Cricket; ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌‌ಗೆ ಸೇರಿದ್ದ 4 ಭಾರತೀಯ ಸ್ಟಾರ್ಸ್‌; ಒಬ್ಬನ ಬ್ಯಾಟಿಂಗ್‌ ಧಮಾಕಾಗೆ ಜಗತ್ತೇ ಫಿದಾ!

Published : Oct 06, 2026, 01:21 PM IST
Cricket News

ಸಾರಾಂಶ

ಕ್ರಿಕೆಟ್‌ನಲ್ಲಿ ಚೊಚ್ಚಲ ಪಂದ್ಯ ಆಡುವುದು ಪ್ರತಿಯೊಬ್ಬ ಆಟಗಾರನ ಕನಸಾಗಿದೆ. ಆದರೆ ಎಂಎಸ್ ಧೋನಿ, ಕೆಎಲ್ ರಾಹುಲ್ ಸೇರಿದಂತೆ ನಾಲ್ವರು ಭಾರತೀಯ ಸ್ಟಾರ್ ಬ್ಯಾಟ್ಸ್‌ಮನ್‌ಗಳು ತಮ್ಮ ಮೊದಲ ಟಿ20 ಪಂದ್ಯದಲ್ಲೇ ಶೂನ್ಯಕ್ಕೆ ಔಟಾಗಿ ವಿಫಲರಾಗಿದ್ದರು. ಈ ಲೇಖನವು ಅಂತಹ ನಾಲ್ವರು ಆಟಗಾರರ ಬಗ್ಗೆ ವಿವರಿಸುತ್ತದೆ.

ಕ್ರಿಕೆಟ್‌ನಲ್ಲಿ ಚೊಚ್ಚಲ ಪಂದ್ಯ ಆಡುವುದು ಒಂದು ರೀತಿಯ ಆಟವಾಗಿದ್ದರೂ, ಅದು ಪ್ರತಿಯೊಬ್ಬ ಆಟಗಾರನ ಕನಸು. ಆಟಗಾರನ ಮೊದಲ ಪಂದ್ಯ ಯಾವಾಗಲೂ ಸ್ಮರಣೀಯ. ಅದರಲ್ಲಿ ಎರಡು ಮಾತಿಲ್ಲ. ಆದರೆ ಆಟಗಾರನೊಬ್ಬ ತನ್ನ ಚೊಚ್ಚಲ ಪಂದ್ಯದಲ್ಲಿ ವಿಫಲನಾದಾಗ ಏನಾಗುತ್ತದೆ? ಅಲ್ಲಿ ಪ್ರೆಜರ್‌ ಸುಲಭ. ಆದರೆ ಅದನ್ನೆ ಪ್ರೇರಣೆಯಾಗಿ ಇಟ್ಟುಕ್ಕೊಂಡು ಮತ್ತೆ ಸ್ಟೇಡಿಯಂಗೆ ಇಳಿದು ಗರ್ಜಿಸಿದಾಗ ಅಲ್ಲಿ ಆಗುವ ಆತ್ಮಸಮ್ಮಾನವೇ ಬೇರೆ, ಬೇರೆ ಅದು. ಅದೇ ರೀತಿ ತಮ್ಮ T20 ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯದಲ್ಲಿ ವಿಫಲರಾದ ನಾಲ್ವರು ಭಾರತೀಯ ಬ್ಯಾಟ್ಸ್‌ಮನ್‌ಗಲನ್ನು ನೋಡೋಣ. ಅದರ ಜತೆಗೆ ಇಂದಿಗೂ ಅದರಲ್ಲಿ ಒಬ್ಬ ಬ್ಯಾಟ್ಸಮನ್‌ಗೆ ಪಿದಾ ಆಗದೇ ಇರುವವರು ಯಾರು ಇಲ್ಲ. ಹಾಗಾದರೆ ಅವರು ಯಾರು ಎನ್ನುವುದನ್ನು ನೋಡೋಣ ಬನ್ನಿ.

ಮಹೇಂದ್ರ ಸಿಂಗ್ ಧೋನಿ!

ಈ ಪಟ್ಟಿಯಲ್ಲಿರುವ ಮೊದಲ ಹೆಸರು ಭಾರತಕ್ಕೆ ಮೊದಲ ಟಿ20 ವಿಶ್ವಕಪ್ ತಂದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ. ಧೋನಿ ತಮ್ಮ ವೃತ್ತಿಜೀವನದಲ್ಲಿ ಅನೇಕ ಸಾಧನೆಗಳನ್ನು ಸಾಧಿಸಿದ್ದರೂ, ತಮ್ಮ ಟಿ20 ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯದಲ್ಲಿ ರನ್ ಗಳಿಸದೆ ಔಟ್ ಆಗಿದ್ದು ಯಾವಾಗಲೂ ಅವರ ನೆನಪಿನಲ್ಲುಳಿಯುತ್ತದೆ. ಧೋನಿ 2006 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಪರ ಟಿ20ಗೆ ಪಾದಾರ್ಪಣೆ ಮಾಡಿದರು. ತಮ್ಮ ಮೊದಲ ಟಿ20 ಪಂದ್ಯದಲ್ಲಿ ಕೇವಲ ಎರಡು ಎಸೆತಗಳನ್ನು ಎದುರಿಸಿದ ನಂತರ ಧೋನಿ ಬೌಲ್ಡ್ ಆದರು.

