶ್ರೇಷ್ಠ ಸಾಧನೆಯಾಗಿದೆ. ಮುಂದಿನ ಕೆಲ ತಿಂಗಳು ಭಾರತ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದಿರುವ ಕಾರಣ, ರ‌್ಯಾಂಕಿಂಗ್ ಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.