
ಆ್ಯಂಟಿಗುವಾ(ಜು.01): ನಾನು ವೈನ್ ಇದ್ದಂತೆ, ದಿನ ಕಳೆದಂತೆ ಉತ್ತಮವಾಗುತ್ತಾ ಸಾಗುತ್ತೇನೆ ಎಂದು ಮಹೇಂದ್ರ ಸಿಂಗ್ ಧೋನಿ ಚಟಾಕಿ ಹಾರಿಸಿದ್ದಾರೆ.
ವೆಸ್ಟ್‌ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಸಮಯೋಚಿತ ಅರ್ಧಶತಕ ಗಳಿಸಿದ (78 ರನ್) ಮಾಹಿ, ಬಹು ದಿನಗಳ ಬಳಿಕ ಉತ್ತಮ ಇನ್ನಿಂಗ್ಸ್ ಕಟ್ಟಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸುದ್ದಿಗಾರರ ಪ್ರಶ್ನೆಗೆ ಹಾಸ್ಯ ದಾಟಿಯಲ್ಲಿ ಉತ್ತರ ನೀಡಿದ ಅವರು, ‘ನಾನು ವೈನ್ ಇದ್ದಂತೆ, ವಯಸ್ಸಾದಂತೆ ಮತ್ತಷ್ಟು ಉತ್ತಮಗೊಳ್ಳುತ್ತೇನೆ’ ಎಂದಿದ್ದಾರೆ.
‘ಕಳೆದ ಒಂದು, ಒಂದುವರೆ ವರ್ಷದಿಂದ ತಂಡದ ಮೇಲ್ಪಂಕ್ತಿ ಆಟಗಾರರು ಉತ್ತಮ ಮೊತ್ತ ಪೇರಿಸುತ್ತಿದ್ದಾರೆ. ಹಾಗಾಗಿ ಕೆಳಕ್ರಮಾಂಕದಲಲ್ಲಿ ನನಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗುತ್ತಿರಲಿಲ್ಲ. ಇಂದು ನನಗೆ ಅವಕಾಶ ಸಿಕ್ಕಿದ್ದು ಹಿತ ಎನಿಸಿತು ಹಾಗೂ ಉತ್ತಮ ರನ್ ಕಲೆಹಾಕಲು ಸಾಧ್ಯವಾಯಿತು. ನಾವು 250 ರನ್ ಗಳಿಸಬೇಕೆಂದು ಲೆಕ್ಕಾಚಾರ ಹಾಕಿದ್ದೆ, ಕೇದಾರ್ ಜಾಧವ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಅದನ್ನು ದಾಖಲಿಸಿದೆವು’ ಎಂದು ಹೇಳಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಸರಿಸುಮಾರು 2 ವರ್ಷಗಳ ಬಳಿಕ ಏಕದಿನ ಕ್ರಿಕೆಟ್'ನಲ್ಲಿ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.