
ನವದೆಹಲಿ(ಮೇ.12): ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಸಿದ ಆರೋಪದಡಿಯಲ್ಲಿ ಕಾನ್ಪುರದ ಹೋಟೆಲ್ ಲ್ಯಾಂಡ್'ಮಾರ್ಕ್'ನಿಂದ ಪೊಲೀಸರು ಮೂವರು ಬುಕಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಮೊಬೈಲ್'ಗಳು ಸೇರಿದಂತೆ 4.5 ಲಕ್ಷ ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆಯಲ್ಲಿ 'ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ಗುಜರಾತ್ ತಂಡದ ಆಟಗಾರರ ಹೆಸರು ಹೊರ ಬಿದ್ದಿದೆ' ಎಂದು ತಿಳಿಸಿದ್ದಾರೆ. ಆದರೆ ಇನ್ನೂ ಆಟಗಾರರ ಹೆಸರನ್ನು ಬಹಿರಂಗಪಡಿಸಿಲ್ಲ.
ಆಟಗಾರರ ಮೇಲಿರುವ ಆರೋಪವೇನು?
ತಿಳಿದು ಬಂದ ಮಾಹಿತಿ ಅನ್ವಯ ಈ ಇಬ್ಬರು ಆಟಗಾರರು ತಂಡದ ಮಾಹಿತಿಯನ್ನು ಬಂಧಿತ ಆರೋಪಿಗಳಿಗೆ ರವಾನಿಸುತ್ತಿದ್ದರಂತೆ. ಇನ್ನು ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದ ಎರಡೂ ತಂಡದ ಆಟಗಾರರು ಹಾಗೂ ಪಂದ್ಯಕ್ಕೆ ಸಂಬಂಧಪಟ್ಟ ಅಧಿಕಾರಿಗಳೆಲ್ಲರೂ ಉಳಿದುಕೊಂಡ ಹೊಟೇಲ್'ನಲ್ಲೇ ಈ ಮೂವರು ಆರೋಪಿಗಳೂ ಉಳಿದುಕೊಂಡಿದ್ದರು ಎಂಬುವುದೇ ಹೆಚ್ಚು ಆಘಾತಕಾರಿ ವಿಚಾರ. ಆದರೆ ಪಂದ್ಯಕ್ಕೆ ಸಂಬಂಧಿಸದ ಈ ಅಪರಿಚಿತ ಬುಕ್ಕಿಗಳನ್ನು ಆಟಗಾರರಿದ್ದ ಹೊಟೇಲ್'ನಲ್ಲೇ ಉಳಿದುಕೊಳ್ಳಲು ಪರವಾನಿಗೆ ನೀಡಿದ್ದು ಯಾರು ಎಂಬುವುದೇ ಸದ್ಯಕ್ಕಿರುವ ಪ್ರಶ್ನೆ.
ಇನ್ನು ಪ್ರಾಥಮಿಕ ತನಿಖೆಯಲ್ಲಿ ಮೈದಾನದೊಳಗೆ ಜಾಹಿರಾತುಗಳ ಹೋರ್ಡಿಂಗ್ ಹಾಕುವ ವ್ಯಕ್ತಿಯೂ ಈ ಆರೋಪಿಗಳೊಂದಿಗೆ ಭಾಗಿಯಾಗಿದ್ದನ್ನಲ್ಲದೆ, ಪಿಚ್ ತಯಾರಿಸುವ ಗ್ರೌಂಡ್ಸ್ ಮನ್'ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದನೆಂಬ ವಿಚಾರ ತಿಳಿದು ಬಂದಿದೆ.
ಇನ್ನು ಆರೋಪಿಗಳು ಪಿಚ್ ಮೇಲೆ ಹೆಚ್ಚು ನೀರು ಸುರಿಸಿ ಪಿಚ್'ನ್ನು ಒದ್ದೆಯಾಗಿಯೇ ಉಳಿಸಲು ಬಯಸುತ್ತಿದ್ದರೆಂಬ ಮಾತುಗಳು ಕೇಳಿ ಬಂದಿವೆ. ಈ ಮೂಲಕ ಪಂದ್ಯದಲ್ಲಿ ಹೆಚ್ಚಿನ ರನ್ ಪೇರಿಸಲು ಸಾಧ್ಯವಾಗದಿರಲಿ ಎಂಬುವುದೇ ಅವರ ಯೋಚನೆಯಾಗಿತ್ತಂತೆ. ಆದರೆ ಅವರ ಈ ಯೋಜನೆ ಫಲಿಸಲಿಲ್ಲ ಎಂಬುಬುವುದು ಸ್ಕೋರ್ ಕಾರ್ಡ್ ಮೂಲಕ ಸಾಬೀತಾಗಿದೆ.
ಕೃಪೆ: NDTv
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.