ಹೊಸ ಸ್ಕೂಪ್ ಶಾಟ್ ಆವಿಷ್ಕರಿಸಿದ ಗ್ಲೆನ್ -ಕ್ರಿಕೆಟ್ ಲೋಕ ಅಚ್ಚರಿ

Published : Aug 20, 2018, 05:45 PM ISTUpdated : Sep 09, 2018, 10:06 PM IST
ಹೊಸ ಸ್ಕೂಪ್ ಶಾಟ್ ಆವಿಷ್ಕರಿಸಿದ ಗ್ಲೆನ್ -ಕ್ರಿಕೆಟ್ ಲೋಕ ಅಚ್ಚರಿ

ಸಾರಾಂಶ

ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಜಮೈಕ ತಲ್ವಾಸ್ ತಂಡ ಬ್ಯಾಟ್ಸ್‌ಮನ್ ಗ್ಲೆನ್ ಫಿಲಿಪ್ಸ್ ಹೊಸ ಸ್ಕೂಪ್ ಶಾಟ್ ಆವಿಷ್ಕರಿಸಿದ್ದಾರೆ. ಈ ಸ್ಕೂಪ್ ಶಾಟ್‌ಗೆ ಇನ್ನು ಕೂಡ ಹೆಸರಿಟ್ಟಿಲ್ಲ. ಇಲ್ಲಿದೆ ಗ್ಲೆನ್ ಬಾರಿಸಿದ ಸ್ಕೂಪ್ ಶಾಟ್.

ಜಮೈಕ(ಆ.20): ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ರತಿ ದಿನ ಹೊಸ ಹೊಸ ಸ್ಟೈಲ್‌, ಹೊಸ ಹೊಸ ಸಂಭ್ರಮಾಚರಣೆಗಳು ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಿದೆ. ಅಫ್ಘಾನ್ ಸ್ಪಿನ್ನರ್ ಫ್ರಂಟ್ ಫ್ಲಿಪ್ ಸಂಭ್ರಮಾಚರಣೆ ಮಾಡಿ ಸುದ್ದಿಯಾದರೆ ಇದೀಗ ಗ್ಲೆನ್ ಫಿಲಿಪ್ಸ್ ಹೊಸ ಶಾಟ್ ಆವಿಷ್ಕರಿಸಿದ್ದಾರೆ.

 

 

ಜಮೈಕ ಹಾಗೂ ಗಯಾನ ನಡುವಿನ ಸಿಪಿಎಲ್ ಟೂರ್ನಿಯ 11ನೇ ಲೀಗ್ ಪಂದ್ಯಲ್ಲಿ ಗ್ಲೆನ್ ಫಿಲಿಪ್ಸ್ ಹೊಸ ಶೈಲಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಜಮೈಕ ತಲ್ವಾಸ್ ತಂಡ ಬ್ಯಾಟ್ಸ್‌ಮನ್ ಗ್ಲೆನ್ ಫಿಲಿಪ್ಸ್  ಸ್ಕೂಪ್ ಶಾಟ್ ಹೊಡೆಯಲು ಹೋಗಿ ಕೊನೆಗೆ ಹೊಸ ಶಾಟ್ ಆವಿಷ್ಕರಿಸಿದ್ದಾರೆ.

ನ್ಯೂಜಿಲೆಂಡ್ ಮೂಲದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಗ್ಲೆನ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದಾರೆ. ಹೀಗಾಗಿ ಗಯಾನ ತಂಡದ ವೇಗಿ ರಾಯದ್ ಎಮ್ರಿಟ್ ಎಸೆತದಲ್ಲಿ ಸ್ಕೂಪ್ ಶಾಟ್ ಮೂಲಕ ಬೌಂಡರಿ ಬಾರಿಸಿದರು. ಗ್ಲೆನ್ ಶಾಟ್‌ಗೆ ಕ್ರಿಕೆಟ್ ಲೋಕವೇ ಅಚ್ಚರಿ ವ್ಯಕ್ತಪಡಿಸಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಸೋಲಿನ ದವಡೆಯಿಂದ ಪಾರಾದ ಡೆಲ್ಲಿ ಕ್ಯಾಪಿಟಲ್ಸ್; ಲಖನೌಗೆ ತವರಿನಲ್ಲೇ ಮರ್ಮಾಘಾತ!
ತನ್ನಂತೆ ಇರುವವನ ಕರೆಸಿ ಸ್ನೇಹಿತನಿಗೆ ಏಪ್ರಿಲ್ ಫೂಲ್ ಮಾಡಿದ ಸಚಿನ್ ತೆಂಡೂಲ್ಕರ್