ರಿಯೊದಲ್ಲಿ ಚಿನ್ನ ಗೆದ್ದ ಜಜೂರಿಯಾಗೆ ಗೊಯಲ್ ಅಭಿನಂದನೆ

By Internet DeskFirst Published Sep 14, 2016, 12:21 PM IST
Highlights

'ಸಾಕಷ್ಟು ಪರಿಶ್ರಮ ಹಾಗೂ ಬದ್ಧತೆಯಿಂದ ಜಜೂರಿಯಾ ವಿಶ್ವದಾಖಲೆ ನಿರ್ಮಿಸುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ನಿಮ್ಮ ಗೆಲುವು ದೇಶಕ್ಕೆ ಹೆಮ್ಮೆ ತಂದಿದೆ. ಇದು ದೇಶದ ಯುವಜನರಿಗೆ ಸ್ಫೂರ್ತಿಯಾಗಲಿದೆ ಎಂದು ಗೋಯಲ್ ಕೊಂಡಾಡಿದ್ದಾರೆ'.

ನವದೆಹಲಿ(ಸೆ.14): ರಿಯೊ ಪ್ಯಾರಾಲಿಂಪಿಕ್ಸ್'ನಲ್ಲಿ ಜಾವಲಿನ್ ಎಸೆತದಲ್ಲಿ ವಿಶ್ವದಾಖಲೆ ನಿರ್ಮಿಸುವುದರೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ ದೇವೇಂದ್ರ ಜಜೂರಿಯಾಗೆ ಕ್ರೀಡಾ ಸಚಿವ ವಿಜಯ್ ಗೋಯಲ್ ಅಭಿನಂದನೆ ಸಲ್ಲಿಸಿದ್ದಾರೆ.

'ಸಾಕಷ್ಟು ಪರಿಶ್ರಮ ಹಾಗೂ ಬದ್ಧತೆಯಿಂದ ಜಜೂರಿಯಾ ವಿಶ್ವದಾಖಲೆ ನಿರ್ಮಿಸುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ನಿಮ್ಮ ಗೆಲುವು ದೇಶಕ್ಕೆ ಹೆಮ್ಮೆ ತಂದಿದೆ. ಇದು ದೇಶದ ಯುವಜನರಿಗೆ ಸ್ಫೂರ್ತಿಯಾಗಲಿದೆ ಎಂದು ಗೋಯಲ್ ಕೊಂಡಾಡಿದ್ದಾರೆ'.

ಜಜೂರಿಯಾ ಪ್ಯಾರಾಲಿಂಪಿಕ್ಸ್'ನಲ್ಲಿ ಎರಡು ಬಾರಿ ಚಿನ್ನ ಗೆದ್ದ ಏಕೈಕ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಿದ್ದರೆ. ಈ ಮೊದಲು ಜಜೂರಿಯಾ 2004ರ ಅಥೆನ್ಸ್ ಒಲಿಂಪಿಕ್ಸ್'ನಲ್ಲಿ (62.15 ಮೀಟರ್) ದೂರ ಜಾವಲಿನ್ ಎಸೆದು ಚಿನ್ನದ ಪದಕ ಗೆದ್ದುಕೊಂಡಿದ್ದರು. ಈಗ ರಿಯೊದಲ್ಲಿ 63.97 ಮೀಟರ್ ದೂರ ಎಸೆಯುವ ಮೂಲಕ ತನ್ನ ಹಳೆಯ ದಾಖಲೆ ಮುರಿದು ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ.  

click me!