ಭಾರತ ವನಿತೆಯರಿಗೆ ಏಷ್ಯಾ ಪ್ರಶಸ್ತಿ ಗರಿ

By Suvarna Web DeskFirst Published Nov 5, 2016, 3:11 PM IST
Highlights

ಭಾರತ ಮಹಿಳಾ ಹಾಕಿ ತಂಡ ಮೊಟ್ಟ ಮೊದಲ ಬಾರಿಗೆ ಏಷ್ಯಾ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾಧನೆ ಮಾಡಿದೆ.

ಸಿಂಗಾಪುರ(ನ.05): ಇತ್ತೀಚೆಗಷ್ಟೇ ಭಾರತ ಪುರುಷರ ಹಾಕಿ ತಂಡ ಏಷ್ಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ವನಿತೆರ ತಂಡವೂ ಏಷ್ಯಾಕಪ್ ಚಾಂಪಿಯನ್ ಆಗುವ ಮೂಲಕ ರಾಷ್ಟ್ರೀಯ ಕ್ರೀಡೆಯಲ್ಲಿ ಪ್ರಭುತ್ವ ಮೆರೆದಿದೆ.  

ಈ ಹಿಂದೆ ಪುರುಷರ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಭಾರತ 3-2 ಗೋಲುಗಳಿಂದ ಸೋಲಿಸುವ ಮೂಲಕ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಭಾರತ ಮಹಿಳೆಯರ ತಂಡ ಕೂಡ 4ನೇ ಏಷ್ಯಾ ಚಾಂಪಿಯನ್ಸ್ ಹಾಕಿ ಟೂರ್ನಿಯ ಫೈನಲ್‌ನಲ್ಲಿ ನೆರೆಯ ಚೀನಾವನ್ನು 2-1 ಗೋಲುಗಳಿಂದ ಮಣಿಸಿ ಪ್ರಶಸ್ತಿ ಬಾಚಿಕೊಂಡಿದೆ.

ಇದರೊಂದಿಗೆ ಭಾರತ ಮಹಿಳಾ ಹಾಕಿ ತಂಡ ಮೊಟ್ಟ ಮೊದಲ ಬಾರಿಗೆ ಏಷ್ಯಾ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾಧನೆ ಮಾಡಿದೆ.

ಒಟ್ಟಾರೆ ಭಾರತ ಹಾಕಿ ತಂಡ ಎರಡು ವಿಭಾಗದಲ್ಲೂ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದರೊಂದಿಗೆ ಸಾರ್ವಭೌಮತ್ವ ಮೆರೆದಿದೆ.

click me!