
ನವದೆಹಲಿ(ಫೆ.20): ಆಸ್ಟ್ರೇಲಿಯಾದ ಕ್ರಿಸ್ ಲಿನ್, 11ನೇ ಆವೃತ್ತಿ ಐಪಿಎಲ್ ವೇಳೆ ಕೋಲ್ಕತಾ ನೈಟ್‌ರೈಡರ್ಸ್ (ಕೆಕೆಆರ್) ತಂಡದ ನೇತೃತ್ವ ವಹಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳು ನಡೆದಿದ್ದ ಹರಾಜು ವೇಳೆ ಗೌತಮ್ ಗಂಭೀರ್, ಡೆಲ್ಲಿ ಡೇರ್'ಡೆವಿಲ್ಸ್ ಪಾಲಾಗಿದ್ದರು. ಇದರಿಂದ ಸದ್ಯ ಕೆಕೆಆರ್'ನ ನಾಯಕ ಸ್ಥಾನ ಖಾಲಿಯಿದೆ.
ಇತ್ತೀಚೆಗೆ ಕೆಕೆಆರ್‌ನ ಕೋಚ್ ಜಾಕ್ ಕಾಲೀಸ್ ಸಹ ₹9.6 ಕೋಟಿ ಕೊಟ್ಟು ಖರೀದಿಸಿದ್ದ ಲಿನ್ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಲಿನ್, ತಂಡದಲ್ಲಿ ಸಾಕಷ್ಟು ಅನುಭವಿ ಆಟಗಾರರಿದ್ದಾರೆ. ಕೆಲವರಂತೂ ಐಪಿಎಲ್'ನಲ್ಲಿ 10 ವರ್ಷ ಆಡಿದ ಆಟಗಾರರಿದ್ದಾರೆ. ಅವರ ಅನುಭವ ಕಡೆಗಣಿಸಲು ಸಾಧ್ಯವಿಲ್ಲ. ನನಗೆ ನಾಯಕನಾಗಲು ಅವಕಾಶ ಸಿಕ್ಕರೆ ಅದನ್ನು ಸದುಪಯೋಗಪಡಿಸಿಕೊಳ್ಳುವೆ. ನಾಯಕತ್ವವನ್ನು ಪ್ರೀತಿಸುತ್ತೇನೆ’ ಎಂದಿದ್ದಾರೆ.
ಕಳೆದ ಆವೃತ್ತಿಯಲ್ಲಿ ಲಿನ್ ಕೆಕೆಆರ್ ಪರ 180.98ರ ಸ್ಟ್ರೈಕ್ ರೇಟ್'ನಲ್ಲಿ ಲಿನ್ 295 ರನ್ ಚಚ್ಚಿ ಗಮನ ಸೆಳೆದಿದ್ದರು. ಸದ್ಯದಲ್ಲೇ ಕೆಕೆಆರ್ ತಂಡ ಹೊಸ ನಾಯಕನನ್ನು ಘೋಷಿಸುವ ಸಾಧ್ಯತೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.