ಐಪಿಎಲ್ ಮಾದರಿಯಲ್ಲೇ ಗ್ಲೋಬಲ್ ಟಿ20 ಲೀಗ್ ಆರಂಭ..?

By Suvarna Web DeskFirst Published Feb 4, 2017, 4:09 PM IST
Highlights

ಟೂರ್ನಿಯಲ್ಲಿ ದ.ಆಫ್ರಿಕಾ ತಂಡದ ಆಟಗಾರರು ಮತ್ತು ಇತರೆ ದೇಶದ ಸ್ಟಾರ್ ಆಟಗಾರರು ಆಡಲಿದ್ದಾರೆ ಎಂದು ಲಾರ್ಗಟ್ ಸುಳಿವು ನೀಡಿದ್ದಾರೆ.

ಜೋಹಾನ್ಸ್‌ಬರ್ಗ್(ಫೆ.04): ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ (ಸಿಎಸ್‌'ಎ) ನೂತನ ಟಿ20 ಗ್ಲೋಬಲ್ ಲೀಗ್ ಟೂರ್ನಿಯನ್ನು ಆರಂಭಿಸಲು ಮುಂದಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತು ಬಿಗ್‌'ಬ್ಯಾಶ್ ಲೀಗ್ ಮಾದರಿಯಲ್ಲಿ 8 ತಂಡಗಳನ್ನು ಒಳಗೊಂಡ ಟಿ20 ಟೂರ್ನಿ ಇದಾಗಿದೆ. ಈ ಮೂಲಕ ಅಂತರಾಷ್ಟ್ರೀಯ ಹೂಡಿಕೆದಾರರನ್ನು ಎದುರು ನೋಡುತ್ತಿರುವುದಾಗಿ ಸಿಎಸ್‌'ಎ ಅಧ್ಯಕ್ಷ ಹರೂನ್ ಲಾರ್ಗಟ್ ಹೇಳಿದ್ದಾರೆ.

ಪ್ರಸಕ್ತ ವರ್ಷದ ಅಂತ್ಯದ ವೇಳೆಗೆ ಈ ಲೀಗ್ ಆರಂಭಿಸುವ ಯೋಜನೆ ರೂಪಿಸಲಾಗಿದೆ. ಹೂಡಿಕೆದಾರರು ಫ್ರಾಂಚೈಸಿಗಳನ್ನು ಖರೀದಿಸಲು ಮಾರ್ಚ್ 3 ಕೊನೆಯ ದಿನ. ಟೂರ್ನಿಯಲ್ಲಿ ದ.ಆಫ್ರಿಕಾ ತಂಡದ ಆಟಗಾರರು ಮತ್ತು ಇತರೆ ದೇಶದ ಸ್ಟಾರ್ ಆಟಗಾರರು ಆಡಲಿದ್ದಾರೆ ಎಂದು ಲಾರ್ಗಟ್ ಸುಳಿವು ನೀಡಿದ್ದಾರೆ.

click me!