
ಎರಡು ದಿನ ವಿಶ್ರಾಂತಿ ನಂತ್ರ ಭಾರತ-ನ್ಯೂಜಿಲೆಂಡ್ ಮತ್ತೊಂದು ಚುಟುಕು ಕದನವಾಡಲು ಮೈದಾನಕ್ಕಿಳಿಯುತ್ತಿವೆ. ಟೀಂ ಇಂಡಿಯಾ ವಿರುದ್ಧ ಸತತ ಐದು ಟಿ20 ಪಂದ್ಯ ಗೆದ್ದು ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿದ್ದ ಕಿವೀಸ್ಗೆ ಸೋಲಿನ ರುಚಿ ತೋರಿಸಿಯಾಗಿದೆ. ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ಪಂದ್ಯ ಗೆದ್ದಂತೆ ಚೊಚ್ಚಲ ಟಿ20 ಸರಣಿ ಗೆಲ್ಲಲು ಭಾರತೀಯರು ಎದುರು ನೋಡ್ತಿದ್ದಾರೆ. ಅಷ್ಟೇ ಅಲ್ಲ, ಈ ಪಂದ್ಯ ಗೆದ್ರೆ ಱಂಕಿಂಗ್ನಲ್ಲಿ ಟೀಂ ಇಂಡಿಯಾ 3ನೇ ಸ್ಥಾನಕ್ಕೇರಲಿದೆ. ಕೊನೆಯ ಪಂದ್ಯವನ್ನೂ ಗೆದ್ರೆ ನಂಬರ್ 2ಗೇರಲಿದೆ. ಹೀಗಾಗಿ ರಾಜ್ಕೋಟ್ನಲ್ಲಿ ಕಿವೀಸ್ ಕಿವಿ ಕಚ್ಚಲು ಕೊಹ್ಲಿ ಬಾಯ್ಸ್ ರೆಡಿಯಾಗಿದ್ದಾರೆ.
ಬಲಿಷ್ಠ ಟೀಂ ಇಂಡಿಯಾದಲ್ಲಿ ಆಗಲಿದೆ ಬದಲಾವಣೆ: ಮನೀಶ್ ಪಾಂಡೆಗೆ ಸಿಗಲಿದೆ ಚಾನ್ಸ್
10 ವರ್ಷಗಳಿಂದ ನ್ಯೂಜಿಲೆಂಡ್ ವಿರುದ್ಧ ಒಂದೇ ಒಂದು ಪಂದ್ಯ ಗೆಲ್ಲಲಾಗದೆ ಒದ್ದಾಡುತ್ತಿದ್ದ ಟೀಂ ಇಂಡಿಯಾ ಡೆಲ್ಲಿ ಗೆದ್ದು ಸೋಲಿನ ಸರಪಳಿಯಿಂದ ಹೊರಬಂದಿದೆ. ಡೆಲ್ಲಿ ಪಂದ್ಯದ ನಂತ್ರ ಭಾರತ ಇನ್ನಷ್ಟು ಬಲಿಷ್ಠವಾಗಿ ಕಾಣುತ್ತಿದೆ. ಬ್ಯಾಟ್ಸ್ಮನ್ಗಳು ರನ್ ಹೊಳೆಯನ್ನೇ ಹರಿಸಿದ್ದರು. ಟಾಪ್ ತ್ರಿ ಬ್ಯಾಟ್ಸ್ಮನ್ಗಳಿಂದಲೇ ಡೆಲ್ಲಿ ಪಂದ್ಯ ಗೆಲ್ಲಲು ಸಾಧ್ಯವಾಗಿದ್ದು. ಇಂದು ಸಹ ಅವರ ಮೇಲೆ ಭಾರೀ ನಿರೀಕ್ಷೆಗಳಿವೆ.
