ಫಿಫಾ ವಿಶ್ವಕಪ್ ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ವರ್ಣರಂಜಿತ ಉದ್ಧಾಟನಾ ಸಮಾರಂಭದೊಂದಿಗೆ ಫಿಫಾ ವಿಶ್ವಕಪ್ ಆರಂಭಗೊಂಡಿತು. ಈ ಬಾರಿಯ ಉದ್ಘಾಟನಾ ಸಮಾರಂಭ ಹೇಗಿತ್ತು? ಇಲ್ಲಿದೆ ನೋಡಿ.
ರಷ್ಯಾ(ಜೂ.14): 21ನೇ ಫಿಫಾ ವಿಶ್ವಕಪ್ ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಮಾಸ್ಕೋದ ಲಝ್ನಿಕಿ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದ ಮೂಲಕ ಟೂರ್ನಿ ವಿದ್ಯುಕ್ತವಾಗಿ ಆರಂಭಗೊಂಡಿದೆ.
ಬ್ರಿಟೀಷ್ ಪಾಪ್ ಸ್ಟಾರ್ ರಾಬಿ ವಿಲಿಯಮ್ಸ್ ಸಂಗೀತ ರಸಮಂಜರಿ ಕಾರ್ಯಕ್ರಮ ಈ ಬಾರಿ ಫಿಫಾ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಸಮಾರಂಭದ ಕಳೆ ಹೆಚ್ಚಿಸಿತು. ರಾಬಿಯ ಪ್ರಖ್ಯಾತ ಎಂಜೆಲ್ಸ್ ಹಾಡಿನ ಮೂಲಕ ನೆರೆದಿದ್ದ ಕ್ರೀಡಾಭಿಮಾನಿಗಳನ್ನ ರಂಜಿಸಿದರು.
undefined
Looking good, Robbie 👌 pic.twitter.com/ZBd82tqXap
— FIFA World Cup 🏆 (@FIFAWorldCup)
ಲೆಟ್ ಮಿ ಎಂಟರ್ಟೈನ್ ಯು ಹಾಡಿನ ಮೂಲಕ ಫಿಫಾ ಉದ್ಘಾಟನಾ ಕಾರ್ಯಕ್ರಮ ಆರಂಭಿಸಿದ ರಾಬಿ, ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾದರು. ರಾಬಿ ವಿಲಿಯಮ್ಸ್ ಸಂಗೀತ ರಸಮಂಜರಿ ಜೊತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮನ ಸೆಳೆಯಿತು.
ಫಿಫಾ ವಿಶ್ವಕಪ್ 2018: ಸಂಪೂರ್ಣ ವೇಳಾಪಟ್ಟಿ ನಿಮ್ಮ ಮುಂದೆಆರಂಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮೀರಿ ಪುಟೀನ್ , ಎಲ್ಲರನ್ನ ಸ್ವಾಗತಿಸಿದರು. ಇಷ್ಟೇ ಅಲ್ಲ ರಷ್ಯಾ ಆಯೋಜಿಸಿರುವ ಮಹಾನ್ ಕ್ರೀಡಾ ಹಬ್ಬದಲ್ಲಿ ಪಾಲ್ಗೊಳ್ಳಿ ಎಂದರು. ಫುಟ್ಬಾಲ್‌ನಿಂದ ನಾವೆಲ್ಲರು ಒಂದಾಗಿದ್ದೇವೆ. ರಷ್ಯಾಗೆ ಆಗಮಿಸಿರುವ ತಂಡಗಳು, ಆಟಗಾರರು, ಅಭಿಮಾನಿಗಳು ಸೇರಿದಂತೆ ಎಲ್ಲರು ಅಮೂಲ್ಯ ಸಮಯವನ್ನ ಸಂತಸದಿಂದ ಕಳೆಯಿರಿ ಎಂದು ಪುಟೀನ್ ಹೇಳಿದರು.
ಫುಟ್ಬಾಲ್ ಮ್ಯಾಸ್ಕಟ್ ಜೊತೆ ಆಗಮಿಸಿದ ವಿಶ್ವಕಪ್ ಹೀರೋ ಬ್ರೆಜಿಲ್‌ನ ರೋನಾಲ್ಡ, ಪೆನಾಲ್ಟಿ ಶೂಟೌಟ್ ಕಿಕ್ ಮಾಡೋ ಮೂಲಕ 21ನೇ ಫುಟ್ಬಾಲ್ ಟೂರ್ನಿಯ ಅವಿಸ್ಮರಣೀಯ ಕ್ಷಣದಲ್ಲಿ ಪಾಲ್ಗೊಂಡರು.