
ಐರ್ಲೆಂಡ್(ಜೂ.26): ಐರ್ಲೆಂಡ್ ವಿರುದ್ದದ 2 ಟಿ-ಟ್ವೆಂಟಿ ಪಂದ್ಯಕ್ಕಾಗಿ ಟೀಂ ಇಂಡಿಯಾ ಕ್ರಿಕೆಟಿಗರು ಡಬ್ಲಿನ್‌ಗೆ ಬಂದಿಳಿದಿದ್ದಾರೆ. ಇಂಗ್ಲೆಂಡ್ ನಿಂದ ಐರ್ಲೆಂಡ್ ನಡುವಿನ ವಿಮಾನ ಪ್ರಯಾಣದಲ್ಲಿ ಕೊಹ್ಲಿ ಬಾಯ್ಸ್ ಸಖತ್ ಮಸ್ತಿ ಮಾಡಿದ್ದಾರೆ.
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪ್ರಶ್ನೆಗೆ ಸಹ ಆಟಗಾರರು ಉತ್ತರಿಸಿದರು. ನಾಯಕ ವಿರಾಟ್ ಕೊಹ್ಲಿ ಸರಣಿ ನೆನಪುಗಳನ್ನ ಬಿಚ್ಚಿಟ್ಟರೆ, ಮನೀಶ್ ಪಾಂಡೆ ತಮ್ಮ ಹೊಸ ಹೇರ್‌ಸ್ಟೈಲ್‌ಗೆ ಸ್ಪೂರ್ತಿ ಯಾರು ಅನ್ನೋದನ್ನ ಹೇಳಿದ್ದಾರೆ.
ದಿನೇಶ್ ಕಾರ್ತಿಕ್ ಹಾಗೂ ಕೆಎಲ್ ರಾಹುಲ್, ಪ್ರಶ್ನೆ ಕೇಳುತ್ತಿದ್ದ ಹಾರ್ದಿಕ್ ಪಾಂಡ್ಯಾಗೆ ಮರು ಪ್ರಶ್ನೆ ಹಾಕಿ ತಬ್ಬಿಬ್ಬು ಮಾಡಿದರು. ಇಡೀ ಪ್ರಯಾಣದಲ್ಲಿ ಭಾರತೀಯ ಕ್ರಿಕೆಟಿಗರು ಎಂಜಾಯ್ ಮಾಡಿದ್ದಾರೆ. ಜೂನ್ 27 ಹಾಗೂ 29 ರಂದು ಐರ್ಲೆಂಡ್ ವಿರುದ್ಧ ಭಾರತ 2 ಟಿ-ಟ್ವೆಂಟಿ ಪಂದ್ಯ ಆಡಲಿದೆ.
ಟೀಂ ಇಂಡಿಯಾ ಕ್ರಿಕೆಟಿಗರ ವಿಮಾನ ಪ್ರಯಾಣದ ಮಸ್ತಿ ವಿಡೀಯೋಗಾಗಿ ಇಲ್ಲಿ ಕ್ಲಿಕ್ ಮಾಡಿ:
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.