ಗಂಭೀರ್ ಅರ್ಜಿ ತಳ್ಳಿ ಹಾಕಿದ ಹೈಕೋರ್ಟ್

By Suvarna Web DeskFirst Published Dec 14, 2017, 4:57 PM IST
Highlights

ದೆಹಲಿಯ ಗುರ್'ಗಾಂವ್ ಹಾಗೂ ಹವ್ಲಾಟ್'ನಲ್ಲಿ ಡಿಎಪಿ ಅಂಡ್ ಕಂಪನಿಯವರು ಗೌತಮ್ ಗಂಭೀರ್ ಹೆಸರಿನಲ್ಲಿ ನಡೆಸುತ್ತಿದ್ದ ಬಾರ್ ಹೆಸರನ್ನು ಬದಲಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಪಿ ಗರ್ಗ್ ತಳ್ಳಿಹಾಕಿದ್ದಾರೆ.

ನವದೆಹಲಿ(ಡಿ.14): ಬಾರ್ & ರೆಸ್ಟೋರೆಂಟ್'ವೊಂದಕ್ಕೆ ತಮ್ಮ ಹೆಸರಿಟ್ಟಿದ್ದು, ಪ್ರಶ್ನಿಸಿ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ದೆಹಲಿಯ ಗುರ್'ಗಾಂವ್ ಹಾಗೂ ಹವ್ಲಾಟ್'ನಲ್ಲಿ ಡಿಎಪಿ ಅಂಡ್ ಕಂಪನಿಯವರು ಗೌತಮ್ ಗಂಭೀರ್ ಹೆಸರಿನಲ್ಲಿ ಬಾರ್ ನಡೆಸುತ್ತಿವೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದು ಜನರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್'ಪಿ ಗರ್ಗ್ ಬಾರ್ ಮಾಲೀಕರ ಹೆಸರೂ ಕೂಡಾ ಗೌತಮ್ ಗಂಭೀರ್ ಆಗಿರುವುದರಿಂದ ಅದೇ ಹೆಸರಿಟ್ಟಿರುವುದಾಗಿ ಬಾರ್ ಮಾಲೀಕರ ಪರ ವಕೀಲರು ವಾದಿಸಿದ್ದರು.  ಹೀಗಾಗಿ ಗಂಭೀರ್ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

click me!