ಮೃತ ಯೋಧರ ಮಕ್ಕಳಿಗೆ ಗಂಭೀರ್ ನೆರವು

By Suvarna Web DeskFirst Published Apr 27, 2017, 7:29 PM IST
Highlights

ಬುಧವಾರ ಪುಣೆ ವಿರುದ್ಧ ನಡೆದ ಪಂದ್ಯದಲ್ಲಿ ಕೆಕೆಆರ್‌'ನ ಆಟಗಾರರು ಕಪ್ಪುಪಟ್ಟಿ ಧರಿಸುವ ಮೂಲಕ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು.

ನವದೆಹಲಿ(ಏ.28): ಛತ್ತೀಸ್‌'ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ಗುಂಡಿನ ದಾಳಿಗೆ ಬಲಿಯಾದ ಸಿಆರ್‌'ಪಿಎಫ್‌'ನ 25 ಹುತಾತ್ಮ ಯೋಧರ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ ಭರಿಸುವುದಾಗಿ ಕೆಕೆಆರ್ ತಂಡದ ನಾಯಕ ಗೌತಮ್ ಗಂಭೀರ್ ಘೋಷಿಸಿದ್ದಾರೆ.

ತಮ್ಮ ಗೌತಮ್ ಗಂಭೀರ್ ಫೌಂಡೇಷನ್ ವತಿಯಿಂದ ಯೋಧರ ಕುಟುಂಬಕ್ಕೆ ನೆರವು ನೀಡುವುದಾಗಿ ತಿಳಿಸಿದ್ದಾರೆ.

Latest Videos

‘‘ಹುತಾತ್ಮ ಯೋಧರ ಚಿತ್ರಗಳು ಹಾಗೂ ಮೃತಪಟ್ಟ ತಮ್ಮ ತಂದೆಯಂದಿರ ಮೃತದೇಹಗಳ ಮುಂದೆ ಅಳುತ್ತಿರುವ ಮಕ್ಕಳನ್ನು ಕಂಡು ನಡುಗಿ ಹೋದೆ. ತಕ್ಷಣವೇ ಅವರ ಕುಟುಂಬಗಳಿಗೆ ಸಹಾಯ ಹಸ್ತ ಚಾಚಲು ನಿರ್ಧರಿಸಿದೆ’’ ಎಂದಿದ್ದಾರೆ.

ಬುಧವಾರ ಪುಣೆ ವಿರುದ್ಧ ನಡೆದ ಪಂದ್ಯದಲ್ಲಿ ಕೆಕೆಆರ್‌'ನ ಆಟಗಾರರು ಕಪ್ಪುಪಟ್ಟಿ ಧರಿಸುವ ಮೂಲಕ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು.

click me!