
ಏಷ್ಯನ್ ಗೇಮ್ಸ್‌ಗೆ (Asian Games 2026) ತೆರೆಬಿದ್ದಿದೆ. ಒಟ್ಟು 46 ದೇಶಗಳ ಭಾಗಿವಹಿಸಿ ಚಿನ್ನ, ಬೆಳ್ಳಿ, ಕಂಚು ಪದಕಗಳನ್ನ ಗೆದ್ದು ತಾವು ಪ್ರತಿನಿಧಿಸಿದ ದೇಶಗಳಲ್ಲಿ ಹೆಮ್ಮೆಯ ಗರಿಮೆಯನ್ನ ತಂದುಕೊಟ್ಟಿದ್ದಾರೆ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್‌ಗಳಲ್ಲಿ ಚಿನ್ನದ ಬೇಟೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಇರುತ್ತಿದ್ದ ಚೀನಾಗೆ ಆಘಾತ ಆಗಿದೆ. ಹಾಗಂತ ಚೀನಾ ಪದಕ ಗೆಲ್ಲೋದ್ರಲ್ಲಿ ಹಿಂದೆ ಬಿದ್ದಿಲ್ಲ. ಈಗಲೂ ಕೂಡ ಅಗ್ರಸ್ಥಾನದಲ್ಲಿಯೇ ಮುಂದುವರಿದಿದೆ. ಆದರೆ.. ಚೀನಾದ ಚಿನ್ನದ ಕೋಟೆಯಲ್ಲಿ ಬಿರುಕು ಮುಟ್ಟಿರೋದು ಕೂಡ ಅಷ್ಟೇ ಸತ್ಯ.
ಹೇಗೆ ಬಿರುಕು ಮೂಡಿದೆ ಅಂತಾ ನೋಡೋದಾದ್ರೆ.. ಚೀನಾ ಈ ಬಾರಿಯ ಕ್ರೀಡಾಕೂಟದಲ್ಲಿ 169 ಚಿನ್ನ ಸೇರಿ ಒಟ್ಟು 341 ಪದಕಗಳ ಬೇಟೆ ಆಡಿದೆ. ಈಗಲೂ ಕೂಡ ಪದಕಗಳ ಬೇಟೆಯಲ್ಲಿ ಮೊದಲ ಸ್ಥಾನದಲ್ಲಿಯೇ ಇದೆ. 2023 ಚೀನಾ 201 ಚಿನ್ನ ಸೇರಿ 383 ಪದಕಗಳನ್ನ ಗೆದ್ದುಕೊಂಡಿತ್ತು. ಇದೀಗ 2026ಕ್ಕೆ ಹೋಲಿಸಿದರೆ.. ಚೀನಾದ ಚಿನ್ನದ ಪದಕಗಳ ಸಂಖ್ಯೆ ತುಂಬಾನೇ ಕಡಿಮೆ ಆಗಿದೆ. ಕುಸಿತ ಕಂಡಿರುವ 42 ಪದಗಳಲ್ಲಿ 32 ಚಿನ್ನದ ಪದಕಗಳೇ ಆಗಿವೆ. ಇದು ಹಲವು ಪ್ರಶ್ನೆಗಳನ್ನ ಹುಟ್ಟು ಹಾಕಿದೆ. ಗೇಮ್ಸ್ ವೇಳೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ನೆಪದಲ್ಲಿ ಅನೇಕ ಸ್ಪರ್ಧೆಗಳಿಂದ ಬಹು ಬೇಗ ಹೊರಗೆ ಬಿದ್ದಿತು. ಅಂದರೆ ಚೀನಾದ ಹಿಂದಿನ ಪದಕಗಳ ಬೇಟೆಗೆ ಹೋಲಿಸಿದರೆ 32 ಚಿನ್ನದ ಪದಕಗಳ ಕುಸಿತವು ದೇಶಕ್ಕೆ ಸಮರ್ಥನೀಯವಲ್ಲ.
