ವೆಸ್ಟ್ ಇಂಡೀಸ್‌ಗೆ 196 ರನ್ ಟಾರ್ಗೆಟ್ ನೀಡಿದ ಭಾರತ!

By Web DeskFirst Published Nov 6, 2018, 8:50 PM IST
Highlights

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟಿ20 ಪಂದ್ಯ ಬೌಂಡರಿ ಸಿಕ್ಸರ್‌ಗಳ ಅಬ್ಬರಕ್ಕೆ ಸಾಕ್ಷಿಯಾಗಿದೆ. ರೋಹಿತ್ ಶರ್ಮಾ ಬ್ಯಾಟಿಂಗ್ ಅಬ್ಬರ, ಹಾಗೂ ಟೀಂ ಇಂಡಿಯಾ ಪ್ರದರ್ಶನ ಹೇಗಿತ್ತು. ಇಲ್ಲಿದೆ ಅಪ್‌ಡೇಟ್ಸ್.

ಲಖನೌ(ನ.06): ವೆಸ್ಟ್ ಇಂಡೀಸ್ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಿಗಧಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 195 ರನ್ ಸಿಡಿಸಿದೆ. ಈ ಮೂಲಕ ವೆಸ್ಟ್ ಇಂಡೀಸ್ ಗೆಲುವಿಗೆ ಬರೋಬ್ಬರಿ 196 ರನ್ ಟಾರ್ಗೆಟ್ ನೀಡಿದೆ.

 

Innings Break!

Batting heroics from the Skipper (111*) as post a formidable total of 195/2 for the Windies to chase.

Stay tuned pic.twitter.com/p1p09sZC6V

— BCCI (@BCCI)

 

ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದೆ. ಆರಂಭಿಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಮೊದಲ ವಿಕೆಟ್‌ಗೆ 123 ರನ್ ಜೊತೆಯಾಟ ನೀಡಿದರು. ಧವನ್ 43 ರನ್ ಸಿಡಿಸಿ ಔಟಾದರು.

ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಕಣಕ್ಕಿಳಿದ ರಿಷಬ್ ಪಂತ್ ಕೇವಲ 5  ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಬಳಿಕ ಕೆಎಲ್ ರಾಹುಲ್ ಜೊತೆಗೂಡಿದ ರೋಹಿತ್ ಶರ್ಮಾ ಆಕ್ರಮಣಕಾರಿ ಆಟವಾಡಿದರು. ಸ್ಫೋಟಕ ಇನ್ನಿಂಗ್ಸ್ ಮೂಲಕ ರೋಹಿತ್ ಶತಕ ದಾಖಲಿಸಿದರು.

ಟಿ20ಯಲ್ಲಿ 4ನೇ ಸೆಂಚುರಿ ಸಿಡಿಸಿದ ರೋಹಿತ್, ಗರಿಷ್ಠ ಶತಕ ದಾಖಲಿಸಿದ ಟಿ20 ಕ್ರಿಕೆಟಿಗ ಅನ್ನೋ ದಾಖಲೆ ಬರೆದರು. ರಾಹುಲ್ ಅಜೇಯ 24 ರನ್ ಸಿಡಿಸಿದರೆ, ರೋಹಿತ್ ಶರ್ಮಾ 61 ಎಸೆತದಲ್ಲಿ ಅಜೇಯ 111ರನ್ ಸಿಡಿಸಿದರು. ಈ ಮೂಲಕ ಭಾರತ 2 ವಿಕೆಟ್ ನಷ್ಟಕ್ಕೆ 195 ರನ್ ಸಿಡಿಸಿತು.
 

click me!