ಮರಿನ್ ಮಣಿಸಿ ಮುಂಬೈಗೆ ಮುನ್ನಡೆ ತಂದ ಸಂಗ್

Published : Jan 04, 2017, 04:39 PM ISTUpdated : Apr 11, 2018, 12:49 PM IST
ಮರಿನ್ ಮಣಿಸಿ ಮುಂಬೈಗೆ ಮುನ್ನಡೆ ತಂದ ಸಂಗ್

ಸಾರಾಂಶ

ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಮುಂಬೈನ ಸಂಗ್ ಜೀ 11-7, 7-11, 14-12 ಗೇಮ್‌'ಗಳಿಂದ ಹೈದರಾಬಾದ್ ತಂಡದ ಮರಿನ್ ಅವರನ್ನು ಮಣಿಸಿದರು.

ಮುಂಬೈ(ಜ.04): ಆತಿಥೇಯ ಮುಂಬೈ ರಾಕೆಟ್ಸ್ ತಂಡದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸಂಗ್ ಜೀ ಹ್ಯೂನ್, 2ನೇ ಆವೃತ್ತಿಯ ಪೀಮಿಯರ್ ಬ್ಯಾಡ್ಮಿಂಟನ್ ಲೀಗ್‌'ನಲ್ಲಿ ಹೈದರಾಬಾದ್ ಹಂಟರ್ಸ್‌'ನ ಕರೋಲಿನಾ ಮರಿನ್ ಎದುರು ಜಯಗಳಿಸುವ ಮೂಲಕ ಮುಂಬೈ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟಿದ್ದಾರೆ.

ಇಲ್ಲಿನ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಮುಂಬೈನ ಸಂಗ್ ಜೀ 11-7, 7-11, 14-12 ಗೇಮ್‌'ಗಳಿಂದ ಹೈದರಾಬಾದ್ ತಂಡದ ಮರಿನ್ ಅವರನ್ನು ಮಣಿಸಿದರು.

ಪಂದ್ಯದ ಆರಂಭದಿಂದಲೂ ನಡೆದ ರೋಚಕ ಕಾದಾಟದಲ್ಲಿ ಮುಂಬೈ ಆಟಗಾರ್ತಿ ಸಂಗ್ ಅಂಕಗಳಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು. ಮೊದಲ ಗೇಮ್‌'ನಲ್ಲಿ 4 ಪಾಯಿಂಟ್ಸ್ ಮುನ್ನಡೆ ಸಾಧಿಸಿದ ಸಂಗ್ ಅವರಿಗೆ, ಮರಿನ್ 2ನೇ ಗೇಮ್‌'ನಲ್ಲಿ ಮುನ್ನಡೆ ಸಾಧಿಸಿ ತಿರುಗೇಟು ನೀಡಿದರು. ಆದರೆ ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌'ನಲ್ಲಿ ಇಬ್ಬರು ಆಟಗಾರ್ತಿಯರು ಪ್ರಬಲ ಹೋರಾಟ ನಡೆಸಿದರು. ಆದರೆ ಅಂತಿಮವಾಗಿ ಸಂಗ್ 2 ಪಾಯಿಂಟ್ಸ್‌ಗಳ ಮುನ್ನಡೆಯಲ್ಲಿ ಪಂದ್ಯ ಜಯಿಸಿದರು.

ಇದಕ್ಕೂ ಮುನ್ನ ನಡೆದ ಪುರುಷರ ವಿಭಾಗದ ಡಬಲ್ಸ್ ಪಂದ್ಯದಲ್ಲಿ ಮುಂಬೈನ ಡೇ ಮತ್ತು ನಿಪ್ಟ್‌ಫಾನ್ ಜೋಡಿ 11-9, 11-5 ಗೇಮ್‌'ಗಳಿಂದ ಹೈದರಾಬಾದ್ ಜೋಡಿಯ ಎದುರು ಗೆಲುವು ಪಡೆದಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯ್‌ ಹಜಾರೆ ಟೂರ್ನಿ: ಕೇರಳ ಎದುರು ಕರ್ನಾಟಕಕ್ಕೆ 2ನೇ ಜಯದ ಗುರಿ!
ಕ್ರೀಡಾ ಕ್ಷೇತ್ರದಲ್ಲಿದ್ದ ಪಕ್ಷಪಾತಕ್ಕೆ ಹಿಂದೆಯೇ ಕಡಿವಾಣ : ಪ್ರಧಾನಿ ನರೇಂದ್ರ ಮೋದಿ