ಫಿಫಾ ವಿಶ್ವಕಪ್ 2018: ಹೆಚ್ಚುವರಿ ಸಮಯದಲ್ಲಿ ಗೆಲುವು ಕಂಡ ಇರಾನ್

 |  First Published Jun 15, 2018, 10:45 PM IST

ಫಿಫಾ ವಿಶ್ವಕಪ್ ಟೂರ್ನಿಯ ಹೋರಾಟ ಆರಂಭದಿಂದಲೇ ತೀವ್ರ ಕುತೂಹಲ ಕೆರಳಿಸುತ್ತಿದೆ. ಮೊರಕ್ಕೋ ಹಾಗೂ ಇರಾನ್ ನಡುವಿನ  ಪಂದ್ಯ ಇದಕ್ಕೆ ಹೊರತಾಗಿರಲಿಲ್ಲ. ಈ ಮಹತ್ವದ ಕಾಳಗ ಹೇಗಿತ್ತು. ಗೋಲಿಲ್ಲದೇ ಕೊರಗಿದ ಇರಾನ್ ತಂಡ ಗೆಲುವು ಸಾಧಿಸಿದ್ದು ಹೇಗೆ? ಇಲ್ಲಿದೆ ವಿವರ.


ರಷ್ಯಾ(ಜೂ.15): ಫಿಫಾ ವಿಶ್ವಕಪ್ ಟೂರ್ನಿಯ ತೃತೀಯ ಪಂದ್ಯಲ್ಲಿ ಇರಾನ್ 1-0 ಅಂತರದಲ್ಲಿ ಗೆಲುವಿನ ನಗೆ ಬೀರಿದೆ. ಮೊರಕ್ಕೋ ವಿರುದ್ಧ ನಡೆದ 90 ನಿಮಿಷದ ರೋಚಕ ಹಣಾಹಣಿಯಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ ಹೆಚ್ಚುವರಿ ಸಮಯದಲ್ಲಿ ಇರಾನ್ ಗೋಲು ಬಾರಿಸಿ ಶುಭಾರಂಭ ಮಾಡಿತು.

ಸೇಂಟ್‌ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಗೋಲ್‌ಗಾಗಿ ಕಠಿಣ ಹೋರಾಟ ನಡೆಸಿತು. ಆದರೆ ಗೋಲು ಮಾತ್ರ ದಾಖಲಾಗಲಿಲ್ಲ. ಗೋಲ್‌ಗಾಗಿ ರೋಸಿ ಹೋದ ಉಭಯ ತಂಡದ ಆಟಗಾರರು ನಿಯಮ ಉಲ್ಲಂಘಿಸಿ ಹಳದಿ ಕಾರ್ಡ್ ಪಡೆದರು. ಇರಾನ್ ತಂಡದ ಮಸೌದ್ ಶೋಜೈ, ಸರ್ದಾರನ್ ಅಜ್ಮೌನ್ ಹಳಿದಿ ಕಾರ್ಡ್ ಜೊತೆಗೆ ಎಚ್ಚರಿಕೆಯನ್ನು ಪಡೆದರು.

Latest Videos

undefined

ಮೊದಲಾರ್ಧದಲ್ಲಿ ಅದೆಷ್ಟೇ ಹೋರಾಡಿದರೂ ಗೋಲು ದಾಖಲಾಗಲಿಲ್ಲ. ಹೀಗಾಗಿ ಗೋಲಿಲ್ಲದೇ ಫಸ್ಟ್ ಹಾಫ್ ಮುಕ್ತಾಯಗೊಂಡಿತು. ಮುನ್ನಡೆಗಾಗಿ ಎರಡೂ ತಂಡಗಳು ಹಲವು ಸಬ್ಸ್‌ಟಿಟ್ಯೂಟ್ ಆಟಗಾರರನ್ನ ಬಳಸಿದರೂ ಪ್ರಯೋಜನವಾಗಲಿಲ್ಲ.

ದ್ವಿತಿಯಾರ್ಧದಲ್ಲೂ ಇರಾನ್ ಹಾಗೂ ಮೊರಕ್ಕೋ ಆಟ ಭಿನ್ನವಾಗಿರಲಿಲ್ಲ. ಪಂದ್ಯದ 90 ನಿಮಿಷದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. 5 ನಿಮಿಷಗಳ ಇಂಜುರಿ ಟೈಮ್‌ನಲ್ಲಿ ಇರಾನ್ ಚಮತ್ಕಾರ ಮಾಡಿತು. 93ನೇ ನಿಮಿಷದಲ್ಲಿ ಇರಾನ್ ತಂಡದ ಅಝೀಝ್ ಬಹದೌಝ್ ಗೋಲು ಸಿಡಿಸೋ ಮೂಲಕ ಇರಾನ್ 1-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.

click me!