ಫಿಫಾ ವಿಶ್ವಕಪ್ ಫುಟ್ಬಾಲ್ ವೀಕ್ಷಿಸಲು ಕಾಯುತ್ತಿರುವ ದಕ್ಷಿಣ ಭಾರತದ ಫುಟ್ಬಾಲ್ ಅಭಿಮಾನಿಗಳಿಗೆ ತಮ್ಮ ತಮ್ಮ ಭಾಷೆಗಳಲ್ಲಿ ನೇರಪ್ರಸಾರ ಲಭ್ಯವಿದೆ. ಹಾಗಾದರೆ ಯಾವೆಲ್ಲಾ ಭಾಷೆಯಲ್ಲಿ ಫಿಫಾ ಫುಟ್ಬಾಲ್ ಪ್ರಸಾರಗೊಳ್ಳಲಿದೆ. ಇಲ್ಲಿದೆ ವಿವರ.
ಮುಂಬೈ(ಜೂನ್.9): ಫಿಫಾ ವಿಶ್ವಕಪ್ ಟೂರ್ನಿಗಾಗಿ ಭಾರತೀಯರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಇದಕ್ಕಾಗಿಯೇ ಭಾರತದಲ್ಲಿ 6 ಭಾಷೆಗಳಲ್ಲಿ ಫಿಫಾ ವಿಶ್ವಕಪ್ ಟೂರ್ನಿ ಪಂದ್ಯಗಳು ನೇರಪ್ರಸಾರಗೊಳ್ಳಲಿದೆ.
ಭಾರತದಲ್ಲಿ ಸೋನಿ ಪಿಕ್ಟರ್ಸ್ ನೆಟ್‌ವರ್ಕ್ ಫಿಫಾ ಫುಟ್ಬಾಲ್ ಪಂದ್ಯಗಳ ಪ್ರಸಾರದ ಹಕ್ಕನ್ನ ಪಡೆದಿದೆ. ಇಂಗ್ಲೀಷ್-ಹಿಂದಿ ಜೊತೆಗೆ ಬಂಗಾಳಿ, ತೆಲುಗು, ಮಲೆಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಫಿಫಾ ವಿಶ್ವಕಪ್ ಪಂದ್ಯಗಳನ್ನ ವೀಕ್ಷಿಸಬಹುದಾಗಿದೆ. ದಕ್ಷಿಣ ಭಾರತದ 3 ಭಾಷೆಗಳಲ್ಲಿ ಫಿಫಾ ಪಂದ್ಯಗಳನ್ನ ನೇರಪ್ರಸಾರ ಮಾಡಲು ಮುಂದಾಗಿರುವ ಸೋನಿ ಕನ್ನಡ ಭಾಷೆಯನ್ನ ಆಯ್ಕೆ ಮಾಡಿಕೊಂಡಿಲ್ಲ.
undefined
ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳ ವಿಶ್ಲೇಷಣೆಯಲ್ಲಿ ಟೀಮ್ಇಂಡಿಯಾ ನಾಯಕ ಸುನಿಲ್ ಚೆಟ್ರಿ, ಮಾಜಿ ನಾಯಕ ಬೈಚುಂಗ್ ಭುಟಿಯಾ ಸೇರಿದಂತೆ ಭಾರತದ ಮಾಜಿ ಫುಟ್ಬಾಲ್ ನಾಯಕರು ಪಾಲ್ಗೊಳ್ಳಲಿದ್ದಾರೆ. ಜೂನ್ 14 ರಿಂದ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಆರಂಭಗೊಳ್ಳಲಿದೆ.