ಲಂಚ್ ಬ್ರೇಕ್ ವೇಳೆಗೆ ಟೀಂ ಇಂಡಿಯಾ ಮೇಲುಗೈ

Published : Aug 30, 2018, 05:57 PM ISTUpdated : Sep 09, 2018, 08:47 PM IST
ಲಂಚ್ ಬ್ರೇಕ್ ವೇಳೆಗೆ ಟೀಂ ಇಂಡಿಯಾ ಮೇಲುಗೈ

ಸಾರಾಂಶ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ಇಂಗ್ಲೆಂಡ್’ಗೆ ಆರಂಭದಲ್ಲೇ ಬುಮ್ರಾ ಶಾಕ್ ನೀಡಿದರು. ತಂಡ ಒಂದು ರನ್’ಗಳಿಸುವಷ್ಟರಲ್ಲೇ ಆರಂಭಿಕ ಜೆನ್ನಿಂಗ್ಸ್ ವಿಕೆಟ್ ಕಳೆದುಕೊಂಡಿತು.

ಸೌತಾಂಪ್ಟನ್[ಆ.30]: ಭಾರತ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್’ನ ಮೊದಲ ದಿನದಾಟದ ಊಟದ ವಿರಾಮದ ವೇಳೆಗೆ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಲಂಚ್ ಬ್ರೇಕ್ ವೇಳೆಗೆ ಇಂಗ್ಲೆಂಡ್ ತಂಡ 4 ವಿಕೆಟ್ ಕಳೆದುಕೊಂಡು 57 ರನ್ ಕಲೆ ಹಾಕಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ಇಂಗ್ಲೆಂಡ್’ಗೆ ಆರಂಭದಲ್ಲೇ ಬುಮ್ರಾ ಶಾಕ್ ನೀಡಿದರು. ತಂಡ ಒಂದು ರನ್’ಗಳಿಸುವಷ್ಟರಲ್ಲೇ ಆರಂಭಿಕ ಜೆನ್ನಿಂಗ್ಸ್ ವಿಕೆಟ್ ಕಳೆದುಕೊಂಡಿತು. ಇದಾದ ಕೆಲ ಹೊತ್ತಿನಲ್ಲೇ ಇಶಾಂತ್ ಶರ್ಮಾ ಇಂಗ್ಲೆಂಡ್ ನಾಯಕ ಜೋ ರೂಟ್ ಅವರನ್ನು ಬಲಿ ಪಡೆದು ಆಂಗ್ಲರಿಗೆ ಎರಡನೇ ಶಾಕ್ ನೀಡಿದರು. ಆ ಬಳಿಕ ಬುಮ್ರಾ ಮತ್ತೆ ಇಂಗ್ಲೆಂಡ್’ಗೆ ಶಾಕ್ ನೀಡಿದರು. ಜಾನಿ ಬೈರ್’ಸ್ಟೋ ಅವರನ್ನು ಪೆವಿಲಿಯನ್’ಗೆ ಅಟ್ಟುವ ಮೂಲಕ ಬುಮ್ರಾ ವೈಯುಕ್ತಿಕ ಎರಡನೇ ವಿಕೆಟ್ ಕಬಳಿಸಿದರು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ನೆಲಕಚ್ಚಿ ಆಡುವ ಪ್ರಯತ್ನ ನಡೆಸಿದ ಅನುಭವಿ ಆರಂಭಿಕ ಬ್ಯಾಟ್ಸ್’ಮನ್ ಆಲಿಸ್ಟರ್ ಕುಕ್ 55 ಎಸೆತಗಳಲ್ಲಿ 17 ರನ್ ಬಾರಿಸಿ ಹಾರ್ದಿಕ್ ಪಾಂಡ್ಯ ಬೌಲಿಂಗ್’ನಲ್ಲಿ ವಿರಾಟ್ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್’ಗೆ ಪೆವಿಲಿಯನ್ ಸೇರಬೇಕಾಗಿ ಬಂತು. ಆಗ ಇಂಗ್ಲೆಂಡ್ ತಂಡದ ಮೊತ್ತ 36/4 ಆಗಿತ್ತು

ಆರಂಭಿಕ ಆಘಾತದ ಬಳಿಕ ಮೇಲ್ನೋಟಕ್ಕೆ ಚೇತರಿಸಿಕೊಂಡಂತೆ ಕಂಡುಬಂದ ಇಂಗ್ಲೆಂಡ್ ಬೆನ್ ಸ್ಟೋಕ್ಸ್[12] ಹಾಗೂ ಜೋಸ್ ಬಟ್ಲರ್[13] ಕ್ರೀಸ್’ನಲ್ಲಿದ್ದಾರೆ. ಭಾರತ ಪರ ಬುಮ್ರಾ 2, ಇಶಾಂತ್ ಹಾಗೂ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ

ಸಂಕ್ಷಿಪ್ತ ಸ್ಕೋರ್:

ಇಂಗ್ಲೆಂಡ್: 27/4

ಕುಕ್: 7

ಬಟ್ಲರ್: 13*

ಬುಮ್ರಾ: 21/2

[*ಊಟದ ವಿರಾಮದ ವೇಳೆಗೆ]
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ ಐಪಿಎಲ್ ಟೂರ್ನಿಗೆ ವೇಳಾಪಟ್ಟಿ ಫಿಕ್ಸ್; ಫ್ರಾಂಚೈಸಿಗಳಿಗೆ ಬಿಸಿಸಿಐ ಮಹತ್ವದ ಅಪ್‌ಡೇಟ್ಸ್‌! ಬೆಂಗಳೂರಲ್ಲಿ ಉದ್ಘಾಟನಾ ಮ್ಯಾಚ್?
ಮೆಸ್ಸಿಯ ದೆಹಲಿ ಡೈರಿ: ಮುಂಬರುವ ಟಿ20 ವಿಶ್ವಕಪ್‌ಗೆ ಆಹ್ವಾನಿಸಿದ ಐಸಿಸಿ ಅಧ್ಯಕ್ಷ ಜಯ್ ಶಾ!