ಭಾರತದ ಸ್ಪಿನ್ನರ್’ಗಳ ಬಗ್ಗೆ ಕುಂಬ್ಳೆ ಹೇಳಿದ್ದೇನು..?

First Published Jun 22, 2018, 6:01 PM IST
Highlights

ನಾವು ಎಲ್ಲಾ ವಿಭಾಗದಲ್ಲೂ ಸದೃಢವಾಗಿದ್ದೇವೆ. ಬೌಲಿಂಗ್’ನಲ್ಲಿ ನಾವು ಎದುರಾಳಿ ತಂಡದ 20 ವಿಕೆಟ್ ಕಬಳಿಸುವ ಸಾಮರ್ಥ್ಯ ಹೊಂದಿದ್ದೇವೆ. ಬ್ಯಾಟಿಂಗ್’ನಲ್ಲಿ ಅನುಭವಿ ಆಟಗಾರರನ್ನು ಒಳಗೊಂಡಿದ್ದೇವೆ ಎಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಂಬ್ಳೆ ಮಾತನಾಡಿದ್ದಾರೆ.

ಚೆನ್ನೈ[ಜೂ.22]: ವಿಶ್ವ ಕ್ರಿಕೆಟ್’ನಲ್ಲಿ ಬಲಿಷ್ಠ ಸ್ಪಿನ್ ವಿಭಾಗ ಹೊಂದಿರುವ ಭಾರತ ತಂಡವು ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಲಿದೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಹೇಳಿದ್ದಾರೆ.

ನಾವು ಎಲ್ಲಾ ವಿಭಾಗದಲ್ಲೂ ಸದೃಢವಾಗಿದ್ದೇವೆ. ಬೌಲಿಂಗ್’ನಲ್ಲಿ ನಾವು ಎದುರಾಳಿ ತಂಡದ 20 ವಿಕೆಟ್ ಕಬಳಿಸುವ ಸಾಮರ್ಥ್ಯ ಹೊಂದಿದ್ದೇವೆ. ಬ್ಯಾಟಿಂಗ್’ನಲ್ಲಿ ಅನುಭವಿ ಆಟಗಾರರನ್ನು ಒಳಗೊಂಡಿದ್ದೇವೆ ಎಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಂಬ್ಳೆ ಮಾತನಾಡಿದ್ದಾರೆ.

ಬಹುತೇಕ ಎಲ್ಲಾ ಆಟಗಾರರು ಸರಿ ಸುಮಾರು 50 ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಅವರೆಲ್ಲ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುತ್ತಿಲ್ಲ. ಸಾಕಷ್ಟು ಆಟಗಾರರಿಗೆ ಇಂಗ್ಲೆಂಡ್ ವಾತಾವರಣದ ಪರಿಚಯವಿದೆ ಎಂದು ಕುಂಬ್ಳೆ ಹೇಳಿದ್ದಾರೆ.

ನಾವು ವಿಶ್ವದರ್ಜೆಯ ಸ್ಪಿನ್ನರ್’ಗಳನ್ನು ಹೊಂದಿದ್ದು, ಇಂಗ್ಲೆಂಡ್’ನಲ್ಲಿ ಸರಣಿ ಗೆಲ್ಲಲು ಉತ್ತಮ ಅವಕಾಶವಿದೆ. ಅದರಲ್ಲೂ ಮಣಿಕಟ್ಟಿನ ಸ್ಪಿನ್ನರ್’ಗಳು ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಜಂಬೋ ಖ್ಯಾತಿಯ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

click me!