ಕ್ರಿಶ್ಚಿಯಾನೋ ರೊನಾಲ್ಡೋ-ಜಾರ್ಜಿನಾ ವಿವಾಹವಾದ ತಮ್ಮದೇ ಸ್ವಂತ ಅಲ್ಟ್ರಾ ಲಕ್ಶುರಿ ವಿಲ್ಲಾದ ಮೌಲ್ಯವೆಷ್ಟು ಗೊತ್ತಾ?

Published : Aug 17, 2026, 08:59 PM IST
Cristiano Ronaldo Home

ಸಾರಾಂಶ

ವಿಶ್ವಪ್ರಸಿದ್ಧ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ದೀರ್ಘಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್ ಅವರನ್ನು ಗುಟ್ಟಾಗಿ ವಿವಾಹವಾಗಿದ್ದಾರೆ. ಪೋರ್ಚುಗಲ್‌ನಲ್ಲಿರುವ ತಮ್ಮ ₹270 ಕೋಟಿ ಮೌಲ್ಯದ ಹೊಸ ಐಷಾರಾಮಿ ವಿಲ್ಲಾದಲ್ಲಿ, ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಈ ಖಾಸಗಿ ಸಮಾರಂಭ ನಡೆದಿದೆ.

ಬೆಂಗಳೂರು (ಆ.17): ವಿಶ್ವಪ್ರಸಿದ್ಧ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ (Cristiano Ronaldo) ಹಾಗೂ ಅವರ ದೀರ್ಘಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್ (Georgina Rodriguez) ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಾರು 10 ವರ್ಷಗಳ ಸುದೀರ್ಘ ಪ್ರೇಮ ಜೀವನದ ನಂತರ ಈ ಜೋಡಿ ಅಚ್ಚರಿಯ ರೀತಿಯಲ್ಲಿ ಸರಳ ಹಾಗೂ ಅತ್ಯಂತ ಖಾಸಗಿಯಾಗಿ ಮದುವೆಯಾಗಿದ್ದಾರೆ. ಯಾವುದೇ ಐಷಾರಾಮಿ ಹೋಟೆಲ್ ಅಥವಾ ಅರಮನೆಯಲ್ಲಿ ಮದುವೆಯಾಗುವ ಬದಲಾಗಿ, ಪೋರ್ಚುಗಲ್‌ನಲ್ಲಿರುವ ತಮ್ಮದೇ ಆದ ಹೊಸ ಅಲ್ಟ್ರಾ-ಲಕ್ಸುರಿ ವಿಲ್ಲಾವನ್ನು ಈ ಶುಭ ಕಾರ್ಯಕ್ಕೆ ಆಯ್ಕೆ ಮಾಡಿಕೊಂಡಿರುವುದು ವಿಶೇಷ.

ರೊನಾಲ್ಡೋ ಮತ್ತು ಜಾರ್ಜಿನಾ ಆಗಸ್ಟ್ 11 ರಂದು ಅತ್ಯಂತ ಖಾಸಗಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆಗಸ್ಟ್ 11ರ ದಿನಾಂಕ ಈ ಜೋಡಿಗೆ ಅತ್ಯಂತ ವಿಶೇಷವಾಗಿದೆ, ಏಕೆಂದರೆ ಸರಿಯಾಗಿ 10 ವರ್ಷಗಳ ಹಿಂದೆ, ಅಂದರೆ 2016ರ ಆಗಸ್ಟ್ 11 ರಂದೇ ಇವರಿಬ್ಬರ ಮೊದಲ ಭೇಟಿಯಾಗಿತ್ತು. ಈ ಮದುವೆ ಸಮಾರಂಭವನ್ನು ಸಂಪೂರ್ಣ ರಹಸ್ಯವಾಗಿಡಲಾಗಿತ್ತು. ಕಾರ್ಯಕ್ರಮದಲ್ಲಿ ರೊನಾಲ್ಡೋ ದಂಪತಿಯ 5 ಮಕ್ಕಳು ಹಾಗೂ ಕೇವಲ 4 ಅತ್ಯಂತ ಆಪ್ತ ಸಾಕ್ಷಿಗಳು ಮಾತ್ರ ಉಪಸ್ಥಿತರಿದ್ದರು.

₹270 ಕೋಟಿಗೂ ಅಧಿಕ ಮೌಲ್ಯದ ಭವ್ಯ ನಿವಾಸ!

