ವಿಶ್ವಕಪ್ ಮೀಸಲು ಆಟಗಾರನಾಗಿ ಅನುಭವಿ ಟೀಂ ಇಂಡಿಯಾ ಕ್ರಿಕೆಟಿಗನಿಗೆ ಸ್ಥಾನ

By Web Desk  |  First Published May 8, 2019, 9:46 AM IST

ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಟೀಂ ಇಂಡಿಯಾ ಮೀಸಲು ಆಟಗಾರಾಗಿ ಅಂಬಟಿ ರಾಯುಡು, ರಿಷಭ್ ಪಂತ್ ಹಾಗೂ ನವ್’ದೀಪ್ ಶೈನಿ ಸ್ಥಾನ ಪಡೆದಿದ್ದರು. ಇದೀಗ ಮತ್ತೋರ್ವ ಡೆಲ್ಲಿ ಕ್ರಿಕೆಟಿಗ ವಿಶ್ವಕಪ್ ಆಡುವ ಕನಸು ಕಾಣುತ್ತಿದ್ದಾರೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗ ನೀವೇ ನೋಡಿ...


ಮುಂಬೈ[ಮೇ.08]: ಮುಂಬರುವ ಏಕದಿನ ವಿಶ್ವಕಪ್‌ಗೆ ಭಾರತ ತಂಡದ ಮೀಸಲು ಆಟಗಾರನನ್ನಾಗಿ ವೇಗಿ ಇಶಾಂತ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. 

ಈಗಾಗಲೇ ರಿಷಭ್ ಪಂತ್, ಅಂಬಟಿ ರಾಯುಡು ಹಾಗೂ ನವ್‌ದೀಪ್ ಸೈನಿ ಅವರನ್ನು ಮೀಸಲು ಆಟಗಾರರನ್ನಾಗಿ ಬಿಸಿಸಿಐ ಆಯ್ಕೆ ಮಾಡಿದ್ದು, ಇದೀಗ 4ನೇ ಆಟಗಾರನನ್ನಾಗಿ ಇಶಾಂತ್ ಶರ್ಮಾರನ್ನು ಆಯ್ಕೆ ಮಾಡಿದೆ.

Tap to resize

Latest Videos

undefined

ಕೇದಾರ್ ಇಂಜುರಿ-ವಿಶ್ವಕಪ್‌ಗೆ ಹಿರಿಯ ಆಲ್ರೌಂಡರ್‌ ಆಯ್ಕೆಗಾಗಿ ಟ್ವಿಟರಿಗರ ಆಗ್ರಹ!

‘ನಮ್ಮ ಮೊದಲ ಆಯ್ಕೆ ನವದೀಪ್ ಸೈನಿ ಆಗಿದ್ದು, ಇಶಾಂತ್ 2ನೇ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಇಶಾಂತ್ ಶರ್ಮಾ ಅವರಿಗೆ ಬೌಲಿಂಗ್ ಮಾಡಿದ ಅನುಭವ ಇದೆ. ಈ ಹಿಂದೆ ಇಶಾಂತ್ ಶರ್ಮಾ, ಭಾರತ ತಂಡದಲ್ಲಿ ಆಡುವ ಅವಕಾಶ ದೊರೆಯದಿದ್ದಾಗ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಟೂರ್ನಿಗಳನ್ನು ಆಡಿದ್ದು, ಉತ್ತಮ ಪ್ರದರ್ಶನ ತೋರಿರುವ ದಾಖಲೆಯಿದೆ. ಅಲ್ಲದೇ ಐಪಿಎಲ್‌ನಲ್ಲೂ ಇಶಾಂತ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 

ಇಲ್ಲಿದೆ ನೋಡಿ ವಿಶ್ವಕಪ್ ಟೂರ್ನಿಗೆ ರೆಡಿಯಾದ 10 ತಂಡಗಳ ಸಂಪೂರ್ಣ ಪಟ್ಟಿ

ಇಶಾಂತ್ ಶರ್ಮಾ, 2016ರ ಜನವರಿಯಿಂದ ಟೀಂ ಇಂಡಿಯಾ ಪರ ಯಾವುದೇ ಏಕದಿನ ಪಂದ್ಯವನ್ನಾಡಿಲ್ಲ. ಆದರೆ, ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ದಾಳಿ ಸಂಘಟಿಸಿ ಗಮನ ಸೆಳೆದಿದ್ದಾರೆ. 2019ರ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ. 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಭಾರತ ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ಇನ್ನು ಪಾಕಿಸ್ತಾನ ವಿರುದ್ಧ ಜೂನ್ 16ರಂದು ಭಾರತ ಕಾದಾಡಲಿದೆ.  

click me!