ಮಂಧನಾ ಶತಕಕ್ಕೆ ವಿಂಡೀಸ್ ಕಂಗಾಲು

By Suvarna Web DeskFirst Published Jun 30, 2017, 2:21 AM IST
Highlights

ಮೊದಲ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ಇಂಡೀಸ್ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದ ಮಿಥಾಲಿ ರಾಜ್ ಪಡೆ, ಸತತ 2ನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ.

ವೆಸ್ಟ್‌ಇಂಡೀಸ್ ನೀಡಿದ್ದ 184 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭಿಕ ಆಘಾತಕ್ಕೆ ಗುರಿಯಾಯಿತು. ಮೊದಲ ಓವರ್‌ನಲ್ಲೇ ಪೂನಮ್ ರಾವುತ್ ಔಟಾಗಿ ಹೊರನಡೆದರು. 33 ರನ್ ಗಳಿಸುವಷ್ಟರಲ್ಲಿ ತಂಡ ದೀಪ್ತಿ ಶರ್ಮಾ ವಿಕೆಟನ್ನೂ ಕಳೆದುಕೊಂಡಿತು.

ಟಾನ್ಟನ್(ಜೂ.30): ಸ್ಪಿನ್ನರ್‌ಗಳ ಪ್ರಭಾವಿ ದಾಳಿ ಹಾಗೂ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಅಜೇಯ ಶತಕದ ನೆರವಿನಿಂದ ಭಾರತ ತಂಡ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಮೊದಲ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ಇಂಡೀಸ್ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದ ಮಿಥಾಲಿ ರಾಜ್ ಪಡೆ, ಸತತ 2ನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ.

ವೆಸ್ಟ್‌ಇಂಡೀಸ್ ನೀಡಿದ್ದ 184 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭಿಕ ಆಘಾತಕ್ಕೆ ಗುರಿಯಾಯಿತು. ಮೊದಲ ಓವರ್‌ನಲ್ಲೇ ಪೂನಮ್ ರಾವುತ್ ಔಟಾಗಿ ಹೊರನಡೆದರು. 33 ರನ್ ಗಳಿಸುವಷ್ಟರಲ್ಲಿ ತಂಡ ದೀಪ್ತಿ ಶರ್ಮಾ ವಿಕೆಟನ್ನೂ ಕಳೆದುಕೊಂಡಿತು.

ಸ್ಮತಿ-ಮಿಥಾಲಿ ಶತಕದ ಜೊತೆಯಾಟ:

 3ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡ 20 ವರ್ಷದ ಮಹಾರಾಷ್ಟ್ರ ಆಟಗಾರ್ತಿ ಸ್ಮತಿ ಹಾಗೂ ನಾಯಕಿ ಮಿಥಾಲಿ ರಾಜ್ ತಂಡಕ್ಕೆ ಆಸರೆಯಾದರು. ಇವರಿಬ್ಬರ ಜೊತೆಯಾಟ ಮುರಿಯಲು ವಿಂಡೀಸ್ ಬೌಲರ್‌ಗಳು ಹರಸಾಹಸ ಪಡಬೇಕಾಯಿತು. ಒಂದೆದೆ ಸ್ಮತಿ ಆಕ್ರಮಣಕಾರಿ ಆಟಕ್ಕೆ ಮುಂದಾದರೆ, ಮತ್ತೊಂದು ಬದಿಯಲ್ಲಿದ್ದ ಮಿಥಾಲಿ ಒಂಟಿ ರನ್‌ಗಳನ್ನು ಕದಿಯುತ್ತಾ ಉತ್ತಮ ಸಾಥ್ ನೀಡಿದರು. ಇವರಿಬ್ಬರು 3ನೇ ವಿಕೆಟ್‌ಗೆ108 ರನ್ ಪೇರಿಸಿದರು.

ಮಿಥಾಲಿ ಕೈತಪ್ಪಿದ ಸತತ 8ನೇ ಅರ್ಧಶತಕ: ಏಕದಿನ ಕ್ರಿಕೆಟ್‌ನಲ್ಲಿ ಸತತ 7 ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದ ಮಿಥಾಲಿ ರಾಜ್, 88 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 46 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಆ ಮೂಲಕ ಸತತ 8ಅರ್ಧಶತಕ ದಾಖಲಿಸುವ ಅವಕಾಶದಿಂದ ವಂಚಿತರಾದರು. ಮಿಥಾಲಿ ಔಟ್ ಆಗುವ ವೇಳೆಗೆ ಭಾರತ ಸುಸ್ಥಿತಿಯಲ್ಲಿತ್ತು.

ಒನ್ಡೇಯಲ್ಲಿ ಸ್ಮತಿ 2ನೇ ಶತಕ:

 ಮೊದಲ ಪಂದ್ಯದಲ್ಲಿ ಆಕರ್ಷಕ ೯೦ ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಮತಿ ಮಂಧನಾ ತಮ್ಮ ಬ್ಯಾಟಿಂಗ್ ಲಯ ಮುಂದುವರಿಸಿದರು. ವಿಂಡೀಸ್ ಬೌಲರ್‌ಗಳನ್ನು ಮನಬಂದಂತೆ ಚಚ್ಚಿದ ಸ್ಮತಿ ೧೦೮ ಎಸೆತಗಳಲ್ಲಿ ೧೩ ಬೌಂಡರಿ, ೨ ಸಿಕ್ಸರ್ ಸಹಾಯದಿಂದ ೧೦೬ ರನ್ ಗಳಿಸಿ ಅಜೇಯರಾಗಿ ಉಳಿದರು. ಸ್ಮತಿ ಬ್ಯಾಟ್‌ನಿಂದಲೇ ಗೆಲುವಿನ ಬೌಂಡರಿ ಮೂಡಿದ್ದು ವಿಶೇಷ. ಕಳೆದ ಪಂದ್ಯದಲ್ಲೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಸ್ಮತಿ, ಈ ಪಂದ್ಯದಲ್ಲೂ ಆ ಪ್ರಶಸ್ತಿಗೆ ಭಾಜನರಾದರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ವೆಸ್ಟ್‌ಇಂಡೀಸ್ ಭಾರತದ ಸ್ಪಿನ್ ದಾಳಿಗೆ ತತ್ತಿರಿಸಿತು. ೯೧ ರನ್ ಗಳಿಸುವಷ್ಟರಲ್ಲಿ ಕೆರಿಬಿಯನ್ ಪಡೆ ೬ ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದಾಗ ತಂಡಕ್ಕೆ ಶಾನಲ್ ಡಾಲೆ (೩೩) ಹಾಗೂ ಅಫೆ ಫ್ಲೆಚರ್ (೩೬) ನೆರವಾದರು.

ಇವರಿಬ್ಬರ ಆಟದ ಸಹಾಯದಿಂದ ವಿಂಡೀಸ್ ೫೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೮೩ ರನ್ ಗಳಿಸಿತು. ಭಾರತ ಪರ ಪೂನಮ್ ಯಾದವ್, ದೀಪ್ತಿ ಶರ್ಮಾ ಹಾಗೂ ಹರ್ಮನ್‌ಪ್ರೀತ್ ತಲಾ ೨ ವಿಕೆಟ್ ಕಬಳಿಸಿದರು.

click me!