
ಬೆಂಗಳೂರು[ಜೂ.10]: 15ನೇ ಆವೃತ್ತಿಯ ಫಿಫಾ ಫುಟ್ಬಾಲ್ ವಿಶ್ವಕಪ್ 1994ರಲ್ಲಿ ಅಮೆರಿಕದಲ್ಲಿ ನಡೆಯಿತು. 9 ನಗರಗಳ 9 ಕ್ರೀಡಾಂಗಣಗಳು ಪಂದ್ಯಾವಳಿಗೆ ಆತಿಥ್ಯ ವಹಿಸಿದ್ದವು. ದೇಶದಲ್ಲಿ ಜನಪ್ರಿಯ ಫುಟ್ಬಾಲ್ ಲೀಗ್ ಇಲ್ಲದಿದ್ದರೂ, ಈ ಆವೃತ್ತಿ ಆರ್ಥಿಕವಾಗಿ ಫುಟ್ಬಾಲ್ ವಿಶ್ವಕಪ್ ಇತಿಹಾಸದ ಅತ್ಯಂತ ಯಶಸ್ವಿ ಟೂರ್ನಿ ಎನಿಸಿಕೊಂಡಿತು.
ಪ್ರತಿ ಪಂದ್ಯಕ್ಕೆ ಸರಾಸರಿ 69೦೦೦ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಆಗಮಿಸಿದ್ದು ಸಹ ಒಂದು ದಾಖಲೆ. ಈ ದಾಖಲೆ ಇವತ್ತಿಗೂ ಉಳಿದುಕೊಂಡಿದೆ. ಫೈನಲ್‌ನಲ್ಲಿ ಇಟಲಿ ಎದುರು ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಗೋಲುಗಳ ಗೆಲುವು ಸಾಧಿಸಿದ ಬ್ರೆಜಿಲ್ ಚಾಂಪಿಯನ್ ಪಟ್ಟ ಅಲಂಕರಿಸಿತು. ವಿಶ್ವಕಪ್ ಫೈನಲ್ ಪಂದ್ಯ ಪೆನಾಲ್ಟಿ ಶೂಟೌಟ್‌ನೊಂದಿಗೆ ನಿರ್ಧಾರವಾಗಿದ್ದು ಇದೇ ಮೊದಲು. ನಾಲ್ಕನೇ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದ ಮೊದಲ ತಂಡ ಎನ್ನುವ ದಾಖಲೆಯನ್ನು ಬ್ರೆಜಿಲ್ ರಚಿಸಿತು.
ಗ್ರೀಸ್, ನೈಜಿರೀಯಾ ಹಾಗೂ ಸೌದಿ ಅರೇಬಿಯಾ ಮೊದಲ ಬಾರಿಗೆ ವಿಶ್ವಕಪ್ ಪ್ರಧಾನ ಹಂತದಲ್ಲಿ ಪಾಲ್ಗೊಂಡವು. ಸೋವಿಯತ್ ರಾಷ್ಟ್ರಗಳ ಒಕ್ಕೂಟದಿಂದ ಹೊರಬಂದ ಬಳಿಕ ರಷ್ಯಾ ಸಹ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡಿತು.
* ವರ್ಷ: 1994
* ಚಾಂಪಿಯನ್: ಬ್ರೆಜಿಲ್
* ರನ್ನರ್-ಅಪ್: ಇಟಲಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.