ಪ್ಲೆಸಿಸ್ ಮೇಲಿನ ಆರೋಪ ಸಾಬೀತು

By Suvarna Web DeskFirst Published Nov 19, 2016, 10:01 AM IST
Highlights

ಪ್ಲೆಸಿಸ್ ಅವರು, ಐಸಿಸಿ ನೀತಿ ಸಂಹಿತೆ 2.2.9ನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ

- ಐಸಿಸಿ ಪ್ರಕಟಣೆ

ದುಬೈ(ನ.19): ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ತಮ್ಮ ಜೊಲ್ಲನ್ನು ಚೆಂಡಿಗೆ ಸವರುವ ಮೂಲಕ ಚೆಂಡನ್ನು ವಿರೂಪಗೊಳಿಸಲು ಯತ್ನಿಸಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಹಂಗಾಮಿ ನಾಯಕ ಫಾಫ್ ಡು ಪ್ಲೆಸಿಸ್ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಮುಂದಾಗಿದೆ.

ಈ ಬಗ್ಗೆ ಪಂದ್ಯದ ಅಧಿಕಾರಿಗಳಿಂದ ಯಾವುದೇ ದೂರು ಬಾರದಿದ್ದರೂ ಮಾಧ್ಯಮಗಳಲ್ಲಿ ಬಂದ ವೀಡಿಯೊ ತುಣುಕುಗಳನ್ನಾಧರಿಸಿ ಐಸಿಸಿ ಪ್ರಕರಣವನ್ನು ತನಿಖೆಗೊಳಪಡಿಸಿತ್ತು. ಅದರಲ್ಲಿ ಪ್ಲೆಸಿಸ್ ಅವರು, ಐಸಿಸಿ ನೀತಿ ಸಂಹಿತೆ 2.2.9ನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ಐಸಿಸಿಯು ಶುಕ್ರವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ತಪ್ಪೊಪ್ಪಿಕೊಳ್ಳದ ಪ್ಲೆಸಿಸ್: ಐಸಿಸಿಯು ತಮ್ಮ ಮೇಲೆ ಹೊರಿಸಿರುವ ಆರೋಪವನ್ನು ಪ್ಲೆಸಿಸ್ ಅಲ್ಲಗಳೆದಿದ್ದಾರೆ. ತಮ್ಮಿಂದೇನೂ ತಪ್ಪಾಗಿಲ್ಲ ಎಂದಿರುವ ಅವರು, ಐಸಿಸಿಯ ಆರೋಪದ ಬಗ್ಗೆ ಕಾನೂನು ಸಲಹೆ ಪಡೆಯುವುದಾಗಿ ತಿಳಿಸಿದ್ದಾರೆ.

 

click me!