ತವರಿನಲ್ಲಿ ಹ್ಯಾಟ್ರಿಕ್ ಸೋಲಿಗೆ ಸಾಕ್ಷಿಯಾದ ದಬಾಂಗ್ ಡೆಲ್ಲಿ

By Suvarna Web DeskFirst Published Sep 25, 2017, 12:15 AM IST
Highlights

ಮೊದಲಾರ್ಧದಲ್ಲೇ ಎರಡು ಬಾರಿ ಆಲೌಟ್ ಆದ ದಬಾಂಗ್ ಡೆಲ್ಲಿ ಆ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ರೈಡಿಂಗ್ ಹಾಗೂ ಡಿಫೆನ್ಸ್ ವಿಭಾಗದಲ್ಲಿ ಆಲ್ರೌಂಡ್ ಆಟ ಪ್ರದರ್ಶಿಸಿದ ಹರ್ಯಾಣ ಅರ್ಹವಾಗಿಯೇ ಜಯಭೇರಿ ಬಾರಿಸಿತು.(ಸಾಂದರ್ಭಿಕ ಚಿತ್ರ)

ವರದಿ: ನವೀನ್ ಕೊಡಸೆ

ನವದೆಹಲಿ(ಸೆ.24): ಆರಂಭದಿಂದಲೂ ಏಕಪಕ್ಷೀಯವಾಗಿ ಸಾಗಿದ ಪಂದ್ಯದಲ್ಲಿ ದಬಾಂಗ್ ಡೆಲ್ಲಿಯನ್ನು 42-24 ಅಂಕಗಳ ಅಂತರದಲ್ಲಿ ಅನಾಯಾಸವಾಗಿ ಮಣಿಸಿದ ಹರಿಯಾಣ ಸ್ಟೀಲರ್ಸ್ ಅಂಕಪಟ್ಟಿಯಲ್ಲಿ ಎ ವಲಯದಲ್ಲಿ 9ನೇ ಜಯದೊಂದಿಗೆ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟರೆ, ದಬಾಂಗ್ ಡೆಲ್ಲಿ ತವರಿನಲ್ಲಿ ಸತತ ಮೂರನೇ, ಒಟ್ಟಾರೆ ಐದನೇ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿತು.

ಆರಂಭದಿಂದಲೂ ಆಕ್ರಮಣಕಾರಿಯಾಟವಾಡಿದ ಸುರೇಂದರ್ ನಾಡಾ ಪಡೆ ಮೊದಲಾರ್ಧದಲ್ಲೇ ಡೆಲ್ಲಿಯನ್ನು 7ನಿ.ದಲ್ಲಿ ಹಾಗೂ 15 ನೇ ನಿಮಿಷದಲ್ಲಿ ಎರಡು ಬಾರಿ ಆಲೌಟ್ ಮಾಡಿತು. ಮೊದಲಾರ್ಧದ ಮುಕ್ತಾಯದ ವೇಳಗೆ ಹರ್ಯಾಣ ಸ್ಟೀಲರ್ಸ್ 23-09 ಅಂಕಗಳ ಮುನ್ನಡೆ ಸಾಧಿಸಿತ್ತು.

ದ್ವಿತಿಯಾರ್ಧದಲ್ಲೂ ಸಂಘಟಿತ ಪ್ರದರ್ಶನ ತೋರಿದ ಸ್ಟೀಲರ್ಸ್ ಪಂದ್ಯದ 28ನೇ ನಿಮಿಷದಲ್ಲಿ ಡೆಲ್ಲಿಯನ್ನು ಮತ್ತೊಮ್ಮೆ ಆಲೌಟ್ ಮಾಡಿತು. ಈ ವೇಳೆ ಮತ್ತೆ ಸ್ಟೀಲರ್ಸ್ 32-15 ಅಂಕಗಳ ಮುನ್ನಡೆ ಸಾಧಿಸಿತು. ರೈಡಿಂಗ್’ನಲ್ಲಿ ಪ್ರಾಬಲ್ಯ ಮೆರೆದ ಸ್ಟೀಲರ್ಸ್ ಅಂತಿಮವಾಗಿ ಭಾರೀ ಅಂತರದಿಂದ ಪಂದ್ಯವನ್ನು ಕೈವಶ ಮಾಡಿಕೊಂಡಿತು.

ಟರ್ನಿಂಗ್  ಪಾಯಿಂಟ್: ಮೊದಲಾರ್ಧದಲ್ಲೇ ಎರಡು ಬಾರಿ ಆಲೌಟ್ ಆದ ದಬಾಂಗ್ ಡೆಲ್ಲಿ ಆ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ರೈಡಿಂಗ್ ಹಾಗೂ ಡಿಫೆನ್ಸ್ ವಿಭಾಗದಲ್ಲಿ ಆಲ್ರೌಂಡ್ ಆಟ ಪ್ರದರ್ಶಿಸಿದ ಹರ್ಯಾಣ ಅರ್ಹವಾಗಿಯೇ ಜಯಭೇರಿ ಬಾರಿಸಿತು.

ಶ್ರೇಷ್ಠ ರೈಡರ್: ದೀಪಕ್ ಕುಮಾರ್ ದಹಿಯಾ(6 ಅಂಕ)

ಶ್ರೇಷ್ಠ ಡಿಫೆಂಡರ್: ರಾಕೇಶ್ ಕುಮಾರ್(7 ಅಂಕ)

click me!