ಐವರು ಬ್ಯಾಟ್ಸ್'ಮನ್ಗಳು, ಇಬ್ಬರು ಆಲ್ರೌಂಡರ್ಸ್, ನಾಲ್ವರು ಬೌಲರ್ಗಳೊಂದಿಗೆ ಡೆಲ್ಲಿ ಮ್ಯಾಚ್ ಆಡಿದ್ದ ವಿರಾಟ್ ಕೊಹ್ಲಿ, ರಾಜ್ಕೋಟ್ನಲ್ಲಿ ಕಾಂಬಿನೇಷನ್ ಚೇಂಜ್ ಮಾಡಲಿದ್ದಾರೆ. ವಿದಾಯದ ಪಂದ್ಯ ಅಂತ ಆಶೀಶ್ ನೆಹ್ರಾಗೆ ಚಾನ್ಸ್ ಕೊಡಲಾಗಿತ್ತು. ಈಗ ನೆಹ್ರಾ ಬದಲಿಗೆ ಮತ್ತೊಬ್ಬ ಬ್ಯಾಟ್ಸ್ಮನ್ ನನ್ನ ತಂಡಕ್ಕೆ ಸೇರಿಸಿಕೊಳ್ಳಲಿದ್ದಾರೆ. ಕನ್ನಡಿಗ ಮನೀಶ್ ಪಾಂಡೆ ಕಮ್'ಬ್ಯಾಕ್ ಮಾಡಲಿದ್ದಾರೆ. ಶ್ರೇಯಸ್ ಅಯ್ಯರ್ ಸಹ ಟೀಮ್'ನಲ್ಲಿ ಇರುವುದರಿಂದ 4ನೇ ಕ್ರಮಾಂಕದಲ್ಲಿ ಯಾರು ಆಡ್ತಾರೆ ಅನ್ನೋದು ಸದ್ಯಕ್ಕಿರುವ ಕುತೂಹಲ.
ಇನ್ನು ಬೌಲರ್ಸ್ ಸಹ ಕಿವೀಸ್ ಬ್ಯಾಟ್ಸ್ಮನ್ಗಳನ್ನ ಕಟ್ಟಿಹಾಕಿದ್ದರು. ಹೀಗಾಗಿ ಟೀಂ ಇಂಡಿಯಾ ಸ್ವಲ್ಪ ರಿಲೀಫ್ ಆಗಿದೆ. ನೆಹ್ರಾ ರಿಟೈರ್ಡ್ ಆಗಿರೋದ್ರಿಂದ ಇಬ್ಬರು ಆಲ್ರೌಂಡರ್ಸ್ ಮತ್ತು ಮೂವರು ಬೌಲರ್ಗಳೊಂದಿಗೆ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಎಲ್ಲರೂ ತಮ್ಮತಮ್ಮ 4 ಓವರ್ಗಳ ಕೋಟ ಮುಗಿಸಬೇಕು. ಅದು ಶಿಸ್ತುಬದ್ಧ ಬೌಲಿಂಗ್ನಿಂದ. ಹೀಗಾಗಿ ರಾಜ್ಕೋಟ್ನಲ್ಲಿ ನಮ್ಮ ಬೌಲರ್ಸ್ ಸ್ವಲ್ಪ ಒತ್ತಡಕ್ಕೆ ಸಿಲುಕುವ ಸಾಧ್ಯತೆ ಇದೆ.
ಪುಟಿದೇಳಲು ಕಿವೀಸ್ ಸ್ಕೆಚ್: ನಂಬರ್ 1 ಸ್ಥಾನದ ಮೇಲೆ ಕಿವೀಸ್ ಕಣ್ಣು
ದಶಕಗಳ ಕಾಲ ಟಿ20ಯಲ್ಲಿ ಟೀಂ ಇಂಡಿಯಾ ವಿರುದ್ಧ ಡಾಮಿನೆಂಟ್ ಸಾಧಿಸಿದ್ದ ನ್ಯೂಜಿಲೆಂಡ್ ಡೆಲ್ಲಿಯಲ್ಲಿ ಸೋತು ಮಕಾಡೆ ಮಲಗಿದೆ. ಈಗ ಪುಟಿದೇಳಲು ಎದುರು ನೋಡ್ತಿದೆ. ಕಿವೀಸ್ ಒಂದಲ್ಲ ಎರಡಲ್ಲ ಮೂರು ಸೇಡು ತೀರಿಸಿಕೊಳ್ಳಲು ರೆಡಿಯಾಗಿದೆ.
