ಬ್ರೇಕಿಂಗ್ ನ್ಯೂಸ್: 2023ರ ವಿಶ್ವಕಪ್- ಟೀಂ ಇಂಡಿಯಾ ಅಭಿಮಾನಿಗಳಿಗೆ ಸಿಹಿಸುದ್ದಿ

By Suvarna Web DeskFirst Published Dec 11, 2017, 5:28 PM IST
Highlights

1983ರ ವಿಶ್ವಕಪ್ ಟೂರ್ನಿಯಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಚೊಚ್ಚಲ ಬಾರಿಗೆ ವಿಶ್ವಕಪ್ ಎತ್ತಿಹಿಡಿದಿತ್ತು. ಆ ಬಳಿಕ 2011ರಲ್ಲಿ ಭಾಗಶಃ ಭಾರತದಲ್ಲಿ ಆಯೋಜನೆಗೊಂಡಿದ್ದ ವಿಶ್ವಕಪ್ ಟೂರ್ನಿಯಲ್ಲಿ ಎಂ.ಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ಎರಡನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತ್ತು.

ನವದೆಹಲಿ(ಡಿ.11): 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್'ಗೆ ಭಾರತ ಆತಿಥ್ಯ ವಹಿಸುವುದು ಖಚಿತವಾಗಿದೆ. ಅಲ್ಲದೇ ಮುಂಬರುವ 2021ರ ಚಾಂಪಿಯನ್ಸ್ ಟ್ರೋಫಿಗೂ ಭಾರತ ವೇದಿಕೆಯಾಗಲಿದೆ.

ಇಲ್ಲಿಯವರೆಗೆ 1987, 1996 ಹಾಗೂ 2011ರಲ್ಲಿ ಭಾರತದ ನೆಲದಲ್ಲಿ ವಿಶ್ವಕಪ್ ಆಯೋಜನೆಗೊಂಡಿದ್ದರು, ಭಾರತ ಭಾಗಶಃ ಆತಿಥ್ಯ ವಹಿಸಿತ್ತು. ಆದರೆ 2023ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ವಿಶ್ವಕಪ್ ಆಯೋಜನೆಗೊಳ್ಳಲಿದೆ. ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದಲ್ಲಿ ಭಾರತದಲ್ಲಿ ವಿಶ್ವಕಪ್ ಆಯೋಜನೆಗೊಳ್ಳುತ್ತಿರುವುದು ಟೀಂ ಇಂಡಿಯಾ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

click me!