ಆಂಗ್ಲರ ಟಿ20 ಲೀಗ್ ಆಡಲಿರುವ ಹರ್ಮನ್'ಪ್ರೀತ್ ಕೌರ್

Published : May 28, 2017, 08:39 PM ISTUpdated : Apr 11, 2018, 12:46 PM IST
ಆಂಗ್ಲರ ಟಿ20 ಲೀಗ್ ಆಡಲಿರುವ ಹರ್ಮನ್'ಪ್ರೀತ್ ಕೌರ್

ಸಾರಾಂಶ

ಬಿಗ್‌'ಬ್ಯಾಶ್‌'ನಲ್ಲಿ ಹರ್ಮನ್‌ಪ್ರೀತ್‌, ಸಿಡ್ನಿ ಥಂಡರ್‌ ತಂಡವನ್ನು ಪ್ರತಿನಿಧಿಸಿದ್ದರು.

ಮುಂಬೈ(ಮೇ.28): ಆಸ್ಪ್ರೇಲಿಯಾದ ಮಹಿಳಾ ಬಿಗ್‌ ಬ್ಯಾಶ್‌ ಲೀಗ್‌'ನಲ್ಲಿ ಆಡಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎನ್ನುವ ದಾಖಲೆ ಬರೆದಿದ್ದ ಸ್ಟಾರ್‌ ಆಲ್ರೌಂಡರ್‌ ಹರ್ಮನ್‌ಪ್ರೀತ್‌ ಕೌರ್‌, ಇಂಗ್ಲೆಂಡ್‌'ನಲ್ಲಿ ನಡೆಯಲಿರುವ ಮಹಿಳಾ ಟಿ20 ಪಂದ್ಯಾವಳಿಯಲ್ಲಿ ಆಡಲಿದ್ದಾರೆ. ಸರ್ರೆ ಸ್ಟಾರ್ಸ್ ತಂಡದಲ್ಲಿ ಹರ್ಮನ್‌ಪ್ರೀತ್‌ ಆಡುವ ವಿಚಾರವನ್ನು ಬಿಸಿಸಿಐ ಖಚಿತಪಡಿಸಿದೆ.

ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಸಂಸ್ಥೆ (ಇಸಿಬಿ) ನಡೆಸುವ ಟಿ20 ಪಂದ್ಯಾವಳಿ ಇದಾ­ಗಿದ್ದು, 6 ತಂಡಗಳು ಪಾಲ್ಗೊಳ್ಳಲಿವೆ. ಆಗಸ್ಟ್‌ 10ರಿಂದ ಪಂದ್ಯಾವಳಿ ಆರಂಭಗೊಳ್ಳಲಿದ್ದು, ಲೀಗ್‌ ಹಂತದಲ್ಲಿ 6 ತಂಡಗಳು ತಲಾ ಒಮ್ಮೆ ಮುಖಾಮುಖಿಯಾಗಲಿವೆ. ಅಗ್ರಸ್ಥಾನ ಪಡೆ­ಯುವ ತಂಡ, ನೇರವಾಗಿ ಫೈನಲ್‌ ಪ್ರವೇಶಿಸಿ­ದರೆ 2ನೇ ಹಾಗೂ 3ನೇ ಸ್ಥಾನ ಪಡೆಯುವ ತಂಡಗಳು, ಫೈನಲ್‌ ಸ್ಥಾನಕ್ಕಾಗಿ ಸೆಣಸಾಡಲಿವೆ ಎಂದು ಟೂರ್ನಿಯ ಮಾದರಿಯನ್ನು ಆಯೋಜಕರು ತಿಳಿಸಿದ್ದಾರೆ.

ಬಿಗ್‌'ಬ್ಯಾಶ್‌'ನಲ್ಲಿ ಹರ್ಮನ್‌ಪ್ರೀತ್‌, ಸಿಡ್ನಿ ಥಂಡರ್‌ ತಂಡವನ್ನು ಪ್ರತಿನಿಧಿಸಿದ್ದರು. 12 ಇನ್ನಿಂಗ್ಸ್‌ಗಳಲ್ಲಿ 59.20 ಸರಾಸರಿಯೊಂದಿಗೆ 296 ರನ್‌ ಕಲೆಹಾಕುವ ಮೂಲಕ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದ ಭಾರತ ಟಿ20 ತಂಡದ ನಾಯಕಿ, ಬೌಲಿಂಗ್'ನಲ್ಲಿ 6 ವಿಕೆಟ್‌'ಗಳನ್ನೂ ಕಬಳಿಸಿದ್ದರು. ಸಿಡ್ನಿ ಥಂಡರ್‌ ತಂಡ ಪಂದ್ಯಾವಳಿಯ ಶ್ರೇಷ್ಠ ಆಟಗಾರ್ತಿ ಗೌರವವನ್ನು ಹರ್ಮನ್‌'ಪ್ರೀತ್‌'ಗೆ ನೀಡಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್ 19 ಏಷ್ಯಾಕಪ್ ಫೈನಲ್: ಪಾಕ್ ಎದುರು ಮುಗ್ಗರಿಸಿದ ಭಾರತ; ವೈಭವ್ ಸೂರ್ಯವಂಶಿ ಕನಸು ನುಚ್ಚುನೂರು!
2026ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ಬದಲಾವಣೆ!