ಚೀನಾ ಕ್ರೀಡೆಯಲ್ಲಿ ಹಲವು ವರ್ಷಗಳಿಂದ ಪ್ರಾಭಲ್ಯ ಸಾಧಿಸಿದೆ. ಚೀನಾಗೆ ಹೆಚ್ಚು ನಿರೀಕ್ಷಿತ ಚಿನ್ನದ ಪದಕ ಯಾವುದೆಂದರೆ ಟೇಬಲ್ ಟೆನಿಸ್‌ನಲ್ಲಿ. ಪುರುಷರ ತಂಡವು ಹಲವು ವರ್ಷಗಳಿಂದ ಟೇಬಲ್ ಟೆನಿಸ್‌ನಲ್ಲಿ ಚಿನ್ನವನ್ನು ಗೆಲ್ಲುತ್ತಲೇ ಬಂದಿತ್ತು. ಈ ಬಾರಿ ಅದು ಸಾಧ್ಯವಾಗಲಿಲ್ಲ. ಅಂದರೆ ಬರೋಬ್ಬರಿ 36 ವರ್ಷಗಳಲ್ಲಿಯೇ ಮೊದಲ ಬಾರಿಗೆ ಚಿನಾ ಚಿನ್ನದ ಪದಕ ಗೆಲ್ಲುವಲ್ಲಿ ಸೋತಿದೆ.
ಇನ್ನೊಂದು ಬ್ಯಾಡ್ಮಿಂಟನ್. 52 ವರ್ಷಗಳಲ್ಲಿ ಮೊದಲ ಬಾರಿಗೆ ಚೀನಾ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪದಕ ಗೆಲ್ಲಲು ಆಗದೇ ನಿರಾಸೆ ಮೂಡಿಸಿದೆ. ಚೀನಾದವರು 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್‌ನಲ್ಲಿ 2 ಚಿನ್ನ, ಮೂರು 3 ಮತ್ತು 3 ಕಂಚಿನ ಪದಕಗಳನ್ನು ಮಾತ್ರ ಗೆದ್ದುಕೊಂಡಿದ್ದಾರೆ. ಇದು 2022ರ ಬಳಿಕ ನಡೆದ ಕ್ರೀಡಾಕೂಟದಲ್ಲಿ ಗೆದ್ದಿರುವ ಅತ್ಯಂತ ಕಡಿಮೆ ಪದಕಗಳು ಆಗಿವೆ.
ಅದೇ ರೀತಿ ಚೀನಾಗೆ ಮತ್ತೊಂದು ನಿರಾಸೆಯ ಸುದ್ದಿ ಅಂದರೆ ಅದು ವೇಟ್‌ಲಿಫ್ಟಿಂಗ್. ಅವರು ಉತ್ತರ ಕೊರಿಯಾಕ್ಕಿಂತ ಅಂಕಪಟ್ಟಿಯಲ್ಲಿ ಕೆಳಮಟ್ಟಕ್ಕೆ ಇಳಿದರು. ಸುಲಭವಾಗಿ ಗೆಲ್ಲಬಹುದಾಗಿದ್ದ ಸ್ಪರ್ಧೆಗಳಲ್ಲೂ ಕೈಚೆಲ್ಲಿ ಕೂತರು. ಇನ್ನು ಪುರುಷರ ಬ್ಯಾಸ್ಕೆಟ್‌ಬಾಲ್ ಸ್ಪರ್ಧೆಯಲ್ಲಿಯೂ ಕಂಚಿನ ಪದಕವನ್ನೂ ಗೆಲ್ಲಲಾಗದೇ ನಿರಾಸೆ ಮೂಡಿಸಿದರು.
ಇದೆಲ್ಲ ಗಮನಿಸಿದರೆ ಚೀನಾದ ಚಿನ್ನದ ಕೋಟೆ ಕುಸಿಯುತ್ತಿದೆ ಅನ್ನೋದ್ರಲ್ಲಿ ಯಾವುದೇ ಸಂದೇಹ ಇಲ್ಲ. ಯಾಕೆ ಚೀನಾ ಚಿನ್ನದ ಬೇಟೆಯಲ್ಲಿ ಹಿಂದೆ ಬಿತ್ತು ಎಂದು ಆತ್ಮಾವಲೋಕನ ಮಾಡಿಕೊಳ್ಳಲು ಇದು ಒಳ್ಳೆಯ ಸಮಯ ಎಂದು ಕ್ರೀಡಾ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.