ಕೊನೆಗೂ ಆಂಗ್ಲರನ್ನು ಬಗ್ಗು ಬಡಿದ ಕೊಹ್ಲಿ ಬಾಯ್ಸ್

Published : Aug 22, 2018, 04:07 PM ISTUpdated : Sep 09, 2018, 09:34 PM IST
ಕೊನೆಗೂ ಆಂಗ್ಲರನ್ನು ಬಗ್ಗು ಬಡಿದ ಕೊಹ್ಲಿ ಬಾಯ್ಸ್

ಸಾರಾಂಶ

ನಾಲ್ಕನೇ ದಿನದಂತ್ಯಕ್ಕೆ ಇಂಗ್ಲೆಂಡ್ ತಂಡ 9 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿತ್ತು. ಅಂತಿಮ ದಿನ ಇಂಗ್ಲೆಂಡ್ ತಂಡ ಕೇವಲ ಆರು ರನ್ ಗಳಿಸಿತು. ಅಶ್ವಿನ್ ಕೊನೆಗೂ ಜೇಮ್ಸ್ ಆ್ಯಂಡರ್’ಸನ್ ಅವರ ವಿಕೆಟ್ ಕಬಳಿಸುವುದರೊಂದಿಗೆ ಇಂಗ್ಲೆಂಡ್ ಇನ್ನಿಂಗ್ಸ್’ಗೆ ತೆರೆ ಎಳೆದರು.

ನಾಟಿಂಗ್’ಹ್ಯಾಮ್[ಆ.22]: ಮೊದಲೆರಡು ಪಂದ್ಯಗಳಲ್ಲಿ ಮುಗ್ಗರಿಸಿ ಮುಖಭಂಗ ಅನುಭವಿಸಿದ್ದ ಟೀಂ ಇಂಡಿಯಾ ಕೊನೆಗೂ ಇಂಗ್ಲೆಂಡ್ ನೆಲದಲ್ಲಿ ಗೆಲುವಿನ ಕೇಕೆ ಹಾಕಿದೆ. ಮೂರನೇ ಟೆಸ್ಟ್’ನ ಅಂತಿಮ ದಿನ ವಿರಾಟ್ ಕೊಹ್ಲಿ ಪಡೆ ಕೊನೆಗೂ ಇಂಗ್ಲೆಂಡ್ ತಂಡವನ್ನು 203 ಅಂತರದಲ್ಲಿ ಮಣಿಸಿ ಟೂರ್ನಿಯಲ್ಲಿ ಕಮ್’ಬ್ಯಾಕ್ ಮಾಡಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-2ರ ಹಿನ್ನಡೆ ಸಾಧಿಸಿದೆ. 

ನಾಲ್ಕನೇ ದಿನದಂತ್ಯಕ್ಕೆ ಇಂಗ್ಲೆಂಡ್ ತಂಡ 9 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿತ್ತು. ಅಂತಿಮ ದಿನ ಇಂಗ್ಲೆಂಡ್ ತಂಡ ಕೇವಲ ಆರು ರನ್ ಗಳಿಸಿತು. ಅಶ್ವಿನ್ ಕೊನೆಗೂ ಜೇಮ್ಸ್ ಆ್ಯಂಡರ್’ಸನ್ ಅವರ ವಿಕೆಟ್ ಕಬಳಿಸುವುದರೊಂದಿಗೆ ಇಂಗ್ಲೆಂಡ್ ಇನ್ನಿಂಗ್ಸ್’ಗೆ ತೆರೆ ಎಳೆದರು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಮೊದಲ ಇನ್ನಿಂಗ್ಸ್’ನಲ್ಲಿ 329 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಪಾಂಡ್ಯ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 161 ರನ್’ಗಳಿಗೆ ಸರ್ವಪತನ ಕಾಣುವುದರೊಂದಿಗೆ 168 ರನ್’ಗಳ ಹಿನ್ನಡೆ ಅನುಭವಿಸಿತ್ತು. ಇನ್ನು ಎರಡನೇ ಇನ್ನಿಂಗ್ಸ್’ನಲ್ಲಿ ನಾಯಕ ಕೊಹ್ಲಿ ಬಾರಿಸಿದ ಭರ್ಜರಿ ಶತಕದ ನೆರವಿನಿಂದ 352 ರನ್ ಬಾರಿಸಿತ್ತು. ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್’ನಲ್ಲಿ ಜೋಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್ ಆಕರ್ಷಕ ಬ್ಯಾಟಿಂಗ್ ಹೊರತಾಗಿಯೂ ಬುಮ್ರಾ ಮಾರಕ ದಾಳಿಗೆ ಮಂಡಿಯೂರಿತು.

 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!
14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!