
ನವದೆಹಲಿ[ಸೆ.02]: ಭಾರತದ ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಅವರ ಬ್ಯಾಟಿಂಗ್ ಸಾಮರ್ಥ್ಯ ಕುರಿತು ಟ್ವೀಟರ್‌ನಲ್ಲಿ ಗೇಲಿ ಮಾಡಿದ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೆಕರ್ ಇದೀಗ ಜಾಲತಾಣಗಳಲ್ಲಿ ಭಾರೀ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಸಂಜಯ್ ತಮ್ಮ ಟ್ವೀಟರ್ ಖಾತೆಯಲ್ಲಿ, ‘ಯಾರಾದರೂ ತಮಗೆ ಏನನ್ನಾದರೂ ಸಾಧಿಸಲು ಸಾಮರ್ಥ್ಯವಿಲ್ಲ ಎಂದು ಕೊಂಡರೆ, ನಿಮಗೆ ಚೇತೇಶ್ವರ ಪೂಜಾರರನ್ನು ಮಾದರಿಯಾಗಿಸಿಕೊಳ್ಳಿ’ ಎಂದು ಹಾಕಿದ್ದರು.
‘ಸಂಜಯ್ ಏನಾದರೂ ಮಾತನಾಡಬೇಕಾದರೆ ನೂರು ಬಾರಿ ಯೋಚಿಸಿ, ನಿಮಗಿಂತ ನೂರರಷ್ಟು ಚೇತೇಶ್ವರ್ ಪೂಜಾರ ಉತ್ತಮ ಬ್ಯಾಟ್ಸ್‌ಮನ್’ ಎಂದಿದ್ದಾರೆ, ‘ನಿಮಗೆ ರೋಹಿತ್ ಮಾತ್ರ ಉತ್ತಮ ಬ್ಯಾಟ್ಸ್‌ಮನ್ ಪೂಜಾರ ಏಕೆ ಅಲ್ಲ’ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಪೂಜಾರ ನಾಲ್ಕನೇ ಟೆಸ್ಟ್’ನ ಮೊದಲ ಇನ್ನಿಂಗ್ಸ್’ನಲ್ಲಿ ಅಜೇಯ 132 ರನ್ ಸಿಡಿಸುವ ಮೂಲಕ ಭಾರತ ತಂಡಕ್ಕೆ ಅಲ್ಪ ಮುನ್ನಡೆ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.