ಚೆನ್ನೈ ಸೂಪರ್’ಕಿಂಗ್ಸ್ ಪ್ಲೇಯಿಂಗ್ XI ಹೀಗಿರಬಹುದೇ..?

Published : May 27, 2018, 05:09 PM ISTUpdated : May 27, 2018, 05:10 PM IST
ಚೆನ್ನೈ ಸೂಪರ್’ಕಿಂಗ್ಸ್ ಪ್ಲೇಯಿಂಗ್ XI ಹೀಗಿರಬಹುದೇ..?

ಸಾರಾಂಶ

ಸುಮಾರು 2 ತಿಂಗಳ ಐಪಿಎಲ್ ಹಬ್ಬಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಗ್ರೂಪ್ ಹಂತದಲ್ಲಿ ಅಗ್ರಸ್ಥಾನಕ್ಕೇರಿದ್ದ ತಂಡಗಳೇ ಪ್ರಶಸ್ತಿ ಸುತ್ತಿಗೂ ಲಗ್ಗೆಯಿಟ್ಟಿದ್ದು 2 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ 2016ರ ಚಾಂಪಿಯನ್ ಸನ್’ರೈಸರ್ಸ್ ಹೈದರಾಬಾದ್ ತಂಡಗಳಿಂದು ಮಂಬೈ ವಾಂಖೇಡೆ ತಂಡಗಳು ಮುಖಾಮುಖಿಯಾಗುತ್ತಿವೆ.  2 ವರ್ಷಗಳ ನಿಷೇಧದ ಬಳಿಕ ಐಪಿಎಲ್’ಗೆ ಭರ್ಜರಿಯಾಗಿ ಕಮ್’ಬ್ಯಾಕ್ ಮಾಡಿರುವ ಧೋನಿ ನೇತೃತ್ವದ ಚೆನ್ನೈ ಸೂಪರ್’ಕಿಂಗ್ಸ್ ಇದೀಗ ಮೂರನೇ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಫೈನಲ್ ಪಂದ್ಯದಲ್ಲಿ ಸಿಎಸ್’ಕೆ ಪಡೆ ಹೀಗಿರಬಹುದು...

