23 ಸಿಕ್ಸ್, 257 ರನ್-ವಿಶ್ವ ದಾಖಲೆ ಬರೆದ ಆಸಿಸ್ ಕ್ರಿಕೆಟಿಗ!

By Web DeskFirst Published Sep 28, 2018, 7:27 PM IST
Highlights

ಏಕದಿನ ಕ್ರಿಕೆಟ್ ಮಾದರಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ವಿಶ್ವದಾಖಲೆ ಬರೆದಿದ್ದಾರೆ. 148 ಎಸೆತದಲ್ಲಿ 23 ಸಿಕ್ಸರ್ ಮೂಲಕ 257 ರನ್ ದಾಖಲಿಸಿದ್ದಾರೆ. ಇಲ್ಲಿದೆ ವಿಶ್ವದಾಖಲೆ ಬ್ಯಾಟಿಂಗ್ ಪ್ರದರ್ಶನ.
 

ಸಿಡ್ನಿ(ಸೆ.28): ಕ್ರಿಕೆಟ್‌ನಲ್ಲಿ ಪ್ರತಿ ದಿನ ದಾಖಲೆಗಳು ನಿರ್ಮಾಣವಾಗುತ್ತೆ. ಹಲವು ದಾಖಲೆಗಳು ಪುಡಿಯಾಗುತ್ತೆ. ಇದೀಗ ಆಸ್ಟ್ರೇಲಿಯಾದ ಡಾರ್ಕಿ ಶಾರ್ಟ್ ಆಸ್ಟ್ರೇಲಿಯಾದ ದೇಸಿ ಟೂರ್ನಿಯಲ್ಲಿ ವಿಶ್ವದಾಖಲೆ ಬರೆದಿದ್ದಾರೆ. 

ಬರೋಬ್ಬರಿ 23 ಸಿಕ್ಸರ್, 148 ಎಸೆತದಲ್ಲಿ 257 ರನ್. ಇದು ಡಾರ್ಕಿ ಶಾರ್ಟ್ ಅಬ್ಬರಿಸಿದ ರೀತಿ. ಕ್ವೀನ್ಸ್‌ಲೆಂಡ್ ವಿರುದ್ಧದ ಜೆಎಲ್‌ಟಿ ಏಕದಿನ ಪಂದ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ತಂಡ ಶಾರ್ಟ್ ದ್ವಿಶತಕ ಸಿಡಿಸಿ ಮಿಂಚಿದರು.

 

That's 250! Unbelievable batting from D'Arcy Short!

Watch LIVE: https://t.co/kmb8Yj6zo5 pic.twitter.com/lMVgUZNsBF

— cricket.com.au (@cricketcomau)

 

ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ 257 ರನ್ ಸಿಡಿಸಿದ ಡಾರ್ಕಿ ಶಾರ್ಟ್, ಏಕದಿನ ಕ್ರಿಕೆಟ್‌ನ ಹಾಗೂ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ವಿಶ್ವದ 3ನೇ  ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು. 2002ರಲ್ಲಿ ಸರ್ರೆ ತಂಡ ಆಲಿ ಬ್ರೌನ್ 268 ರನ್ ಸಿಡಿಸಿದ್ದರು. 2014ರಲ್ಲಿ ಟೀಂ ಇಂಡಿಯಾದ ರೋಹಿತ್ ಶರ್ಮಾ, ಶ್ರೀಲಂಕಾ ವಿರುದ್ದ 264 ರನ್ ಸಿಡಿಸಿ ದಾಖಲೆ ಬರೆದಿದ್ದರು.

click me!