ಹೊಸ ವಿವಾದದಲ್ಲಿ ಸಿಲುಕಿಕೊಂಡ ವಿರೇಂದ್ರ ಸೆಹ್ವಾಗ್

By Web DeskFirst Published Aug 7, 2018, 12:29 PM IST
Highlights

ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ವಿರೇಂದ್ರ ಸೆಹ್ವಾಗ್ ಟ್ವಿಟರ್ ಮೂಲಕ ಅಬ್ಬರಿಸುತ್ತಿದ್ದಾರೆ. ಜೊತೆಗೆ ಹಲವು ಬಾರಿ ವಿವಾದಕ್ಕೂ  ಕಾರಣವಾಗಿದೆ. ಇದೀಗ ಸೆಹ್ವಾಗ್ ಹೊಸ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಏನಿದು ವಿವಾದ? ಇಲ್ಲಿದೆ
 

ನವದೆಹಲಿ(ಆ.07): ಸಾಮಾಜಿಕ ಜಾಲತಾಣದಲ್ಲಿ ಬೌಂಡರಿ ಸಿಕ್ಸರ್ ಸಿಡಿಸುತ್ತಿದ್ದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಇದೀಗ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಈ ಬಾರಿ ಸೆಹ್ವಾಗ್ ವಿವಾದಕ್ಕೆ ಕಾರಣವಾಗಿದ್ದು ದೆಹಲಿ ಕ್ರಿಕೆಟ್ ಸಂಸ್ಥೆಯ ಸಲಹಾ ಸಮಿತಿ ನೇಮಕ ವಿಚಾರದಲ್ಲಿ.

ದೆಹಲಿ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯ ಸಲಹಾ ಸಮಿತಿಗೆ ನೇಮಕಗೊಂಡ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸ್ವಹಿತಾಸಕ್ತಿ ವಿವಾದವನ್ನು ಮೈಮೇಲೆ ಎಳೆದುಕೊಂಡಂತಿದೆ. ಡಿಡಿಸಿಎನ ಕಿರಿಯರ ತಂಡದ ಆಯ್ಕೆ ಸಮಿತಿಗೆ ಸದಸ್ಯರ ನೇಮಕಾತಿ ನಡೆದಿದ್ದು, ಸೆಹ್ವಾಗ್‌ರ ಸೋದರ ಸಂಬಂಧಿ
ಮಯಾಂಕ್ ತೆಹ್ಲಾನ್ ಸಮಿತಿಯ ಭಾಗವಾಗಿದ್ದಾರೆ. 

ಆಯ್ಕೆ ಸಮಿತಿಗೆ ನೇಮಕಗೊಂಡಿರುವ ಸದಸ್ಯರನ್ನು ಸ್ವತಃ  ಸೆಹ್ವಾಗ್ ಸಂದರ್ಶಿಸಿದ್ದರು ಎನ್ನಲಾಗಿದೆ. ಈ ಬೆಳವಣಿಗೆ ದೆಹಲಿ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಯಾಂಕ್ ದೆಹಲಿ ಪರ 27 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದರು. 2008ರ ಐಪಿಎಲ್‌ನಲ್ಲಿ ಸೆಹ್ವಾಗ್ ನಾಯಕತ್ವದ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿದ್ದರು.

click me!