ಬೆಂಗಳೂರು[ಮೇ.27]: ಸುಮಾರು 2 ತಿಂಗಳ ಐಪಿಎಲ್ ಹಬ್ಬಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಗ್ರೂಪ್ ಹಂತದಲ್ಲಿ ಅಗ್ರಸ್ಥಾನಕ್ಕೇರಿದ್ದ ತಂಡಗಳೇ ಪ್ರಶಸ್ತಿ ಸುತ್ತಿಗೂ ಲಗ್ಗೆಯಿಟ್ಟಿದ್ದು 2 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ 2016ರ ಚಾಂಪಿಯನ್ ಸನ್’ರೈಸರ್ಸ್ ಹೈದರಾಬಾದ್ ತಂಡಗಳಿಂದು ಮಂಬೈ ವಾಂಖೇಡೆ ತಂಡಗಳು ಮುಖಾಮುಖಿಯಾಗುತ್ತಿವೆ. 
2 ವರ್ಷಗಳ ನಿಷೇಧದ ಬಳಿಕ ಐಪಿಎಲ್’ಗೆ ಭರ್ಜರಿಯಾಗಿ ಕಮ್’ಬ್ಯಾಕ್ ಮಾಡಿರುವ ಧೋನಿ ನೇತೃತ್ವದ ಚೆನ್ನೈ ಸೂಪರ್’ಕಿಂಗ್ಸ್ ಇದೀಗ ಮೂರನೇ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಫೈನಲ್ ಪಂದ್ಯದಲ್ಲಿ ಸಿಎಸ್’ಕೆ ಪಡೆ ಹೀಗಿರಬಹುದು...
ಆರಂಭಿಕರಾಗಿ ವಾಟ್ಸನ್-ರಾಯುಡು:
ಇತ್ತೀಚಿನ ಕೆಲ ಪಂದ್ಯಗಳಲ್ಲಿ ಶೇನ್ ವಾಟ್ಸನ್ ವಿಫಲವಾಗಿದ್ದರೂ, ಫೈನಲ್’ನಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ. ಅಗತ್ಯಬಿದ್ದರೆ ವಾಟ್ಸನ್ ಬೌಲಿಂಗ್ ಕೂಡಾ ಮಾಡಬಲ್ಲರು. ಇವರಿಗೆ ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ತೋರುತ್ತಾ ಬಂದಿರುವ ಅಂಬಟಿ ರಾಯುಡು ಸಾಥ್ ನೀಡಲಿದ್ದಾರೆ.
ಬಲಿಷ್ಠ ಮಧ್ಯಮ ಕ್ರಮಾಂಕ:
ಸಿಎಸ್’ಕೆ ಬಲಿಷ್ಠ ಮಧ್ಯಮ ಕ್ರಮಾಂಕವನ್ನು ಹೊಂದಿದೆ. ಸುರೇಶ್ ರೈನಾ, ಫಾಪ್ ಡುಪ್ಲೆಸಿಸ್, ನಾಯಕ ಧೋನಿ ಅವರಂತಹ ಅನುಭವಿ ಆಟಗಾರರನ್ನು ಹೊಂದಿದೆ.ಅದರಲ್ಲೂ ಕಳೆದ ಪಂದ್ಯದಲ್ಲಿ ಏಕಾಂಕಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದ ಡುಪ್ಲೆಸಿಸ್ ಇಂದು ಅಂತಹದ್ದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಇನ್ನು ಧೋನಿ ಹಾಗೂ ರೈನಾ ಜತೆಯಾಟದ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಉಪಯುಕ್ತ ಆಲ್ರೌಂಡರ್: 
ಟಿ20 ಕ್ರಿಕೆಟ್’ನ ಶ್ರೇಷ್ಠ ಆಲ್ರೌಂಡರ್ ಎಂದೇ ಕರೆಸಿಕೊಳ್ಳುವ ಡ್ವೇನ್ ಬ್ರಾವೋ ಬಲ ಸಿಎಸ್’ಕೆಗಿದೆ. ಇವರಿಗೆ ಜಡೇಜಾ ಉತ್ತಮ ಸಾಥ್ ನೀಡಲು ಸಜ್ಜಾಗಿದ್ದಾರೆ.
ಚುರುಕಿನ ಬೌಲಿಂಗ್ ಪಡೆ: ಸಿಎಸ್’ಕೆ ತಂಡ ಉಳಿದ ವಿಭಾಗಗಳಿಗೆ ಹೋಲಿಸಿದರೆ ಬೌಲಿಂಗ್ ಪಡೆ ಕೊಂಚ ಮಂಕಾಗಿದೆ. ಲುಂಗಿಸನಿ ಎನ್ಜಿಡಿ ಮಾರಕ ದಾಳಿ ನಡೆಸುತ್ತಿದ್ದಾರೆ. ಆದರೆ  ಶಾರ್ದೂಲ್ ಠಾಕೂರ್ ದುಬಾರಿಯಾಗುತ್ತಿದ್ದಾರೆ. ದೀಪಕ್ ಚಾಹರ್ ಸ್ವಿಂಗ್ ಬೌಲಿಂಗ್ ಮೂಲಕ ಗಮನಸೆಳೆದಿದ್ದಾರೆ. ಹರ್ಭಜನ್ ಸಿಂಗ್ ಅನುಭವ ಫೈನಲ್ ಪಂದ್ಯಕ್ಕೆ ನೆರವಾಗಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರೀನ್‌ನಿಂದ ಮೊರಿಸ್‌ವರೆಗೆ, ಐಪಿಎಲ್‌ ಮಿನಿ ಹರಾಜಿನ ಅತ್ಯಂತ ದುಬಾರಿ ಪ್ಲೇಯರ್ಸ್‌!
ಕಡಿಮೆ ಮೊತ್ತಕ್ಕೆ ಆರ್‌ಸಿಬಿ ತೆಕ್ಕೆಗೆ ಜಾರಿದ ಸ್ಟಾರ್ ಆಲ್ರೌಂಡರ್! ಹಾಲಿ ಚಾಂಪಿಯನ್ ಬೆಂಗಳೂರು ತಂಡಕ್ಕೆ ಜಾಕ್‌ಪಾಟ್