ವಿರಾಟ್ ಕೊಹ್ಲಿ ಅಬ್ಬರ, ಅಶ್ವಿನ್ ಮೋಡಿಗೆ ಮಂಕಾಯಿತು ಇಂಗ್ಲೆಂಡ್

By Web DeskFirst Published Aug 2, 2018, 11:13 PM IST
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಎರಡನೇ ದಿನಕ್ಕೆ ರೋಚಕ ಘಟ್ಟ ತಲುಪಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಮುನ್ನಡೆ ಅನುಭವಿಸಿದರೂ, ವಿರಾಟ್ ಕೊಹ್ಲಿ ಅಬ್ಬರ ಹಾಗೂ ಅಶ್ವಿನ್ ಮೋಡಿಗೆ ಇಂಗ್ಲೆಂಡ್ ಮಂಕಾಗಿದೆ.

ಎಡ್ಜ್‌ಬಾಸ್ಟನ್(ಆ.02):  ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡುವಲ್ಲಿ ಯಶಸ್ವಿಯಾಗಿದೆ.  ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 13 ರನ್ ಹಿನ್ನಡೆ ಅನುಭವಿಸಿದರೂ, ದಿನದಾಟದ ಅಂತ್ಯದಲ್ಲಿ ಇಂಗ್ಲೆಂಡ್ ವಿಕೆಟ್ ಕಬಳಿಸಿ ಸಂಭ್ರಮಿಸಿದೆ. 

 

The man of the hour . pic.twitter.com/UtX8Ma38tm

— BCCI (@BCCI)

 

ಇಂಗ್ಲೆಂಡ್ ತಂಡವನ್ನ ಮೊದಲ ಇನ್ನಿಂಗ್ಸ್‌ನಲ್ಲಿ 287ರನ್‌ಗೆ ಆಲೌಟ್ ಮಾಡಿದ ಭಾರತ ಇನ್ನಿಂಗ್ಸ್ ಆರಂಭಿಸಿತು. ಭಾರತದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳೆಲ್ಲಾ ಪೆವಿಲಿಯನ್ ಪರೇಡ್ ನಡೆಸಿದರು. ಆದರೆ ನಾಯಕ ವಿರಾಟ್ ಕೊಹ್ಲಿ ಮಾತ್ರ ಏಕಾಂಗಿ ಹೋರಾಟ ನೀಡಿದರು.

ಇಂಗ್ಲೆಂಡ್ ದಾಳಿಗೆ ತಕ್ಕ ಉತ್ತರ ನೀಡಿದ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನ 22ನೇ ಶತಕ ದಾಖಲಿಸಿದರು. ಇಷ್ಟೇ ಅಲ್ಲ ಇಂಗ್ಲೆಂಡ್ ನೆಲದಲ್ಲಿ ಮೊದಲ ಶತಕದ ಸಿಹಿ ಅನುಭವಿಸಿದರು. ಅಂತಿಮ ಹಂತದಲ್ಲಿ ವಿರಾಟ್ ಕೊಹ್ಲಿಗೆ ಉಮೇಶ್ ಯಾದವ್ ಉತ್ತಮ ಸಾಥ್ ನೀಡಿದರು. 

149 ರನ್ ಸಿಡಿಸಿ ಮುನ್ನಗ್ಗುತ್ತಿದ್ದ ವಿರಾಟ್ ಕೊಹ್ಲಿ, ಆದಿಲ್ ರಶೀದ್‌ಗೆ ವಿಕೆಟ್ ಒಪ್ಪಿಸಿದರು.ಈ ಮೂಲಕ ಭಾರತ 274ರನ್‌ಗೆ ಆಲೌಟ್ ಆಯಿತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 13 ರನ್ ಹಿನ್ನಡೆ ಅನುಭವಿಸಿತು.

ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಆರಂಭದಲ್ಲೇ ಆಲಿಸ್ಟೈರ್ ಕುಕ್ ವಿಕೆಟ್ ಕಳೆದುಕೊಂಡಿತು. ಕುಕ್ ಮತ್ತೆ ಆರ್ ಅಶ್ವಿನ್ ಸ್ಪಿನ್  ಮೋಡಿಗೆ ಬಲಿಯಾದರು. ಇದರೊಂದಿಗೆ ದ್ವಿತೀಯ ದಿನದಾಟದ ಅಂತ್ಯದಲ್ಲಿ 1 ವಿಕೆಟ್ ನಷ್ಟಕ್ಕೆ 9 ರನ್ ಪೇರಿಸಿತು. ಈ ಮೂಲಕ ಇಂಗ್ಲೆಂಡ್  22ರನ್ ಮುನ್ನಡೆ ಪಡೆದುಕೊಂಡಿತು.

click me!