ಭಾರತ-ಇಂಗ್ಲೆಂಡ್ ಟೆಸ್ಟ್: ಆಂಗ್ಲರ 7ನೇ ವಿಕೆಟ್ ಪತನ

By Web DeskFirst Published Sep 1, 2018, 10:37 PM IST
Highlights

ಭಾರತ-ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಇದೀಗ ಕುತೂಹಲ ಘಟ್ಟ ತಲುಪಿದೆ. 3ನೇ ದಿನದಾಟದಲ್ಲಿ 2ನೇ ಇನ್ನಿಂಗ್ಸ್ ಮುಂದುವರಿಸಿರುವ ಇಂಗ್ಲೆಂಡ್ ತಂಡಕ್ಕೆ, ಕೊಹ್ಲಿ ಸೈನ್ಯ ಕಠಿಣ ಸವಾಲು ಒಡ್ಡಿದೆ. ಇಲ್ಲಿದೆ 3ನೇ ದಿನದದ ಅಪ್‌ಡೇಟ್ಸ್.

ಸೌತಾಂಪ್ಟನ್(ಸೆ.01): 4ನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ತಲೆನೋವಾಗಿ ಪರಿಣಮಿಸಿದ್ದ ಜೋಸ್ ಬಟ್ಲರ್ ವಿಕೆಟ್ ಕಬಳಿಸುವಲ್ಲಿ ಇಶಾಂತ್ ಶರ್ಮಾ ಯಶಸ್ವಿಯಾಗಿದ್ದಾರೆ. 69 ರನ್ ಸಿಡಿಸಿದ ಬಟ್ಲರ್ ವಿಕೆಟ್ ಪತನದೊಂದಿಗೆ ಇಂಗ್ಲೆಂಡ್ 7 ವಿಕೆಟ್ ಕಳೆದುಕೊಂಡಿದೆ.

ತೃತೀಯ ದಿನದಾಟದಲ್ಲಿ 2ನೇ ಇನ್ನಿಂಗ್ಸ್ ಮುಂದುವರಿಸಿದೆ ಇಂಗ್ಲೆಂಡ್ ಆರಂಭದಲ್ಲೇ  ಆಲಿಸ್ಟೈರ್ ಕುಕ್ ವಿಕೆಟ್ ಕಳೆದುಕೊಂಡಿತು. 12 ರನ್ ಸಿಡಿಸಿ ಕುಕ್ ಪೆವಿಲಿಯನ್ ಸೇರಿದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಕಣಕ್ಕಿಳಿದ ಮೊಯಿನ್ ಆಲಿ 9 ರನ್ ಸಿಡಿಸಿ ಇಶಾಂತ್‌ಗೆ ವಿಕೆಟ್ ಒಪ್ಪಿಸಿದರು.

ಕೆಟನ್ ಜೆನ್ನಿಂಗ್ಸ್ ಹಾಗೂ ನಾಯಕ ಜೋ ರೂಟ್ ಜೊತೆಯಾಟದಿಂದ ಇಂಗ್ಲೆಂಡ್ ಚೇತರಿಕೆ ಕಂಡಿತ್ತು. ಆದರೆ ಜೆನ್ನಿಂಗ್ಸ್ 36 ರನ್ ಸಿಡಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು.  ಭೋಜನ ವಿರಾಮದ ಬಳಿಕ ಜಾನಿ ಬೈರ್‌ಸ್ಟೋ ಶೂನ್ಯ ಸುತ್ತಿದರು. ಆದರೆ ನಾಯಕ ಜೋ ರೂಟ್ ತಂಡಕ್ಕೆ ಆಸರೆಯಾದರು. ರೂಟ್ 48 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. 

ಬಟ್ಲರ್ ಹಾಗೂ ಸ್ಟೋಕ್ಸ್ ಜೊತೆಯಾಟದಿಂದ ಇಂಗ್ಲೆಂಡ್ ಬೃಹತ್ ಮೊತ್ತದ ಸೂಚನೆ ನೀಡಿತು. ಆದರೆ ಸ್ಟೋಕ್ಸ್ 30 ರನ್ ಸಿಡಿಸಿ ಔಟಾದರು. ಆದರೆ ಜೋಸ್ ಬಟ್ಲರ್ ಅರ್ಧಶತಕ ಸಿಡಿಸಿ ಇಂಗ್ಲೆಂಡ್ ತಂಡಕ್ಕೇ ಚೇತರಿಕೆ ನೀಡಿದರು.  ಆದರೆ ಬಟ್ಲರ್ 69 ರನ್ ಸಿಡಿಸಿ ಔಟಾದರು.  ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 233 ರನ್ ಸಿಡಿಸಿ, 206 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.

click me!