ಜೂನಿಯರ್ ವರ್ಲ್ಡ್'ಕಪ್: ಇಂಗ್ಲೆಂಡ್ ವಿರುದ್ಧ ಗೆದ್ದ ಭಾರತ ಕ್ವಾರ್ಟರ್'ಫೈನಲ್'ಗೆ ಲಗ್ಗೆ

By Suvarna Web DeskFirst Published Dec 10, 2016, 2:06 PM IST
Highlights

1997 ಮತ್ತು 2001ರಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದೇ ತಂಡದ ಗರಿಷ್ಠ ಸಾಧನೆ ಎನಿಸಿದೆ. ಈ ಬಾರಿ ಈ ದಾಖಲೆಯನ್ನು ಭಾರತ ಮುರಿದುಹಾಕುವ ನಿರೀಕ್ಷೆಗಳು ಗರಿಗೆದರಿವೆ.

ಲಕ್ನೋ(ಡಿ. 10): ಭಾರತ ಹಾಕಿ ತಂಡವು ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯ ಕ್ವಾರ್ಟರ್'ಫೈನಲ್'ಗೆ ಲಗ್ಗೆ ಇಟ್ಟಿದೆ. ಶನಿವಾರ ನಡೆದ ಡಿ ಗುಂಪಿನ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಕಿರಿಯರು 5-3 ಗೋಲುಗಳಿಂದ ಭರ್ಜರಿ ಜಯ ಪಡೆದಿದ್ದಾರೆ. ಭಾರತದ ಪರ ಪರ್ವೀಂದರ್ ಸಿಂಗ್, ಅರ್ಮಾನ್ ಖುರೇಷಿ, ಹರ್ಮಾನ್'ಪ್ರೀತ್ ಸಿಂಗ್, ಸಿಮ್ರಾನ್'ಜೀತ್ ಸಿಂಗ್ ಮತ್ತು ವರುಣ್ ಕುಮಾರ್ ಗೋಲು ಗಳಿಸಿದ್ದಾರೆ. ಇಂಗ್ಲೆಂಡ್ ಪರ ಜ್ಯಾಕ್ ಕ್ಲೀ, ವಿಲ್ ಕ್ಯಾಲ್ಮನ್, ಎಡ್ವರ್ಡ್ ಹೋಬ್ಲರ್ ಗೋಲು ಗಳಿಸಿದ್ದಾರೆ. ಪಂದ್ಯ ಮುಗಿಯಲು 10 ನಿಮಿಷ ಇರುವವರೆಗೂ ಭಾರತ 5-1 ಮುನ್ನಡೆ ಹೊಂದಿತ್ತು. ಆದರೆ, 63 ಮತ್ತು 67ನೇ ನಿಮಿಷದಲ್ಲಿ ಇಂಗ್ಲೆಂಡ್ 2 ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿಕೊಂಡಿತು. ಇದೇ ವೇಳೆ, ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತದ ಹುಡುಗರು ಎಂಟರ ಹಂತದ ಪ್ರವೇಶವನ್ನು ಖಚಿತಪಡಿಸಿಕೊಂಡಿದ್ದಾರೆ.

ಡಿ ಗುಂಪಿನಲ್ಲಿ ಭಾರತಕ್ಕೆ ಇನ್ನೊಂದು ಪಂದ್ಯ ಬಾಕಿ ಇದ್ದು ಡಿ.12ರಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರುಗೊಳ್ಳಲಿದೆ. ತನ್ನ ಮೊದಲ ಗುಂಪಿನ ಪಂದ್ಯದಲ್ಲಿ ಭಾರತದ ಜೂನಿಯರ್ ಟೀಮ್ 4-0 ಗೋಲುಗಳಿಂದ ಕೆನಡಾವನ್ನು ಸದೆಬಡಿದಿತ್ತು. ಈ ಬಾರಿ ಬಲಿಷ್ಠವಾಗಿರುವ ಟೀಮ್ ಇಂಡಿಯಾ ಚೊಚ್ಚಲ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲೊಂದೆನಿಸಿದೆ. 1997 ಮತ್ತು 2001ರಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದೇ ತಂಡದ ಗರಿಷ್ಠ ಸಾಧನೆ ಎನಿಸಿದೆ. ಈ ಬಾರಿ ಈ ದಾಖಲೆಯನ್ನು ಭಾರತ ಮುರಿದುಹಾಕುವ ನಿರೀಕ್ಷೆಗಳು ಗರಿಗೆದರಿವೆ.

click me!