ಚೀನಾ ಬಗ್ಗುಬಡಿದ ರಾಣಿ ರಾಂಪಾಲ್ ಪಡೆ

By Suvarna Web DeskFirst Published Oct 30, 2017, 6:17 PM IST
Highlights

ಸತತ ಎರಡನೇ ಗೆಲುವಿನ ನೆರವಿನಿಂದ 6 ಅಂಕಗಳೊಂದಿಗೆ ರಾಣಿ ರಾಂಪಾಲ್ ಪಡೆ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.

ಕಕಮಿಗಹಾರ(ಅ.30): ಭಾರತದ ವನಿತೆಯರ ಪಡೆಯ ಸಾಂಘಿಕ ಪ್ರದರ್ಶನದ ನೆರವಿನಿಂದ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಚೀನಾ ಎದುರು 4-1 ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸಿತು. ಈ ಮೂಲಕ ಟೂರ್ನಿಯಲ್ಲಿ ರಾಣಿ ರಾಂಪಾಲ್ ಪಡೆ ಸತತ ಎರಡನೇ ಗೆಲುವು ದಾಖಲಿಸಿತು  

‘ಎ’ ಗುಂಪಿನಲ್ಲಿರುವ ಭಾರತ ಮೊದಲ ಪಂದ್ಯದಲ್ಲಿ ಸಿಂಗಾಪುರ ವಿರುದ್ಧ 10-0 ಗೋಲುಗಳ ಭರ್ಜರಿ ಜಯ ಸಾಧಿಸಿತ್ತು. ಸತತ ಎರಡನೇ ಗೆಲುವಿನ ನೆರವಿನಿಂದ 6 ಅಂಕಗಳೊಂದಿಗೆ ರಾಣಿ ರಾಂಪಾಲ್ ಪಡೆ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.

ಇಲ್ಲಿ ನಡೆದ ಪಂದ್ಯದಲ್ಲಿ ಆರಂಭದಿಂದಲೇ ಭಾರತದ ವನಿತೆಯರು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಗುರ್ಜಿತ್ ಕೌರ್ (19ನೇ ನಿ.), ನವಜೋತ್ ಕೌರ್ (32ನೇ ನಿ.), ನೇಹಾ ಗೊಯಲ್ (49ನೇ ನಿ.) ಹಾಗೂ ನಾಯಕಿ ರಾಣಿ ರಾಂಪಾಲ್ (58ನೇ ನಿ.) ಗೋಲು ಗಳಿಸಿ ಭಾರತದ ಗೆಲುವಿನಲ್ಲಿ ಮಿಂಚಿದರು.

ಆದರೆ, ಚೀನಾ ಪರ 38ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಸದುಪಯೋಗ ಪಡಿಸಿಕೊಂಡ ಕಿಯಾಕ್ಸಿಯಾ ಕುಯಿ ಗೋಲು ಬಾರಿಸಿದರು. ಇನ್ನು ಮಂಗಳವಾರ ಭಾರತ ಲೀಗ್ ಹಂತದ ಕೊನೆ ಪಂದ್ಯದಲ್ಲಿ ಮಲೇಷ್ಯಾದ ಸವಾಲನ್ನು ಎದುರಿಸಲಿದೆ.

click me!