ಪೋರ್ಚುಗಲ್‌ನ 'ಕಾಸ್ಕೈಸ್' (Cascais) ನಗರದಲ್ಲಿರುವ ಕ್ರಿಸ್ಟಿಯಾನೋ ರೊನಾಲ್ಡೋ ಅವರ ಈ ಭವ್ಯ ಬಂಗಲೆಯು ಇಡೀ ಪೋರ್ಚುಗಲ್ ದೇಶದಲ್ಲೇ ಅತ್ಯಂತ ದುಬಾರಿ ಮನೆ ಎಂದು ಪರಿಗಣಿಸಲ್ಪಟ್ಟಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಆಸ್ತಿಯ ಒಟ್ಟು ಮೌಲ್ಯ ಬರೋಬ್ಬರಿ ₹270 ಕೋಟಿಗೂ (270 Crores) ಅಧಿಕ. ಈ ಬಂಗಲೆಯು ಸುಮಾರು 12,000 ಚದರ ಮೀಟರ್ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ.

ಸುಸಜ್ಜಿತ ಬಂಗಲೆಯಲ್ಲೇನಿದೆ?

ರೊನಾಲ್ಡೋ ಅವರ ಈ ಕನಸಿನ ಅರಮನೆಯಲ್ಲಿ ಆಧುನಿಕ ಜೀವನಶೈಲಿಗೆ ಬೇಕಾದ ಪ್ರತಿಯೊಂದು ಸೌಲಭ್ಯವೂ ಇದೆ. ಬಂಗಲೆಯಲ್ಲಿ ಎರಡು ಬೃಹತ್ ಈಜುಗೊಳಗಳು (Swimming Pools), ಅತ್ಯಾಧುನಿಕ ಜಿಮ್ (Gym), ಪ್ರೈವೇಟ್ ಸ್ಪಾ (Spa) ಮತ್ತು ಇನ್-ಹೌಸ್ ಸ್ಕ್ರೀನಿಂಗ್ ರೂಮ್ (ಚಿತ್ರಮಂದಿರ) ವ್ಯವಸ್ಥೆಯಿದೆ. ಈ ದಂಪತಿಯ ಮಾಸ್ಟರ್ ಬೆಡ್‌ರೂಮ್ ಒಂದೇ ಬರೋಬ್ಬರಿ 300 ಚದರ ಮೀಟರ್ ವಿಸ್ತೀರ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ. ಮನೆಯ ಇಂಟೀರಿಯರ್ ಅನ್ನು ವಿಶ್ವದ ಅತ್ಯುತ್ತಮ ವಸ್ತುಗಳು ಮತ್ತು ಕಸ್ಟಮ್-ಡಿಸೈನ್ ಪೀಠೋಪಕರಣಗಳಿಂದ ಅಲಂಕರಿಸಲಾಗಿದೆ. ಈ ಐಷಾರಾಮಿ ಬಂಗಲೆಯ ಕೆಳಭಾಗದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸೂಪರ್‌ಕಾರ್‌ಗಳಿಂದ ತುಂಬಿದ ಬೃಹತ್ ಗ್ಯಾರೇಜ್ ಇದೆ. ಮನೆಯ ಸುತ್ತಲೂ ಹರಡಿರುವ ಸುಂದರ ಲ್ಯಾಂಡ್‌ಸ್ಕೇಪ್ ಗಾರ್ಡನ್‌ಗಳು ಮತ್ತು ಎತ್ತರದ ಗೋಡೆಗಳು ಈ ಮನೆಗೆ ಸಂಪೂರ್ಣ ಖಾಸಗಿತನವನ್ನು (Privacy) ನೀಡುತ್ತವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತದ ಅತ್ಯಂತ ಎತ್ತರದ 7 ಕ್ರಿಕೆಟಿಗರು ಇವರೇ ನೋಡಿ.. ಲಿಸ್ಟ್‌ನಲ್ಲಿ ಕನ್ನಡಿಗನೂ ಇದ್ದಾನೆ..!
Cricekt: ಕನ್ನಡಿಗ ನೀಡಿದ ಒಂದೇ ಒಂದು ಶಾಕ್‌ಗೆ ಬೆಚ್ಚಿದ್ದ ದಾದಾ; ಆ ಘಟನೆಗಾಗಿ ನಾಯಕತ್ವ ಬಿಡಲು ನಿಂತಿದ್ದ ಗಂಗೂಲಿ!