ನಿಮಗಿದು ಗೊತ್ತೆ..? ಒನ್ ಡೇಯಲ್ಲಿ ಅತಿ ವೇಗವಾಗಿ ಅರ್ಧ ಶತಕ ದಾಖಲಿಸಿದವರು ಯಾರು ಅಂತ..?

By Suvarna Web DeskFirst Published Sep 26, 2017, 12:42 AM IST
Highlights

2000ನೇ ಇಸವಿಯಿಂದ 2017ರವರೆಗೆ ಟೀಂ ಇಂಡಿಯಾ ಅನೇಕ ಸ್ಫೋಟಕ ಬ್ಯಾಟ್ಸ್’ಮನ್’ಗಳನ್ನು ಜಗತ್ತಿಗೆ ಪರಿಚಯಿಸಿದೆ. ಆದರೆ 17 ವರ್ಷಗಳಿಂದ ಅಜಿತ್ ಅಗರ್ಕರ್ ಹೆಸರಿನಲ್ಲಿರುವ ಆ ದಾಖಲೆಯನ್ನು ಅಳಿಸಿ ಹಾಕಲು ಟೀಂ ಇಂಡಿಯಾದ ಯಾವೊಬ್ಬ ಆಟಗಾರನಿಗೂ ಸಾಧ್ಯವಾಗಿಲ್ಲ.

ಬೆಂಗಳೂರು(ಸೆ.26): ಅಜಿತ್ ಅಗರ್ಕರ್ ಹೆಸರು ಯಾರು ತಾನೇ ಕೇಳಿಲ್ಲ ಹೇಳಿ..? 1990ರ ದಶಕದ ಕೊನೆಯಲ್ಲಿ ಹಾಗೂ 21ನೇ ಶತಮಾನಮಾನದಲ್ಲಿ ಟೀಂ ಇಂಡಿಯಾದ ಪ್ರಮುಖ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದ ಅಜಿತ್ ಅಗರ್ಕರ್ ಉಪಯುಕ್ತ ಬ್ಯಾಟ್ಸ್’ಮನ್ ಆಗಿಯೂ ತಂಡಕ್ಕೆ ನೆರವಾಗಿದ್ದಿದೆ.

ಅದು 2000ನೇ ಇಸವಿಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯ. 216 ರನ್’ಗಳಿಗೆ ಆರು ವಿಕೆಟ್ ಕಳೆದು ಸಂಕಷ್ಟದ ಸ್ಥಿತಿಯಲ್ಲಿದ್ದ ಟೀಂ ಇಂಡಿಯಾಗೆ ಆಸರೆಯಾಗಿದ್ದು ಅಜಿತ್ ಅಗರ್ಕರ್. ಆ ಪಂದ್ಯದಲ್ಲಿ ಅಗರ್ಕರ್ ಅಜೇಯ 67 ರನ್  ಸಿಡಿಸಿದ್ದರು. ಅಲ್ಲದೇ  ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಏಕದಿನ ಕ್ರಿಕೆಟ್’ನಲ್ಲಿ ಅತಿವೇಗವಾಗಿ ಅರ್ಧಶತಕ ಸಿಡಿಸಿದ ಆಟಗಾರ ಎನ್ನುವ ಕೀರ್ತಿಗೆ ಅಗರ್ಕರ್ ಭಾಜನರಾಗಿದ್ದರು.

click me!