110 ದಿನದ ಪ್ರಯಾಣ ಭತ್ಯೆ 53 ಲಕ್ಷ -ಬೆಚ್ಚಿ ಬಿದ್ದ ಬಿಸಿಸಿಐ ಸಿಒಎ

 |  First Published Jun 22, 2018, 4:12 PM IST

ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐನಲ್ಲಿ ಹಣ ದುರುಪಯೋಗ ಆರೋಪ ಇಂದು ನಿನ್ನೆಯದಲ್ಲ. ಇದೀಗ ಬಿಸಿಸಿಐ ಕಾರ್ಯದರ್ಶಿ ಮೇಲೆ ಹಣ ದುರಪಯೋಗ ಆರೋಪ ಕೇಳಿಬಂದಿದೆ. ಕೇವಲ ಪ್ರಯಾಣಕ್ಕಾಗಿಯೇ ಬಿಸಿಸಿಐ ಕಾರ್ಯದರ್ಶಿ 53 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರ? ಇಲ್ಲಿದೆ ವಿವರ
 


ಮುಂಬೈ(ಜೂ.22): ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಬ್ ಚೌಧರಿ ಪ್ರಯಾಣ ಭತ್ಯೆ ನೋಡಿದ ಬಿಸಿಸಿಐ ಸಿಒಎ ವಿನೋದ್ ರೈ ಬೆಚ್ಚಿ ಬಿದ್ದಿದ್ದಾರೆ.  169 ದಿನದ ಪ್ರಯಾಣಕ್ಕಾಗಿ  ಅಮಿತಾಬ್ ಚೌಧರಿ ಬರೋಬ್ಬರಿ 53 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಹೀಗಾಗಿ ದುಬಾರಿ ಮೊತ್ತದ ಕುರಿತು ಸುಪ್ರೀಂ ಕೋರ್ಚ್ ನೆಮಿಸಿದ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರೈ ಪ್ರಶ್ನಿಸಿದ್ದಾರೆ.

ಬಿಸಿಸಿಐ ಕಾರ್ಯದರ್ಶಿಯ ಪ್ರಯಾಣದ ವೆಚ್ಚ ನಿಗಧಿತ ಪ್ರಯಾಣ ಭತ್ಯೆಕ್ಕಿಂತ ಹೆಚ್ಚಾಗಿದೆ. ಇಷ್ಟೇ ಅಲ್ಲ ಭೂತಾನ್ ಪ್ರವಾಸ ಸೇರಿದಂತೆ ಹಲವು ದುಬಾರಿ ವೆಚ್ಚದ ಸಂಬಂಧ ಕಾರ್ಯದರ್ಶಿ ಯಾವುದೇ ಅನುಮತಿ ಪಡೆದಿಲ್ಲ. ಹೀಗಾಗಿ ವಿನೋದ್ ರೈ ಸಂಪೂರ್ಣ ಲೆಕ್ಕ ಕೇಳಿದ್ದಾರೆ.  

Latest Videos

undefined

169 ದಿನದ ಕಾಲಾವಧಿಯಲ್ಲಿ ಚೌಧರಿ 110 ದಿನ ಬಿಸಿಸಿಐ ಕಾರ್ಯಚಟುವಟಿಕೆಗಾಗಿ ಪ್ರಯಾಣ ಮಾಡಿದ್ದಾರೆ. ಅದರಲ್ಲಿ 32 ದಿನ ವಿದೇಶಿ ಪ್ರವಾಸ ಕೈಗೊಂಡಿದ್ದಾರೆ. ಬಿಸಿಸಿಐ ನಿಮಯದ ಪ್ರಕಾರ ಪದಾಧಿಕಾರಿಗಳಿಗೆ ವಿದೇಶಿ ಪ್ರಯಾಣದಲ್ಲಿ ದಿನಭತ್ಯೆಯಾಗಿ 51,000 ರೂಪಾಯಿ ಹಾಗು ಭಾರತದಲ್ಲಿ ದಿನಭತ್ಯೆ 30,000 ರೂಪಾಯಿ ನೀಡಲಾಗುತ್ತೆ. ಆದರೆ ಚೌಧರಿ ಗರಿಷ್ಠ ಹಣವನ್ನ ಖರ್ಚು ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಜುಲೈ 4 ರೊಳಗೆ ಅಮಿತಾಬ್ ಚೌಧರಿ ಉತ್ತರ ನೀಡಬೇಕು ಎಂದು ಬಿಸಿಸಿಐ ಸಿಒಎ ಸೂಚಿಸಿದ್ದಾರೆ. ಇಷ್ಟೇ ಅಲ್ಲ ಪ್ರತಿ ಪ್ರಯಾಣದ ಲೆಕ್ಕ ನೀಡುವಂತೆ ಸೂಚಿಸಿದ್ದಾರೆ.

click me!