
ಮುಂಬೈ, [ಅ.29]: ರೋಹಿತ್ ಶರ್ಮಾ, ಅಂಬಟಿ ರಾಯುಡು ಅಮೋಘ ಶತಕದ ನೆರವಿನಿಂದ ಭಾರತ, ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
ಇಂದು ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 4ನೇ ಏಕದಿನ ಕ್ರಿಕೆಟ್ ಪಂದ್ಯ ಹಲವು ರೋಮಾಂಚನಕಾರಿ ಕ್ಷಣಗಳಿಗೆ ಸಾಕ್ಷಿ ಆಯಿತು.
ಮೊದಲ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿ ಭಾರತ 50 ಓವರ್ ಗಳಲ್ಲಿ ಭಜರಿ 378 ರನ್ಗಳ ಗರಿನೀಡಿತು. ಇದನ್ನು ಬೆನ್ನತ್ತಿದ ವಿಂಡೀಸ್, ಟೀಂ ಇಂಡಿಯಾ ಬೌಲರ್ಗಳ ಮಾರಕ ದಾಳಿಗೆ ಮಂಕಾಯಿತು.
ಅಂತಿಮವಾಗಿ ವಿಂಡೀಸ್ ಕೇವಲ 36.2 ಓವರ್ಗೆ 153 ರನ್ಗಳಿಸಿ ಸರ್ವಪತನ ಕಂಡು ಸೋಲೋಪ್ಪಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ, ವಿಂಡೀಸ್ ಬೌಲರ್ಗಳನ್ನ ಮನಬಂದಂತೆ ದಂಡಿಸಿದರು. ಅದರಲ್ಲೂ ರೋಹಿತ್, ಬೌಂಡರಿ ಸಿಕ್ಸರ್ಗಳ ಸುರಿಮಳೆ ಸುರಿಸಿದ್ರು.
ಶತಕ ಸಿಡಿಸೋವರೆಗೂ ಬಾಲ್ ಟು ಬಾಲ್ ರನ್ಸ್ಕೋರ್ ಮಾಡಿದ ರೋಹಿತ್, ನಂತರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ರು. 137 ಎಸೆತಗಳಲ್ಲಿ 162 ರನ್ ಸಿಡಿಸಿದ ರೋಹಿತ್, ಕ್ರೀಡಾಂಗಣದಲ್ಲಿ ನೆರದಿದ್ದ ಸಾವಿರಾರೂ ಮಂದಿ ಅಭಿಮಾನಿಗಳನ್ನ ರಂಜಿಸಿದರು.
ಮತ್ತೊಂದೆಡೆ ರೋಹಿತ್ ಶರ್ಮಾಗೆ ಸೂಪರ್ ಸಾಥ್ ನೀಡಿದ ಅಂಬಟಿ ರಾಯುಡು, ಏಕದಿನ ಕ್ರಿಕೆಟ್ನಲ್ಲಿ 3ನೇ ಶತಕ ದಾಖಲಿಸಿದ್ರು. ಅಷ್ಟೇ ಅಲ್ಲ, 3ನೇ ವಿಕೆಟ್ಗೆ ರೋಹಿತ್ ಶರ್ಮಾ ಜೊತೆಗೂಡಿ 211 ರನ್ಗಳ ಜೊತೆಯಾಟದ ಕಾಣಿಕೆ ನೀಡಿದ್ರು.
ಅಂತಿಮವಾಗಿ ಟೀಮ್ ಇಂಡಿಯಾ ನಿಗಧಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 377 ರನ್ಗಳಿಸಿತು. ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ 162 ರನ್, ಅಂಬಟಿ ರಾಯುಡು 100 ರನ್, ಶಿಖರ್ ಧವನ್ 38 ರನ್, ಎಂ.ಎಸ್.ಧೋನಿ 23 ರನ್ಗಳಿಸಿದ್ರು. ವಿಂಡೀಸ್ ಪರ ಕೆಮರ್ ರೋಚ್ 2 ವಿಕೆಟ್, ಆ್ಯಶ್ಲೆ ನರ್ಸ್ ಮತ್ತು ಕಿಮೊ ಪೌಲ್ ತಲಾ ವಿಕೆಟ್ ಪಡೆದ್ರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.