ಏಕದಿನ ಸರಣಿ ಸೋಲು. ಮೊದಲ ಟಿ20ಯಲ್ಲಿ ಪರಾಭವ. ಱಂಕಿಂಗ್ನಲ್ಲಿ ಅಗ್ರಸ್ಥಾನದಿಂದ ಕೆಳಗಿಳಿಸಿದ ಸೇಡು. ಹೀಗೆ ಒಂದೇ ಗೆಲುವಿನಲ್ಲಿ ಮೂರು ಸೇಡು ತೀರಿಸಿಕೊಳ್ಳಲು ನ್ಯೂಜಿಲೆಂಡ್ ಸ್ಕೆಚ್ ಹಾಕಿದೆ. ರಾಜ್ಕೋಟ್'ನಲ್ಲಿ ಗೆದ್ರೆ ಮತ್ತೊಮ್ಮೆ ಅಗ್ರಸ್ಥಾನಕ್ಕೇರುವ ಚಾನ್ಸಸ್ ಇದೆ. ಹಾಗೆ ಸರಣಿ ಜೀವಂತವಾಗಿರಲಿದೆ. ಹೀಗಾಗಿ ರಾಜ್'ಕೋಟ್'ನಲ್ಲಿ ಯತಾಶಗತಾಯ ಗೆಲ್ಲಲು ನ್ಯೂಜಿಲೆಂಡ್ ಹೋರಾಟ ನಡೆಸಲಿದೆ.
ಸುಧಾರಿಸಬೇಕಿದೆ ಕಿವೀಸ್ ಫೀಲ್ಡಿಂಗ್
ನ್ಯೂಜಿಲೆಂಡ್ ಸೋಲಲು ಮುಖ್ಯ ಕಾರಣ ಕಳಪೆ ಫೀಲ್ಡಿಂಗ್. ಡೆಲ್ಲಿಯಲ್ಲಿ ಅಬ್ಬರಿಸಿದ ಶಿಖರ್ ಧವನ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ತಲಾ ಒಂದೊಂದು ಜೀವದಾನ ನೀಡಿದ್ದರು. ಇದರ ಲಾಭ ಪಡೆದುಕೊಂಡ ಈ ತ್ರಿಮೂರ್ತಿಗಳು ಅಬ್ಬರಿಸಿ ಬೊಬ್ಬಿರಿದಿದ್ದರು. ಹೀಗಾಗಿ ಇಂದು ಕಿವೀಸ್ ತನ್ನ ಫೀಲ್ಡಿಂಗ್ ಸುಧಾರಿಸಿಕೊಳ್ಳೊ ಅವಶ್ಯಕತೆ ಇದೆ. ಉಳಿದಂತೆ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ನ್ಯೂಜಿಲೆಂಡ್ ಸ್ಟ್ರಾಂಗ್ ಆಗಿಯೇ ಇದೆ.
ರಾಜ್'ಕೋಟ್'ನಲ್ಲೂ ಹರಿಯಲಿದೆ ರನ್ ಹೊಳೆ
ಡೆಲ್ಲಿಯಂತೆ ರಾಜ್ ಕೋಟ್'ನಲ್ಲೂ ರನ್ ಹೊಳೆ ಹರಿಯಲಿದೆ. ಪಿಚ್ ಬ್ಯಾಟ್ಸ್'ಮನ್'ಗಳಿಗೆ ಸ್ವರ್ಗವಾಗಿದ್ದು ಬೌಂಡ್ರಿ-ಸಿಕ್ಸರ್ಗಳು ಸುರಿಮಳೆಯಾಗಲಿವೆ. ಇಲ್ಲಿ ನಡೆದಿರುವ ಏಕೈಕ ಟಿ20 ಪಂದ್ಯವನ್ನ ಭಾರತ ಗೆದ್ದಿದೆ. 2013ರಲ್ಲಿ ಆಸ್ಟ್ರೇಲಿಯಾ 201 ರನ್ ಹೊಡೆದಿತ್ತು. ಭಾರತ ಇನ್ನು 2 ಬಾಲ್ ಬಾಕಿ ಇರುವಾಗ್ಲೇ ಗೆದ್ದಿತ್ತು. ಹೀಗಾಗಿ ಇಂದು ಸಹ ನಾವೇ ಫೇವರಿಟ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.