ಗೆಲುವಿನೊಂದಿಗೆ ಶುಭಾರಂಭ ಮಾಡಿದ CSK; ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿದ ಬ್ರಾವೋ

By Suvarna Web DeskFirst Published Apr 8, 2018, 12:06 AM IST
Highlights

ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ಬ್ರಾವೋ ಕೇವಲ 30 ಎಸೆತಗಳಲ್ಲಿ 7 ಅಮೋಘ ಸಿಕ್ಸರ್ ಹಾಗೂ 3 ಆಕರ್ಷಕ ಬೌಂಡರಿಗಳ ನೆರವಿನಿಂದ ತಂಡವನ್ನು ಗೆಲುವಿನ ಸಮೀಪ ತಂದು ವಿಕೆಟ್ ಒಪ್ಪಿಸಿದರು. ಕೊನೆಯ ಮೂರು ಓವರ್'ಗಳಲ್ಲಿ ಚೆನ್ನೈ ಗೆಲ್ಲಲು 47 ರನ್'ಗಳ ಅವಶ್ಯಕತೆಯಿತ್ತು. ಈ ವೇಳೆ 17ನೇ ಓವರ್ ಮಾಡಿದ ಮೆಕ್'ಗ್ಲಾರನ್ ಬೌಲಿಂಗ್'ನಲ್ಲಿ 2 ಸಿಕ್ಸರ್ ಹಾಗೂ ಒಂದು ಬೌಂಡರಿಗಳ ನೆರವಿನೊಂದಿಗೆ 20 ರನ್ ದೋಚಿದರು. ಇನ್ನು ಡೆತ್ ಓವರ್ ಸ್ಪೆಷಲಿಸ್ಟ್ ಬುಮ್ರಾ ಮಾಡಿದ 19 ಓವರ್'ನಲ್ಲಿ ಮೂರು ಸಿಕ್ಸರ್ ಸಿಡಿಸಿ ಕೊನೆಯ ಬಾಲ್'ನಲ್ಲಿ ವಿಕೆಟ್ ಒಪ್ಪಿಸಿರು.

ಮುಂಬೈ(ಏ.07): ಡ್ವೇನ್ ಬ್ರಾವೋ ಸಿಡಿಲಬ್ಬರದ ಅರ್ಧಶತಕ ಹಾಗೂ ಕೇದಾರ್ ಜಾದವ್ ಅಜೇಯ(24) ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್'ಕಿಂಗ್ಸ್ ಒಂದು ವಿಕೆಟ್'ಗಳ ರೋಚಕ ಜಯ ಸಾಧಿಸುವುದರೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಮುಂಬೈ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಚೆನ್ನೈ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್'ಗೆ ವಾಟ್ಸನ್-ರಾಯುಡು ಜೋಡಿ 27 ರನ್'ಗಳ ಜತೆಯಾಟವಾಡಿತು. ವಾಟ್ಸನ್(16) ಹಾರ್ದಿಕ್ ಪಾಂಡ್ಯ ಬೌಲಿಂಗ್'ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಟಿ20 ಸ್ಪೆಷಲಿಸ್ಟ್ ರೈನಾ ಕೇವಲ 4 ರನ್ ಬಾರಿಸಿ ಔಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ಧೋನಿ ಆಟ ಕೂಡಾ ಕೇವಲ 5 ರನ್'ಗೆ ಸೀಮಿತವಾಯಿತು. ಒಂದು ಹಂತದಲ್ಲಿ 105 ರನ್'ಗಳಿಗೆ 7 ವಿಕೆಟ್ ಕಳೆದುಕೊಂಡು CSK ಸೋಲಿನತ್ತ ಮುಖಮಾಡಿತ್ತು.

ಮಿಂಚಿದ ಬ್ರಾವೋ:

ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ಬ್ರಾವೋ ಕೇವಲ 30 ಎಸೆತಗಳಲ್ಲಿ 7 ಅಮೋಘ ಸಿಕ್ಸರ್ ಹಾಗೂ 3 ಆಕರ್ಷಕ ಬೌಂಡರಿಗಳ ನೆರವಿನಿಂದ ತಂಡವನ್ನು ಗೆಲುವಿನ ಸಮೀಪ ತಂದು ವಿಕೆಟ್ ಒಪ್ಪಿಸಿದರು. ಕೊನೆಯ ಮೂರು ಓವರ್'ಗಳಲ್ಲಿ ಚೆನ್ನೈ ಗೆಲ್ಲಲು 47 ರನ್'ಗಳ ಅವಶ್ಯಕತೆಯಿತ್ತು. ಈ ವೇಳೆ 17ನೇ ಓವರ್ ಮಾಡಿದ ಮೆಕ್'ಗ್ಲಾರನ್ ಬೌಲಿಂಗ್'ನಲ್ಲಿ 2 ಸಿಕ್ಸರ್ ಹಾಗೂ ಒಂದು ಬೌಂಡರಿಗಳ ನೆರವಿನೊಂದಿಗೆ 20 ರನ್ ದೋಚಿದರು. ಇನ್ನು ಡೆತ್ ಓವರ್ ಸ್ಪೆಷಲಿಸ್ಟ್ ಬುಮ್ರಾ ಮಾಡಿದ 19 ಓವರ್'ನಲ್ಲಿ ಮೂರು ಸಿಕ್ಸರ್ ಸಿಡಿಸಿ ಕೊನೆಯ ಬಾಲ್'ನಲ್ಲಿ ವಿಕೆಟ್ ಒಪ್ಪಿಸಿರು. ಆ ವೇಳೆಗಾಗಲೇ ಚೆನ್ನೈ ಗೆಲುವಿನ ಸಮೀಪ ಬಂದಾಗಿತ್ತು.

ಎದೆಬಡಿತ ಹೆಚ್ಚಿಸಿದ ಕೊನೆಯ ಓವರ್:

ಚೆನ್ನೈ ಕೊನೆಯ ಓವರ್'ನಲ್ಲಿ ಗೆಲ್ಲಲು ಕೇವಲ 7 ರನ್'ಗಳ ಅವಶ್ಯಕತೆಯಿತ್ತು. ಮೊದಲ ಮೂರು ಎಸೆತಗಳನ್ನು ಮುಷ್ತಾಫಿಜುರ್ ರೆಹಮಾನ್ ಚುಕ್ಕಿ ಎಸೆತಗಳನ್ನು ಹಾಕುವ ಮೂಲಕ ಮುಂಬೈಗೆ ಗೆಲುವಿನ ಆಸೆ ತೋರಿಸಿದರು. ಆದರೆ ನಾಲ್ಕನೇ ಎಸೆತದಲ್ಲಿ ಕೇದಾರ್ ಜಾದವ್ ಸಿಕ್ಸರ್ ಸಿಡಿಸಿ ಸಿಎಸ್'ಕೆ ಗೆಲುವನ್ನು ಖಚಿತಗೊಳಿಸಿದರು. ಮರು ಎಸೆತದಲ್ಲಿ ಬೌಂಡರಿ ಬಾರಿಸುವುದರೊಂದಿಗೆ ಇನ್ನೊಂದು ಎಸೆತ ಬಾಕಿಯಿರುವಂತೆಯೇ ರೋಚಕ ಗೆಲುವು ತಂದಿತ್ತರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೃನಾಲ್ ಪಾಂಡ್ಯ ಸಮಯೋಚಿತ ಬ್ಯಾಟಿಂಗ್ ನೆರವಿನೊಂದಿಗೆ 165 ರನ್ ಕಲೆಹಾಕಿತ್ತು.

click me!