
ರಿಯೋ ಡಿ ಜನೈರೋ(ಸೆ.15): ಪ್ಯಾರಾಲಿಂಪಿಕ್ಸ್ನ 1500 ಮೀಟರ್ ಪುರುಷರ ಟಿ13 ಕ್ಲಾಸ್ ಓಟದಲ್ಲಿ ರಿಯೋ ಒಲಿಂಪಿಕ್ಸ್ ಚಾಂಪಿಯನ್ಗೆ ಅಲ್ಗೇರಿಯಾದ ಅಬ್ದೆಲ್ಲಾತಿಫ್ ಬಕ ಸೆಡ್ಡು ಹೊಡೆದಿದ್ದಾರೆ.
ಪುರುಷರ ಟಿ13 ಕ್ಲಾಸ್ ಪ್ಯಾರಾಲಿಂಪಿಕ್ಸ್ ಸ್ಪರ್ಧೆಯಲ್ಲಿ ಮಿಂಚಿನ ವೇಗದಲ್ಲಿ ಓಡಿದ ಅಬ್ದೆಲ್ಲಾತಿಫ್ ಚಿನ್ನದ ಪದಕ ಗೆದ್ದುಕೊಂಡರು. ವಿಶೇಷ ಅಂದ್ರೆ ಅಬ್ದೆಲ್ಲಾತಿಫ್, ರಿಯೋ ಒಲಿಂಪಿಕ್ಸ್ ನಲ್ಲಿ ಸ್ವರ್ಣ ಗೆದ್ದಿರುವ ಅಮೆರಿಕದ ಅಥ್ಲೀಟ್ ಮ್ಯಾಥ್ಯೂ ಸೆಂಟ್ರೋವಿಝ್ ಗಿಂತಲೂ ವೇಗವಾಗಿ ಓಡಿ, ಬೇಗನೆ ಗುರಿಮುಟ್ಟಿದ್ದಾರೆ.
ಚಿನ್ನಕ್ಕೆ ಕೊರಳೊಡ್ಡಿದ ಅಬ್ದೆಲ್ಲಾತಿಫ್ 3:48:29ರಲ್ಲಿ 1500 ಮೀಟರ್ ಓಡಿದ್ರು. ರಿಯೋ ಒಲಿಂಪಿಕ್ಸ್ ನಲ್ಲಿ ನಡೆದ 1500 ಮೀಟರ್ ಸ್ಪರ್ಧೆಯಲ್ಲಿ ಬಂಗಾರ ಗೆದ್ದಿರುವ ಮ್ಯಾಥ್ಯೂ 3:50:00 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.