ಸಿಬ್ಬಂದಿಗಳೊಂದಿಗೆ ಅಮಾನವೀಯವಾಗಿ ವರ್ತಿಸಿದ ಲಂಕಾ ಮಂಡಳಿ

By Suvarna Web DeskFirst Published Jul 13, 2017, 4:55 PM IST
Highlights

ಈ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ತಿಲಂಗ ಸಮತಿಪಾಲ ಸಿಬ್ಬಂದಿಗಳ ಕ್ಷಮೆ ಕೋರಿದ್ದಾರೆ.

ಕೊಲಂಬೊ(ಜು.13): ಹಂಬನ್'ಟೋಟಾ ಕ್ರೀಡಾಂಗಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ 12 ಮಂದಿ ಅರೆಕಾಲಿಕ ಸಿಬ್ಬಂದಿಗಳಿಗೆ ನೀಡಿದ್ದ ಸಮವಸ್ತ್ರವನ್ನು ಕಿತ್ತುಕೊಂಡು ಅರೆನಗ್ನಾವಸ್ಥೆಯಲ್ಲೇ ಅವರನ್ನು ಮೈದಾನದಿಂದ ಹೊರಹಾಕಿದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಸೋಮವಾರ ಜಿಂಬಾಬ್ವೆ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಸೋಲು ಕಾಣುವ ಮೂಲಕ ಸರಣಿಯನ್ನು ಕೈಚೆಲ್ಲಿತ್ತು. ಹೀಗಾಗಿ ಮೈದಾನದ ಸಿಬ್ಬಂದಿಗಳನ್ನು ಅಮಾನವೀಯವಾಗಿ ನಡೆಸಿಕೊಂಡಿತ್ತು. ಆ ದಿನ ರಾತ್ರಿ ಸಿಬ್ಬಂದಿಗಳನ್ನು ಅರೆಬೆತ್ತಲೆಯಾಗಿಯೇ ಮೈದಾನದಿಂದ ಹೊರದಬ್ಬಿತ್ತು.

ಈ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ತಿಲಂಗ ಸಮತಿಪಾಲ ಸಿಬ್ಬಂದಿಗಳ ಕ್ಷಮೆ ಕೋರಿದ್ದಾರೆ. ಅಲ್ಲದೇ ಸಿಬ್ಬಂದಿಗಳಿಗೆ ಉಚಿತವಾಗಿ ಸಮವಸ್ತ್ರ ಹಾಗೂ ಹೆಚ್ಚುವರಿ ದಿನಗಳ ಹಣವನ್ನು ನೀಡಿದ್ದಾರೆಂದು ವರದಿಯಾಗಿದೆ.

click me!