ಎರಡನೇ ಹೆಸರು ಕೆಎಲ್‌ ರಾಹುಲ್‌!

ಈ ಪಟ್ಟಿಯಲ್ಲಿರುವ ಎರಡನೇ ಹೆಸರು ಕನ್ನಡಿಗ ಕೆ.ಎಲ್. ರಾಹುಲ್ ಅವರದ್ದು. ಪ್ರಸ್ತುತ ಟೀಮ್ ಇಂಡಿಯಾದ ಟಿ20 ತಂಡದಿಂದ ಹೊರಗಿದ್ದರೂ, ಈ ಸ್ವರೂಪದಲ್ಲಿ ಅವರು ಭಾರತದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದ ಸಮಯವಿತ್ತು. ಟಿ20ಯಲ್ಲಿ ಅವರ ಅದ್ಭುತ ದಾಖಲೆ ಹೊರತಾಗಿಯೂ, ಈ ಸ್ವರೂಪದಲ್ಲಿ ಅವರ ಚೊಚ್ಚಲ ಪಂದ್ಯವು ಸಹ ಶೂನ್ಯಕ್ಕೆ ಕೊನೆಗೊಂಡಿತು. ಕೆ.ಎಲ್. ರಾಹುಲ್ 2016 ರಲ್ಲಿ ಜಿಂಬಾಬ್ವೆ ವಿರುದ್ಧ ಟಿ20 ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು ಮತ್ತು ಅವರ ಮೊದಲ ಪಂದ್ಯದಲ್ಲೇ ಗೋಲ್ಡನ್ ಡಕ್ ಆಗಿ ಔಟಾಗಿದ್ದರು.

ಪೃಥ್ವಿ ಶಾ!

ಆರಂಭಿಕ ಆಟಗಾರ ಪೃಥ್ವಿ ಶಾ ಕೂಡ ತಮ್ಮ T20 ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರು. ದುರದೃಷ್ಟವಶಾತ್, ಆ ಪಂದ್ಯದ ನಂತರ ಅವರಿಗೆ ಈ ಸ್ವರೂಪದಲ್ಲಿ ಟೀಮ್ ಇಂಡಿಯಾ ಪರ ಆಡಲು ಅವಕಾಶ ಸಿಗಲಿಲ್ಲ. ಅವರು 2021 ರಲ್ಲಿ ಶ್ರೀಲಂಕಾ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದರು, ಅಲ್ಲಿ ಅವರು ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಆಗಿ ಔಟಾದರು.

ಅಭಿಷೇಕ್ ಶರ್ಮಾ!

ವಿಶ್ವದಾದ್ಯಂತ ಬೌಲರ್‌ಗಳಿಗೆ ಭಯ ಹುಟ್ಟಿಸುವ ಆಕ್ರಮಣಕಾರಿ ಬ್ಯಾಟಿಂಗ್‌ ಅನ್ನು ಹೊಂದಿರುವ ಅಭಿಷೇಕ್ ಶರ್ಮಾ, ತಮ್ಮ T20I ಚೊಚ್ಚಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರು. ಅವರು 2014 ರಲ್ಲಿ ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದರು. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಮೊದಲು, ಅಭಿಷೇಕ್ ಈಗಾಗಲೇ IPL ನಲ್ಲಿ ತಮ್ಮ ಛಾಪು ಮೂಡಿಸಿದ್ದರು, ಆದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನ ಒತ್ತಡಗಳು ವಿಭಿನ್ನವಾಗಿವೆ. ಅದಕ್ಕಾಗಿಯೇ ಅವರು ತಮ್ಮ ಮೊದಲ T20I ಪಂದ್ಯದಲ್ಲಿ ಕೇವಲ ನಾಲ್ಕು ಎಸೆತಗಳನ್ನು ಆಡಿ ಶೂನ್ಯಕ್ಕೆ ಔಟಾದ ನಂತರ ಖಾತೆ ತೆರೆಯಲು ವಿಫಲರಾದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2027ರ ಏಕದಿನ ವಿಶ್ವಕಪ್‌ಗೆ ಭಾರತದ ಟಾಪ್-6 ಆಟಗಾರರ ಹೆಸರು ಫೈನಲ್ ಮಾಡಿದ ಆಕಾಶ್ ಚೋಪ್ರಾ..! ಯಾರಿಗೆಲ್ಲಾ ಸಿಕ್ಕಿದೆ ಸ್ಥಾನ?
ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆಲುವಿನ ಬೆನ್ನಲ್ಲೇ ಭಾರತ ತಂಡದ ನಾಯಕತ್ವಕ್ಕೆ ಗುಡ್‌ ಬೈ ಹೇಳಿದ ಹರ್ಮನ್‌ಪ್ರೀತ್ ಕೌರ್..! ಮುಂದಿನ ಕ್ಯಾಪ್ಟನ್ RCB ನಾಯಕಿ?