ಖೇಲೋ ಇಂಡಿಯಾ ಮೂಲಕ ಭಾರತ 100 ಉಸೇನ್ ಬೋಲ್ಟ್'ರನ್ನು ಸೃಷ್ಟಿಸಲಿದೆ; ರಾಥೋಡ್

By Suvarna Web DeskFirst Published Dec 6, 2017, 7:22 PM IST
Highlights

125 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ 100 ಉಸೇನ್ ಬೋಲ್ಟ್ ಅವರಂತಹ ಆಟಗಾರರನ್ನು ಸೃಷ್ಟಿಸಬಹುದು ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನವದೆಹಲಿ(ಡಿ.06): ಭಾರತಕ್ಕೆ 100 ಉಸೇನ್ ಬೋಲ್ಟ್ ಅವರಂತಹ ಕ್ರೀಡಾತಾರೆಗಳನ್ನು ಸೃಷ್ಟಿಸುವ ಸಾಮರ್ಥ್ಯವಿದೆ ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.

ಖೇಲೋ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಒಲಿಂಪಿಯನ್ ರಾಥೋಡ್, ಮುಂದಿನ ದಿನಗಳಲ್ಲಿ ಶಾಲಾ ಹಂತದಿಂದಲೇ ಪ್ರತಿಭಾನ್ವೇಷಣೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

125 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ 100 ಉಸೇನ್ ಬೋಲ್ಟ್ ಅವರಂತಹ ಆಟಗಾರರನ್ನು ಸೃಷ್ಟಿಸಬಹುದು ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಮಕ್ಕಳನ್ನು ಶಾಲಾ ಹಂತದಲ್ಲೇ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಪ್ರಯತ್ನಿಸುತ್ತಿದೆ. ಇದರಿಂದ ಮಕ್ಕಳು ವಲಯ ಮಟ್ಟದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳು ಪಾಲ್ಗೊಳ್ಳಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಕ್ರೀಡಾ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

click me!